More

    ಮಾಸ್ಕ್ ಧರಿಸಿ ಕೃಷಿಯಲ್ಲಿ ತೊಡಗಿ

    ತಲ್ಲೂರ: ನಿತ್ಯ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವ ಕೃಷಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿ ಎ.ಬಿ. ವಾಲಿಕರ ಹೇಳಿದರು.

    ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಗಾಳಿ-ಮಳೆಗೆ ಗೋವಿನ ಜೋಳ ನೆಲಕಚ್ಚಿದೆ. ಅದನ್ನು ಪರಿಶೀಲಿಸಿ ರೈತರಿಗೆ ಮಾಸ್ಕ್ ವಿತರಿಸಿ ಮಾತನಾಡಿದರು. ಕರೊನಾ ವೈರಸ್ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳನ್ನು ಹಾಗೂ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರು. ಗ್ರಾಪಂ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ ಮಾತನಾಡಿ, ಕರೊನಾ ಹರಡದಂತೆ ಜನರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು. ಗ್ರಾಮ ಲೆಕ್ಕಾಧಿಕಾರಿ ಎ.ಬಿ. ಹುಣಶ್ಯಾಳ, ಆತ್ಮ ಯೋಜನೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಉಮೇಶ ಯರಗಟ್ಟಿ, ದಾವಲಸಾಬ ಚಪ್ಟಿ, ಈರಪ್ಪ ಕಾಶಪ್ಪನವರ, ರೈತ ಅನುವುಗಾರ ಗೌಡಪ್ಪ ಪಾಟೀಲ, ವಿಜಯ ಉಪ್ಪಿನ, ಬಸವಂತಪ್ಪ ಹೋಳಿ, ಕಲ್ಲಪ್ಪ ಬೆನಕಟ್ಟಿ, ನಿರಂಜನ ಗೌಡರ, ಬಸವರಾಜ ಅಣ್ಣಿಗೇರಿ, ಸಚಿನ ಹೋಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts