More

    ಬಸವೇಶ್ವರ ರಥೋತ್ಸವ ಅದ್ದೂರಿ

    ಬೈಲಹೊಂಗಲ: ಪಟ್ಟಣದ ಇತಿಹಾಸ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನದ ಮಹಾರಥೋತ್ಸವ 50 ಸಾವಿರಕ್ಕೂ ಅಧಿಕ ಭಕ್ತ ಸಮೂಹ ಮಧ್ಯೆ ಸೋಮವಾರ ವಿಜಂಭಣೆಯಿಂದ ನೆರವೇರಿತು.

    ಪಟ್ಟಣದ ಜವಳಿ ಕೂಟದಿಂದ ಹರಹರ ಮಹಾದೇವ, ಬಸವೇಶ್ವರ ಮಹಾರಾಜಕೀ ಜೈ ಎಂಬ ಜಯಘೋಷಗಳೊಂದಿಗೆ ಆರಂಭವಾದ 50 ಅಡಿ ಎತ್ತರದ ಮಹಾರಥೋತ್ಸವ ಬಜಾರ್ ರಸ್ತೆ, ಬೆಲ್ಲದ ಕೂಟ, ಉಪ್ಪಿನ ಕೂಟ ನಂತರ ಮೇದಾರ ಗಲ್ಲಿ ಮಾರ್ಗವಾಗಿ 100 ಅಡಿಗೂ ಹೆಚ್ಚು ಎತ್ತರದ ಪ್ರದೇಶದಲ್ಲಿ ನಾಲ್ಕು ತಿರುವುಗಳಲ್ಲಿ 1.8 ಕಿ.ಮೀ. ವರಗೆ ಸಾಗಿ, ದೇವಸ್ಥಾನಕ್ಕೆ ಬಂದು ತಲುಪಿತು.

    ಬಸವೇಶ್ವರರ, ಮಹಾನ್ ಪುರುಷರ ಭಾವಚಿತ್ರ, ತೆಂಗು, ಬಾಳೆ, ಕಬ್ಬು, ಕೇಸರಿ, ಬಿಳಿ ಧ್ವಜ, ರುದ್ರಾಕ್ಷಿ, ಶೇಂಗಾ, ಹತ್ತಿ, ಬಣ್ಣದ ಹಾಳೆ, ವಿವಿಧ ಪುಷ್ಪಮಾಲೆಗಳಿಂದ ರಥವು ಕಂಗೊಳಿಸುತ್ತಿತ್ತು. ಬಂಗಾರ ಬಣ್ಣದ ಹಾಳೆ ಲೇಪಿದ ರಥದ ಕಳಸ ಆಕರ್ಷಿಣಿಯವಾಗಿತ್ತು. ರಥೋತ್ಸವಕ್ಕೆ ಭಕ್ತರು ಶ್ರದ್ಧೆ, ಭಕ್ತಿಯಿಂದ ಕೈ ಮುಗಿದು ಹೂವು, ಬಾಳೆಹಣ್ಣು, ಖಾರಿಕ್ ಸಮರ್ಪಿಸಿದರು. ರಥೋತ್ಸವ ಸಾಗಿದ ಮಾರ್ಗದಲ್ಲಿ ಭಕ್ತರು ನೀರುಣಿಸಿ ಗೌರವ ಸಲ್ಲಿಸಿದರು. ರಥದಲ್ಲಿ ಬಸವಣ್ಣ, ಅಕ್ಕಮಹಾದೇವಿ ಮೂರ್ತಿಗಳು, ಶರಣರ ವಚನ ಕಟ್ಟುಗಳನ್ನು ಸ್ಥಾಪಿಸಲಾಗಿತ್ತು.

    ರಾಜ್ಯ, ಹೊರ ರಾಜ್ಯಗಳಿಂದ ದೇವಸ್ಥಾನಕ್ಕೆ ಬಂದ ಅಪಾರ ಭಕ್ತರು ಬೆಳಗ್ಗೆಯಿಂದ ರಾತ್ರಿವರೆಗೆ ದೇವಸ್ಥಾನಕ್ಕೆ ತೆರಳಿ ಶ್ರೀ ಮರಡಿಬಸವೇಶ್ವರರ ದರ್ಶನ ಪಡೆದರು. ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಮಡಿವಾಳೇಶ್ವರ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ತಹಸೀಲ್ದಾರ್ ಸಚ್ಚಿದಾನಂದ ಕುಚನೂರ, ವಿಶ್ವನಾಥ ಹಿರೇಮಠ, ಜಗದೀಶ ಕೋತಂಬ್ರಿ, ಬಸವರಾಜ ಜವಳಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

    ಅಹಿತಕರ ಘಟನೆ ನಡೆಯದಂತೆ ಪಿಐ ಪಂಚಾಕ್ಷರಯ್ಯ ಸಾಲಿಮಠ ನೇತತ್ವದಲ್ಲಿ ಇಬ್ಬರು ಕೆಎಸ್‌ಆರ್‌ಪಿ, ಸಿಬ್ಬಂದಿಯೊಂದಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹಿರಿಯರಾದ ಸಣ್ಣಬಸಪ್ಪ ಕುಡಸೋಮಣ್ಣವರ, ಈಶ್ವರ ಕೊಪ್ಪದ, ಶಿವಪುತ್ರಪ್ಪ ತಟವಟಿ, ಶ್ರೀಶೈಲ ಕೊತಂಬ್ರಿ, ಅಜ್ಜಪ್ಪ ಬೆಟಗೇರಿ, ರುದ್ರಪ್ಪ ತುರಮರಿ, ಮಹಾದೇವ ಯಡಳ್ಳಿ, ಸಿದ್ದು ಬೆಳಗಾವಿ, ಮಹಾಂತೇಶ ಅಕ್ಕಿ, ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ಮಹಾಂತೇಶ ಹೊಸಮನಿ, ಶಿವಲಿಂಗಯ್ಯ ವಿಭೂತಿಮಠ, ಶಿವಪುತ್ರಪ್ಪ ರುದ್ರಾಕ್ಷಿಮಠ, ಅರ್ಚಕ ಶಿವಲಿಂಗಯ್ಯ ಗಾಳಿಮರಡಿ, ಈಶ್ವರ ಗಾಳಿಮರಡಿ, ರವಿ ಲಕ್ಕನ್ನವರ, ರಾಮಕಷ್ಣ ಬಡಿಗೇರ, ಮೌನೇಶ ಬಡಿಗೇರ, ಮಾನಪ್ಪ ಬಡಿಗೇರ ಹಾಗೂ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts