More

    ಅಭಿವೃದ್ಧಿಗೆ ಶಿಕ್ಷಣವೇ ಪೂರಕ ಸಾಧನ

    ಮರಿಯಮ್ಮನಹಳ್ಳಿ: ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಎಷ್ಟು ಮುಖ್ಯವೋ, ಶಾಲೆಯ ವಾತಾವರಣವೂ ಅಷ್ಟೇ ಮುಖ್ಯ ಎಂದು ಬಿಎಂಎಂ ಕಂಪನಿಯ ಆಡಳಿತ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಗಣೇಶ್ ಹೆಗಡೆ ಹೇಳಿದರು.

    ಪಟ್ಟಣದ ಸರ್ಕಾರಿ ಪ್ರೌಢಶಾಲಾವರಣದಲ್ಲಿ ಬಿಎಂಎಂ ಸಂಸ್ಥೆ ಹಾಗೂ ಜೆಎಸ್‌ಡಬ್ಲುೃ ಫೌಂಡೇಷನ್ ಸಹಯೋಗದಲ್ಲಿ ಶುಕ್ರವಾರ ಸುಮಾರು 5.5 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಶಿಕ್ಷಣ ಮನುಷ್ಯನ ಅಭಿವೃದ್ಧಿಗೆ ಪೂರಕ ಸಾಧನ ಎಂದರು.

    ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ಸಾರ್ಥಕ ಜೀವನ ನಡೆಸುವಂತಾಗಬೇಕು. ಈಗಾಗಲೇ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಸ್ಥಳೀಯವಾಗಿ ಬಿಎಂಎಂ ಇಸ್ಪಾತ್ ಸಂಸ್ಥೆ ಹಾಗೂ ಜೆಎಸ್‌ಡಬ್ಲ್ಯು ಫೌಂಡೇಷನ್ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸುಸಜ್ಜಿತ ಕಟ್ಟಡ ಸೇರಿ ಮೂಲಭೂತ ಸೌಲಭ್ಯಗಳನ್ನು ನೀಡಲು ಮುಂದಾಗಿದೆ ಎಂದರು.

    ಕಂಪನಿ ವ್ಯಾಪ್ತಿಯಲ್ಲಿ ದೇವಸ್ಥಾನ, ವೈಯಕ್ತಿಕ ಶೌಚಗೃಹಗಳ ನಿರ್ಮಾಣ, ಕುಡಿವ ನೀರಿನ ತೊಟ್ಟಿ, ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ, ನೋಟ್ ಪುಸ್ತಕ ವಿತರಣೆ, ಉದ್ಯಾನ ಅಭಿವೃದ್ಧಿ, ಸರ್ಕಾರಿ ಆಸ್ಪತ್ರೆಗಳ ಕಟ್ಟಡ, ಆರೋಗ್ಯ ತಪಾಸಣೆ ಸೇರಿ ಹಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಮುಂದಿನ ವರ್ಷದ ಆಯವ್ಯಯದಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

    ಪಪಂ ಸದಸ್ಯ ಕಾಳಿ ಮಂಜುನಾಥ, ರಮೇಶ್, ಸದ್ದಾಂ, ಬಿಎಂಎಂ ಕಂಪನಿ ಅಧಿಕಾರಿಗಳಾದ ಸತೀಶ್ ಗೌಡ, ಮಂಜುನಾಥ ಚಿಕ್ಕವಠ್, ಬಾಬಾ ಸಾಹೇಬ್, ಅರುಣ್‌ಕುಮಾರ್, ಮಲ್ಲಿಕಾರ್ಜುನ, ಡಿ.ಬಿ.ನಾಯಕ್, ರೇವಣ್ಣ, ಎಸ್.ಕೃಷ್ಣನಾಯ್ಕ, ಪೂಜಾರ್ ಪ್ರಕಾಶ್, ತಳವಾರ ಈಶ್ವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts