More

    ಶ್ರದ್ಧೆ, ಸಮಯಪ್ರಜ್ಞೆ ಇದ್ದರೆ ಯಶಸ್ಸು ನಿಶ್ಚಿತ

    ಮರಿಯಮ್ಮನಹಳ್ಳಿ: ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಸಮಯಪ್ರಜ್ಞೆ ಇದ್ದರೆ ನಮ್ಮ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತೆ, ಡಾ. ಮಾತಾ ಮಂಜಮ್ಮ ಜೋಗತಿ ಹೇಳಿದರು.

    ಪಟ್ಟಣದ ದುರ್ಗದಾಸ್ ಕಲಾ ಮಂದಿರದಲ್ಲಿ ಮಂಗಳವಾರ ಗೀತಾಮೃತ ಕಲಾಟ್ರಸ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮನುಷ್ಯರಲ್ಲಿ ಸಣ್ಣವರು, ದೊಡ್ಡವರೆಂಬ ಬೇಧ-ಭಾವ ಇಲ್ಲದಿದ್ದರೆ ಒಬ್ಬರಿಗೊಬ್ಬರು ಆಸರೆಯಾಗಿರುತ್ತಾರೆ. ಕಲಾವಿದರು ಕಲೆಯ ಅಭ್ಯಾಸದೊಂದಿಗೆ ಅಧ್ಯಯನಶೀಲರೂ ಆಗಿರಬೇಕು. ಆಗ ಕಲೆಗೆ ಬೆಲೆ ಹೆಚ್ಚಾಗುತ್ತದೆ. ಮರಿಯಮ್ಮನಹಳ್ಳಿ ಕಲಾವಿದರ ತವರು ಎಂದರು.

    ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಬಿ.ಎಂ.ಎಸ್.ಮೃತ್ಯುಂಜಯಪ್ಪ ಮಾತನಾಡಿ, ಕರ್ನಾಟಕ ರಂಗಭೂಮಿಗೆ ಕಲಾವಿದ ದಿ.ದುರ್ಗದಾಸ್ ಅವರ ಕೊಡುಗೆ ಅಪಾರ. ಅವರ ಹೆಸರನ್ನೇ ಈ ರಂಗಮಂದಿರಕ್ಕೆ ಇಡಲಾಗಿದೆ. ಸಾಮಾಜಿಕ ಮೌಲ್ಯ, ಅಛಲವಾದ ಶ್ರದ್ಧೆ ಹೊಂದಿರುವವರು ಎಂತಹ ಬಲಾಢ್ಯರ ವಿರುದ್ಧವೂ ಹೋರಾಡಿ ಗೆಲುವು ಸಾಧಿಸಬಹುದು ಎಂಬ ಸಾರವೇ ಶಬರ ಶಂಕರ ವಿಲಾಸ ನಾಟಕ ದ ಧ್ಯೆಯ ಎಂದು ತಿಳಿಸಿದರು.

    ಗೀತಾಮೃತ ಧ್ಯಾನಮಂದಿರದ ಅಧ್ಯಕ್ಷ ಬಸವರಾಜ, ರಂಗಕರ್ಮಿ ಮಬ ಸೋಮಣ್ಣ, ಗೀತಾಮೃತ ಕಲಾ ಟ್ರಸ್ಟ್ ಅಧ್ಯಕ್ಷೆ ಜೆ.ನಂದಿನಿ, ಪಪಂ ಸದಸ್ಯ ಮಂಜುನಾಥ ಇತರರಿದ್ದರು. ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸುಗಮ ಸಂಗೀತ, ಭರತನಾಟ್ಯ, ಗಿಟಾರ್ ಕೀಬೋರ್ಡ್, ಜುಗಲ್ ಬಂದಿ ಕಾರ್ಯಕ್ರಮ ನಡೆದವು. ಜತೆಗೆ ವಿಶ್ವೇಶ್ವರ ಭಟ್ ವಿರಚಿತ, ಹ್ಯಾಟಿ ಮಂಜುನಾಥ ನಿರ್ದೇಶನದ ಶಬರ ಶಂಕರ ವಿಲಾಸ ನಾಟಕ ಪ್ರದರ್ಶಿಸಲಾಯಿತು. ಸರ್ದಾರ್ ಬಾರಿಗಿಡದ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts