ನವದೆಹಲಿ: ಸೋಷಿಯಲ್ ಮೀಡಿಯಾ ಜಗತ್ತಿನ ಮುಂಚೂಣಿ ಆ್ಯಪ್ಗಳಲ್ಲಿ ಒಂದಾಗಿರುವ ಫೇಸ್ಬುಕ್ನ ಸಹ-ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ತಮ್ಮ ಮನೆಯೊಂದನ್ನು ಮಾರಾಟ ಮಾಡಿದ್ದಾರೆ. ವಿಶೇಷವೆಂದರೆ ಆ ನಗರದಲ್ಲೇ ಇದು ಈ ವರ್ಷದ ಅತ್ಯಧಿಕ ಬೆಲೆಯ ಮನೆ ಮಾರಾಟ ಎಂದು ಹೇಳಲಾಗಿದೆ.
ಮೆಟಾ ಕಂಪನಿಯ ಸಿಇಒ ಆಗಿರುವ ಮಾರ್ಕ್ ಜುಕರ್ಬರ್ಗ್ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಈ ಮನೆಯನ್ನು ಸುಮಾರು 250 ಕೋಟಿ ರೂ. (31 ಮಿಲಿಯನ್ ಡಾಲರ್)ಗೆ ಮಾರಾಟ ಮಾಡಲಾಗಿದೆ. ಇದು ಸ್ಯಾನ್ಪ್ರಾನ್ಸಿಸ್ಕೊದಲ್ಲಿ ಈ ವರ್ಷದ ಅತಿ ದುಬಾರಿ ದರಕ್ಕೆ ಮಾರಾಟವಾದ ಮನೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಮಾರ್ಕ್ ಜುಕರ್ಬರ್ಗ್ ಈ ಮನೆಯನ್ನು 2012ರಲ್ಲಿ 80 ಕೋಟಿ ರೂ. (10 ಮಿಲಿಯನ್ ಡಾಲರ್) ಕೊಟ್ಟು ಖರೀದಿಸಿದ್ದರು. ಏಳು ಸಾವಿರ ಚದರಡಿಯ ಈ ಮನೆ ಸ್ಯಾನ್ಫ್ರಾನ್ಸಿಸ್ಕೊದ ಲಿಬರ್ಟಿ ಹಿಲ್ನಲ್ಲಿದೆ. ಕಾಲು ಎಕರೆ ಜಾಗದಲ್ಲಿರುವ ಈ ಮನೆಯನ್ನು 1928ರಲ್ಲಿ ನಿರ್ಮಾಣ ಮಾಡಲಾಗಿತ್ತು.
ಆಸ್ಪತ್ರೇಲಿ ಬಿಸಿನೀರಿಲ್ಲ, ಊಟ ಸರಿ ಇಲ್ಲ ಎಂದು ಹೇಳಿ ವೈದ್ಯಕೀಯ ಪರೀಕ್ಷೆಗೆ ಸಹಕರಿಸದ ನವ್ಯಶ್ರೀ..
ಕೆಎಸ್ಆರ್ಟಿಸಿ ಆಸ್ಪತ್ರೆ ಖಾಸಗೀಕರಣಕ್ಕೆ ಸಂಸದರ ಒತ್ತಡ; ಸಾರಿಗೆ ನೌಕರರಿಂದ ತೀವ್ರ ಆಕ್ರೋಶ