More

    ಗಡ್ಡಧಾರಿಗಳ ಕಥೆ ವ್ಯಥೆ … ಮಾರಿಗುಡ್ಡದ ಹೊಸ ಅಧ್ಯಾಯ ಪ್ರಾರಂಭ

    ಬೆಂಗಳೂರು: ‘ಸಲಗ’ ಚಿತ್ರದ ಸೂರಿಯಣ್ಣ ನೆನಪಿರಬಹುದು. ಆ ಪಾತ್ರವನ್ನು ಮಾಡಿದವರು ದಿನೇಶ್​ ಕುಮಾರ್​. ‘ಸಲಗ’ ನಂತರ ಇನ್ನೊಂದಿಷ್ಟು ಚಿತ್ರಗಳಲ್ಲಿ ವಿಲನ್​ ಪಾತ್ರ ಮಾಡುತ್ತಿರುವ ದಿನೇಶ್​, ಇದೀಗ ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ಅವರು ಹುಲಿಯಾ ಎಂಬ ವಿಲನ್​ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹೆಸರೇನು ಗೊತ್ತಾ? ‘ಮಾರಿಗುಡ್ಡದ ಗಡ್ಡಧಾರಿಗಳು’.

    ಇದನ್ನೂ ಓದಿ: ಇಪ್ಪತ್ತರ ಯುವತಿಯ ಹುಡುಕಾಟದಲ್ಲಿ ‘ರಾಮಾ ರಾಮಾ ರೇ’ ಸತ್ಯ!

    ಹೊಸಬರೇ ಸೇರಿಕೊಂಡು ಮಾಡುತ್ತಿರುವ ’ಮಾರಿಗುಡ್ಡದ ಗಡ್ಡಧಾರಿಗಳು’ ಚಿತ್ರವು ಇತ್ತೀಚೆಗೆ ಅಧಿಕೃತವಾಗಿ ಪ್ರಾರಂಭವಾಗಿದೆ. ಈ ಚಿತ್ರವನ್ನು ರಾಜೀವ್‌ ಚಂದ್ರಕಾಂತ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ 75ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್ ಡಿಸೈನ್ ಮಾಡಿದ ಅನುಭವವಿರುವ ರಾಜೀವ್​, ಈಗ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ಸಾಮಾನ್ಯವಾಗಿ ಎಲ್ಲರೂ ಹೀರೋಗಳಿಗೆ ಕಥೆ ಬರೆಯುತ್ತಾರೆ. ಆದರೆ, ಇಲ್ಲಿ ರಾಜೀವ್​ ಖಳನಾಯಕನ ಮೇಲೆ ಕಥೆ ಬರೆದಿದ್ದಾರೆ. 1990ರ ದಶಕದಲ್ಲಿ ಮಜ್ಜೇನಹಳ್ಳಿ ಎನ್ನುವ ಪಟ್ಟಣದಲ್ಲಿ ನಡೆಯುವ ಕಾಲ್ಪನಿಕ ಘಟನೆಯನ್ನು ಅವರು ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದಾರೆ. ಎಂಟು ಗಡ್ಡಧಾರಿಗಳ ಸುತ್ತ ಈ ಕಥೆ ಸಾಗಲಿದೆಯಂತೆ.

    ಇದನ್ನೂ ಓದಿ: ಗಂಡು ಮಗುವಿಗೆ ತಾಯಿಯಾದ ಕಾಜಲ್​ ಅಗರ್​ವಾಲ್​

    ತಾರಗಣದಲ್ಲಿ ಪ್ರವೀಣ್, ನಂಜುಂಡ, ಅವಿನಾಶ್, ರಮೇಶ್‌ ಭಟ್, ಗಣೇಶ್‌ ರಾವ್, ಬೆನಕ ನಂಜಪ್ಪ, ಪ್ರಶಾಂತ್‌ಸಿದ್ದಿ ಮುಂತಾದವರು ಅಭಿನಯಿಸುತ್ತಿದ್ದಾರೆ. ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಚಿತ್ರದಲ್ಲಿದ್ದು ನಾಲ್ಕು ಹಾಡುಗಳಿದ್ದು ಕೆ.ಎಂ. ಇಂದ್ರ ಸಂಗೀತ ಸಂಯೋಜಿಸುತ್ತಿದ್ದಾರೆ. ಕೆಜಿಎಫ್ ಮುಂತಾದ ಕಡೆ 35 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಪ್ಲಾನ್​ ಮಾಡಿಕೊಂಡಿದೆ.

    ಕೋಟಿ ಸಂಪಾದಿಸುವ ಸಮಂತಾರ ಮೊದಲ ಸಂಬಳ ಎಷ್ಟೆಂಬುದನ್ನು ತಿಳಿದ್ರೆ ನೀವು ಅಚ್ಚರಿ ಪಡ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts