More

    ಯುವ ಕ್ರೀಡಾಪಟುಗಳಿಗೆ ಸರ್ಕಾರಿ ನೆರವು; ಶಾಸಕ ರಾಜಾ ವೆಂಕಟಪ್ಪ ನಾಯಕ ಭರವಸೆ

    ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಪಂದ್ಯಕ್ಕೆ ಆಯ್ಕೆಯಾದವರಿಗೆ ಸನ್ಮಾನ

    ಮಾನ್ವಿ: ನೇಪಾಳದಲ್ಲಿ ಸೆ.2ರಂದು ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ 4ನೇ ಬಾಸ್ಕೆಟ್ ಬಾಲ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ತಾಲೂಕಿನ ಯುವ ಕ್ರೀಡಾಪಟುಗಳಿಗೆ ಸರ್ಕಾರದಿಂದ ನೆರವು ಕೊಡಿಸಲಾಗುವುದು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಭರವಸೆ ನೀಡಿದರು.

    ಇಪ್ಪತ್ತೊಂದು ವರ್ಷದ ಬಾಸ್ಕೆಟ್ ಬಾಲ್ ಸೀನಿಯರ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ಯುವ ಕ್ರೀಡಾಪಟುಗಳನ್ನು ಶುಕ್ರವಾರ ಸನ್ಮಾನಿಸಿ ಮಾತನಾಡಿದರು. ಜು.23 ರಂದು ಗುಜರಾತಿನಲ್ಲಿ ನಡೆದ ರಾಷ್ಟ್ರ ಮಟ್ಟದ ಬಾಸ್ಕೆಟ್ ಬಾಲ್ ಸೀನಿಯರ್ (21 ವರ್ಷದ ವಿಭಾಗ) ಪಂದ್ಯಗಳಲ್ಲಿ ಉತ್ತಮವಾಗಿ ಆಟವಾಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಆಟಗಾರರಾದ ಸುದರ್ಶನ್ ಮಾನ್ವಿ, ಮತೀಯಾಸ್ ಮಾನ್ವಿ, ಚಂದ್ರಕಾಂತ್ ಜಾಗೀರಪನ್ನೂರು, ಶ್ರೇಯಸ್ ಹಟ್ಟಿ, ರವಿ ಕಿರಣ್ ಮಾನ್ವಿ, ಪ್ರದೀಪ್ ಸಿಂಧನೂರು ನಮ್ಮ ತಾಲೂಕು, ಜಿಲ್ಲೆ ಸೇರಿ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಗುಣಗಾನ ಮಾಡಿದರು.

    ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಗ್ರಾಪಂ ಉಪಾಧ್ಯಕ್ಷ ಸಂಪತರಾಜ್ ಜಾಗೀರಪನ್ನೂರು, ಪಕ್ಷದ ಮುಖಂಡರಾದ ನಾಗರಾಜ ಭೋಗಾವತಿ, ಎಸ್. ವೆಂಕೋಬ, ವಕೀಲ ಪಿ. ರವಿಕುಮಾರ, ಯಮುನಪ್ಪ, ಖಜಾಪಾಷ, ಜೀವಪ್ಪ, ಸಂತೋಷ ಹೂಗಾರ, ಆಂಜನೇಯ ಸನ್ಲಾಪೂರು, ದುರುಗಪ್ಪ ಅಮರಾವತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts