More

    ಆಸ್ಪತ್ರೆಗೆ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಒತ್ತಾಯ

    • ಆರೋಗ್ಯ ಕೇಂದ್ರ ಉದ್ಘಾಟನೆ ವೇಳೆ ಶಾಸಕ ಎಸ್. ಭೀಮಾನಾಯ್ಕ ಹೇಳಿಕೆ

    ಮರಿಯಮ್ಮನಹಳ್ಳಿ: ಪಟ್ಟಣದ ನೂತನ ಆರೋಗ್ಯ ಕೇಂದ್ರಕ್ಕೆ ಸಂಪೂರ್ಣ ಸೌಲಭ್ಯ ಒದಗಿಸುವಂತೆ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಎಸ್. ಭೀಮಾನಾಯ್ಕ ಹೇಳಿದರು.

    ಪಟ್ಟಣದಲ್ಲಿ ನೂತನ 30 ಬೆಡ್‌ಗಳ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಜ.19ರಂದು ವಿಧಾನಸೌಧದಲ್ಲಿ ನಡೆಯುವ ಸಭೆಯಲ್ಲಿ ನೂತನ ಆಸ್ಪತ್ರೆಯ ವಾಸ್ತವದ ಬಗ್ಗೆ ಧ್ವನಿ ಎತ್ತುತ್ತೇನೆ. ವೈದ್ಯರು, ಸಿಬ್ಬಂದಿ ನೇಮಕ ಸೇರಿ ಅಗತ್ಯ ಯಂತ್ರೋಪಕರಣ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದೊಂದಿಗೆ ಆರೋಗ್ಯ ಮಂತ್ರಿ ಕೆ. ಸುಧಾಕರ್‌ಗೆ ಮನವಿ ಸಲ್ಲಿಸಲಾಗುವುದು ಎಂದರು.

    ಬೇಡಿಕೆ ಬಳಿಕವೂ ಸರ್ಕಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸೌಲಭ್ಯ ನೀಡುವಲ್ಲಿ ವಿಳಂಬ ಮಾಡಿದರೆ ಸಾರ್ವಜನಿಕರೊಂದಿಗೆ ಹೋರಾಟ ಮಾಡುತ್ತೇನೆ ಎಂದ ಅವರು, ಪಟ್ಟಣಕ್ಕೆ ಕುಡಿವ ನೀರು ಪೂರೈಸಲು ಕೆಎಂಐಎಸ್ ಯೋಜನೆಯಡಿ 69 ಕೋಟಿ ರೂ. ಮೀಸಲಿರಿಸಿದ್ದು, ಪಪಂ ಚುನಾವಣೆಯಲ್ಲಿ ಜನರಿಗೆ ನೀಡಿದ ಕುಡಿವ ನೀರಿನ ಭರವಸೆಯನ್ನು ಶೀಘ್ರವೇ ಈಡೇರಿಸಲಾಗುವುದು ಎಂದರು.

    ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್, ಡಾ.ಬಸವರಾಜ್, ಡಾ. ಮಂಜುಳಾ, ಡಾ.ಪಿ. ವಿಜಯವೆಂಕಟೇಶ್, ಡಾ.ಜಿ.ಎಂ. ಸೋಮೇಶ್ವರ, ಮುಖಂಡರಾದ ಎಂ. ವಿಶ್ವನಾಥ ಶೆಟ್ಟಿ, ಎನ್. ಸತ್ಯನಾರಾಯಣ, ಜಿ. ಪರಶುರಾಮ, ಕುರಿ ಶಿವಮೂರ್ತಿ, ಎನ್.ಎಸ್. ಬುಡೇನ್‌ಸಾಬ್, ವಿಜಯಕುಮಾರ್, ರಾಘವೇಂದ್ರ ಶೆಟ್ಟಿ, ಪಪಂ ಸದಸ್ಯರಾದ ಎಲ್. ವಸಂತಕುಮಾರ್, ಪರಶುರಾಮ, ಮರಡಿ ಸುರೇಶ, ಎಸ್. ಮಹಮದ್, ಬೆಣಕಲ್ ಬಾಷಾ, ಆದಿಮನಿ ಹುಸೇನ್ ಬಾಷಾ, ಬಿ.ಎಂ.ಎಸ್. ರಾಜೀವ, ವಿ. ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts