More

    ಮಾರುಕಟ್ಟೆ ವ್ಯವಸ್ಥೆ ಹೆಚ್ಚಳಕ್ಕೆ ರೈತ ಆಸಕ್ತ ಗುಂಪು ಸಹಕಾರಿ

    ಹರಪನಹಳ್ಳಿ: ರೇಷ್ಮೆ ಗೂಡು ಉತ್ಪಾದನೆ ಹೆಚ್ಚಳ, ಮಾರುಕಟ್ಟೆ ವ್ಯವಸ್ಥೆ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ರೈತ ಆಸಕ್ತ ಗುಂಪುಗಳನ್ನು ರಚಿಸಲಾಗುತ್ತದೆ ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ವಿ.ಸುದೀರ್ ಹೇಳಿದರು.


    ತಾಲೂಕಿನ ಗೋವೆರಹಳ್ಳಿ ಗ್ರಾಮದಲ್ಲಿ ರೇಷ್ಮೆ ಇಲಾಖೆ, ರೈತ ಆಸಕ್ತ ಸಿಆರ್‌ಸಿ ಸಹಯೋಗದಲ್ಲಿ ರೇಷ್ಮೆ ಉತ್ಪಾದಕ ಸಂಸ್ಥೆ ಯೋಜನೆಯ ಅಡಿ ಸೋಮವಾರ ಹಮ್ಮಿಕೊಂಡಿದ್ದ ರೈತ ಆಸಕ್ತ ಗುಂಪುಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

    ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಗೆಟ್ಟ ರೇಷ್ಮೆ ಬೆಳೆಗಾರ


    ರೈತರು ಚಾಕಿ ಕೇಂದ್ರದ ಮೂಲಕ ಅತ್ಯುತ್ತಮ ಗುಣಮಟ್ಟದ ಹುಳುಗಳನ್ನು ಪಡೆಯಬೇಕು. ನುರಿತ ವ್ಯಕ್ತಿಗಳಿಂದ ಸಲಹೆಗಳನ್ನು ತಿಳಿದುಕೊಳ್ಳಬೇಕಿದ್ದು, ಇದರಿಂದ ಉತ್ತಮವಾದ ರೇಷ್ಮೆ ಗೂಡುಗಳನ್ನು ಬೆಳೆಯುವುದಕ್ಕೆ ಸಹಾಯವಾಗುತ್ತದೆ. ರೈತರಿಗೆ ನೂತನ ತಾಂತ್ರಿಕತೆ ಹಾಗೂ ಕೌಶಲ ಅಭಿವೃದ್ಧಿ ತರಬೇತಿ, ಜಾಗೃತಿ ಮೂಡಿಸುವುದು, ಮಧ್ಯವರ್ತಿಗಳ ಹಾವಳಿ ತಡೆಯುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.


    ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿ ಎಂ.ಡಿ.ಲಕ್ಷ್ಮೀನಾರಾಯಣ, ಅಧಿಕಾರಿಗಳಾದ ಕೆ. ನಾಗರಾಜ್, ಎಸ್.ಕುಮಾರಸ್ವಾಮಿ, ಡಾ. ಜೆ.ಸೋಮಿರೆಡ್ಡಿ, ಎಂ.ಆರ್.ಸುಬ್ರಮಣಂ. ನಾಗರಾಜಗೌಡ, ಮೇಗೇರಿ ಕರಿಬಸಪ್ಪ, ಎಂ.ವಿ.ಕಿರಣ್, ಮುಖಂಡ ಕೋಟ್ರೇಶ್ ಹಿರೇಮಠ, ಗ್ರಾಮದ ರೈತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts