More

    ಗಾಂಜಾ ಮಾರಾಟ, ನಾಲ್ವರ ಬಂಧನ

    ಬೆಳಗಾವಿ: ಗಾಂಜಾ ಮಾರಾಟಗಾರರ ವಿರುದ್ಧ ದಾಳಿ ಮುಂದುವರಿಸಿರುವ ಪೊಲೀಸರು, ಪ್ರತ್ಯೇಕ ಪ್ರಕರಣದಲ್ಲಿ ಸೋಮವಾರ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 1,120 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

    ನಗರದ ಖಂಜರ ಗಲ್ಲಿ ಸೇರಿದಂತೆ ವಿವಿಧ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದು, 620 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ನಗರದ ಬಾಗವಾನ ಗಲ್ಲಿಯ ಸಲೀಂ ಖಮರುದ್ದೀನ್ ಸೌದಾಗರ್ (46), ಕಾಕರ ಗಲ್ಲಿಯ ಇನಾಯತ್ ಶಬ್ಬೀರ್ ಧಾರವಾಡಕರ (21) ಬಂಧಿತರು. ಮಾರ್ಕೆಟ್ ಠಾಣೆಯ ಸಿಪಿಐ ಸಂಗಮೇಶ ಶಿವಯೋಗಿ, ಪಿಎಸ್‌ಐ ವಿಠ್ಠಲ ಹಾವಣ್ಣವರ, ಸಿಬ್ಬಂದಿ ಎಸ್.ಬಿ. ಖಾನಾಪುರೆ, ಎಲ್.ಎಸ್. ಕಡೋಲ್ಕರ,
    ಎನ್.ವೈ. ಮೈಲಾಕೆ, ಆಶೀರ ಜಮಾದಾರ, ಮಾರುತಿ ಚಾವಡಿ ದಾಳಿಯಲ್ಲಿ ಇದ್ದರು.

    250 ಗ್ರಾಂ ಗಾಂಜಾ ವಶ: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಜನತಾ ಪ್ಲಾಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಂಕೇಶ್ವರ ಪೊಲೀಸರು ಬಂಧಿಸಿ,
    250 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಜನತಾ ಪ್ಲಾಟ್‌ನ ಲಗಮಣ್ಣ ಶ್ಯಾಮರಾವ ಮನವಡ್ಡರ (32) ಬಂಧಿತ ವ್ಯಕ್ತಿ ಎಂದು ಸಂಕೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಜಿ.ಬಿ.ಕೊಂಗನೊಳ್ಳಿ ತಿಳಿಸಿದ್ದಾರೆ.

    ವ್ಯಕ್ತಿ ಬಂಧನ: ನೇಸರಗಿ ಸಮೀಪದ ಹನ್ನಿಕೇರಿಯ ಸರ್ಕಾರಿ ಪ್ರೌಢಶಾಲೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳೀಯ ನಿವಾಸಿ ರಮೇಶ ರುದ್ರಪ್ಪ ಮದಲೂರ ಎಂಬಾತನನ್ನು ಪೊಲೀಸರು ಬಂಧಿಸಿ, ಆತನಿಂದ 235 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ನೇಸರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts