More

    ಒತ್ತಡದ ಬದುಕಿಗೆ ಯೋಗದಿಂದ ಪರಿಹಾರ

    ಮಾನ್ವಿ: ಪ್ರತಿ ದಿನ ಯೋಗ ಮಾಡುವುದರಿಂದ ಎಲ್ಲ ರೋಗಗಳು ದೂರವಾಗುವ ಜತೆಗೆ ದಿನವಿಡೀ ಲವಲವಿಕೆಯಿಂದ ಇರಬಹುದು ಎಂದು ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ರಾಜಶೇಖರ ಹಿರೇಮಠ ಹೇಳಿದರು.

    ಪಟ್ಟಣದ ಯೋಗ ಸನ್ನಿದಾನಯಲ್ಲಿ ಆರೋಗ್ಯ ಮಹತ್ವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಒತ್ತಡದ ಬದುಕಿನಲ್ಲಿ ಮಧುಮೇಹದಂತಹ ಅನೇಕ ರೋಗಗಳು ನಮ್ಮನ್ನು ಕಾಡುತ್ತಿವೆ. ಪ್ರತಿದಿನ ಬೆಳಗ್ಗೆ ಯೋಗ ಮಾಡುವುದರಿಂದ ಇಂತಹ ರೋಗಗಳಿಂದ ದೂರವಿರಬಹುದು. ಈ ಹಿಂದೆ ಗರ್ಭಿಣಿಯರ ಹೆರಿಗೆ ಮನೆಯಲ್ಲಿ ಆಗುತ್ತಿತ್ತು. ಈಗ ಆಸ್ಪತ್ರೆಗೆ ಹೋದರೆ ಮಾತ್ರ ಹೆರಿಗೆಯಾಗುವ ಪರಿಸ್ಥಿತಿ ಉದ್ಭವಾಗಿದೆ. ಈ ಮೊದಲು ಗರ್ಭಿಣಿಯರು ನಿರಂತರ ಕೆಲಸ ಮಾಡುತ್ತಿದ್ದರು. ಇತ್ತೀಚಿಗಿನ ಗರ್ಭಿಣಿಯರು ಯಾವುದೇ ಕೆಲಸ ಮಾಡದೆ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ಹೆರಿಗೆ ಸಮಯದಲ್ಲಿ ತೊಂದರೆ ಅನುಭವಿಸುತ್ತಾರೆ ಎಂದರು.

    ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ದೇಶ ಮತ್ತು ಹೊರ ದೇಶಗಳಲ್ಲಿ ಯೋಗಕ್ಕೆ ಸಾಕಷ್ಟು ಮಹತ್ವ ನೀಡಲಾಗುತ್ತಿದೆ. ಬುದ್ದಿಮಟ್ಟ ಹೆಚ್ಚಿಸಿಕೊಳ್ಳಲು ಯೋಗ ಅವಶ್ಯವಾಗಿದ್ದು, ಮನಸ್ಸಿನ ನೆಮ್ಮದಿಗಾಗಿ ಪ್ರತಿದಿನ ಯೋಗ ಮಾಡಬೇಕು ಎಂದರು. ಸ್ವಾಮಿ ವಿವೇಕಾನಂದ ಯೋಗ ವಿದ್ಯಾಲಯದ ಅಧ್ಯಕ್ಷ ರುದ್ರಮುನಿ ಸ್ವಾಮಿ, ಉಪನ್ಯಾಸಕ ಕರಿಬಸಪ್ಪ, ಯೋಗ ಗುರು ಅನ್ನದಾನಯ್ಯ ,ಪುರಸಭೆ ಸದಸ್ಯೆ ಲಕ್ಷ್ಮೀದೇವಿ ನಾಯಕ, ನಾಗರಾಜು, ರಾಜಕುಮಾರ, ಭೀಮರಾಜ್, ವಿಜಯಕುಮಾರ, ಇತರರಿದ್ದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts