More

    ಸತತ 6ನೇ ದಿನವೂ ಷೇರು ಕುಸಿತ: ಸೆನ್ಸೆಕ್ಸ್​ 901, ನಿಫ್ಟಿ 264 ಅಂಕ ಕುಸಿತದೊಂದಿಗೆ ವಹಿವಾಟು ಅಂತ್ಯ

    ನವದೆಹಲಿ: ಭಾರತದ ಷೇರು ಮಾರುಕಟ್ಟೆಯೂ ಗುರುವಾರವೂ ತನ್ನ ಕುಸಿತವನ್ನು ಮುಂದುವರಿಸಿತು. ದಿನದ ಆರಂಭದಲ್ಲೇ ಭಾರೀ ಕುಸಿತಕಂಡ ಸೂಚ್ಯಂಕವೂ ದಿನದ ಕೊನೆಯವರೆಗೂ ಮೇಲೆ ಏಳಲೇ ಇಲ್ಲ. ಗುರುವಾರ ವಹಿವಾಟಿನ ದಿನದ ಕೊನೆಯಲ್ಲಿ ಬಿಎಸ್ಇ ಸೆನ್ಸೆಕ್ಸ್ 901 ಅಂಕ ಕುಸಿದು 63,148 ಕ್ಕೆ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ 264 ಅಂಕ ಕುಸಿತದೊಂದಿಗೆ 18,857ಕ್ಕೆ ತಲುಪಿತು. ಈ ಮೂಲಕ ಮಾರುಕಟ್ಟೆಯು ಸತತ 6ನೇ ದಿನವೂ ಕುಸಿತ ಕಂಡಿದೆ.

    ಹೆಚ್ಚು ದೇಶೀಯ ಕೇಂದ್ರಿತವಾಗಿರುವ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಚಂಚಲತೆ ಹೆಚ್ಚಾದಂತೆ ಮಾರಾಟದ ಒತ್ತಡ ಅನುಭವಿಸಿದವು. ವಿಶಾಲ ಮಾರುಕಟ್ಟೆಯಲ್ಲಿ ಈ ದಿನದ ವಹಿವಾಟಿನಲ್ಲಿ ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ. 1ಕ್ಕಿಂತ ಹೆಚ್ಚು ಇಳಿಕೆ ಕಂಡರೆ, ಬಿಎಸ್‌ಇ ಸ್ಮಾಲ್‌ಕ್ಯಾಪ್ ಶೇ. 0.19 ರಷ್ಟು ಇಳಿಕೆ ಕಂಡಿತು. ನಿಫ್ಟಿ ಐಟಿ, ನಿಫ್ಟಿ ಬ್ಯಾಂಕ್​ ಸೇರಿದಂತೆ ಎಲ್ಲ ಸೂಚ್ಯಂಕಗಳು ಶೇ. 1ಕ್ಕಿಂತ ಹೆಚ್ಚು ಕುಸಿತದೊಂದಿಗೆ ದಿನದ ವಹಿವಾಟನ್ನು ಮುಗಿಸಿದವು.

    ಒಂದೆಡೆ ಇಸ್ರೇಲ್​-ಹಮಾಸ್​ ನಡುವಿನ ನಿರಂತರ ಯುದ್ಧದ ಆತಂಕ ಮತ್ತು ಅಮೆರಿಕದ ಬಾಂಡ್​ ಇಳುವರಿಯಲ್ಲಿನ ಏರಿಳಿತಗಳು ಹೂಡಿಕೆದಾರರನ್ನು ಆತಂಕಕ್ಕೆ ದೂಡಿರುವ ಪರಿಣಾಮ ಮಾರುಕಟ್ಟೆಯಲ್ಲಿ ಈ ದಿನವೂ ಏರಿಳಿತ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ನಿಧಾನಗತಿಯ ಪ್ರವೃತ್ತಿಗಳ ಜೊತೆಗೆ ಆಟೋ ಮೊಬೈಲ್​, ಹಣಕಾಸು ಮತ್ತು ಇಂಧನ ಷೇರುಗಳು ಆಳವಾದ ನಷ್ಟ ಅನುಭವಿಸಿದವು.

    ಶೇ. 6ರಷ್ಟು ಕುಸಿತದೊಂದಿಗೆ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಕಂಪನಿ ಅತಿದೊಡ್ಡ ನಷ್ಟ ಅನುಭವಿಸಿತು. ಉಳಿದಂತೆ ಬಜಾಜ್​ ಫಿನ್ಸರ್ವ್​, ಏಷ್ಯನ್​ ಪೇಂಟ್ಸ್​, ನೇಸ್ಲೆ, ಜೆಎಸ್​ಡಬ್ಲ್ಯು ಸ್ಟೀಲ್​, ಟೈಟಾನ್​, ಎಚ್​ಡಿಎಫ್​ಸಿ ಬ್ಯಾಂಕ್​, ಟೆಕ್​ ಮಹೀಂದ್ರಾ, ಟಾಟಾ ಮೋಟಾರ್ಸ್​ ಮತ್ತು ಲಾರ್ಸನ್​ ಆ್ಯಂಡ್​ ಟೂಬ್ರೊ ಕಂಪನಿಗಳು ಸಹ ನಷ್ಟದ ಹಾದಿಯನ್ನು ಹಿಡಿದವು.

    ಇದಕ್ಕೆ ವಿರುದ್ಧವಾಗಿ ಆ್ಯಕ್ಸಿಸ್​ ಬ್ಯಾಂಕ್​, ಐಟಿಸಿ, ಎಚ್​​ಸಿಎಲ್​ ಟೆಕ್ನಾಲಜೀಸ್​, ಎನ್​ಟಿಪಿಸಿ ಮತ್ತು ಇಂಡಸ್​ಲ್ಯಾಂಡ್​ ಬ್ಯಾಂಕ್​ ಲಾಭಗಳಿಸಿದವು. ಈ ಭಾರೀ ಕುಸಿತದಲ್ಲೂ ಅದಾನಿ ಪವರ್ ಷೇರು ಮಾರುಕಟ್ಟೆಯಲ್ಲಿ 17 ರೂ. ಏರಿಕೆ ಕಂಡು 330 ರೂ. ಮಟ್ಟಕ್ಕೆ ತಲುಪಿತು. ಅದಾನಿ ಪೋರ್ಟ್ಸ್‌ ಷೇರುಗಳು ಶೇ. 2.65ರಷ್ಟು ಏರಿಕೆ ದಾಖಲಿಸಿತು. ನಿಫ್ಟಿ ಐಟಿ, ನಿಫ್ಟಿ ಬ್ಯಾಂಕ್​ ಸೇರಿದಂತೆ ಎಲ್ಲ ಸೂಚ್ಯಂಕಗಳು ಶೇ. 1ಕ್ಕಿಂತ ಹೆಚ್ಚು ಕುಸಿತದೊಂದಿಗೆ ದಿನದ ವಹಿವಾಟನ್ನು ಮುಗಿಸಿದವು.

    ಷೇರು ಮಾರುಕಟ್ಟೆಯ ಆರಂಭ ಹೇಗಿತ್ತು?
    ಇಂದಿನ ವಹಿವಾಟಿನಲ್ಲಿ, ಬಿಎಸ್‌ಇ ಸೆನ್ಸೆಕ್ಸ್ 274.90 ಪಾಯಿಂಟ್‌ಗಳು ಅಥವಾ ಶೇಕಡ 0.43 ರಷ್ಟು ಕುಸಿತದೊಂದಿಗೆ 63,774 ಮಟ್ಟದಲ್ಲಿ ಪ್ರಾರಂಭವಾಯಿತು. ಇದಲ್ಲದೇ ಎನ್‌ಎಸ್‌ಇ ನಿಫ್ಟಿ 94.90 ಪಾಯಿಂಟ್‌ ಅಥವಾ ಶೇಕಡ 0.50 ಕುಸಿತದೊಂದಿಗೆ 19,027 ಮಟ್ಟದಲ್ಲಿ ವಹಿವಾಟು ಆರಂಭಿಸಿತು. (ಏಜೆನ್ಸೀಸ್​)

    ಹುಲಿ ಉಗುರು ಅಷ್ಟು ಪವರ್​​ಫುಲ್ಲಾ?; ಯಾಕೆ ಧರಿಸುತ್ತಾರೆ ಗೊತ್ತಾ?

    ಹುಲಿ ಉಗುರು ಪ್ರಕರಣ; ದರ್ಶನ್​ ವಿರುದ್ಧ ದೂರು ನೀಡಿದ ಶಿವಕುಮಾರ್​ಗೆ ಕೊಲೆ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts