More

    ಶಾಸ್ತ್ರಗಳ ಅಧ್ಯಯನದಿಂದ ಜ್ಞಾನ ವೃದ್ಧಿ; ಶಿವಶಂಕರ ಶಿವಾಚಾರ್ಯ ಶ್ರೀಗಳ ಅಭಿಮತ

    ಮಾನ್ವಿ: ಪ್ರತಿಯೊಬ್ಬರೂ ವಿವೇಕವಂತ ಸಜ್ಜನರ ಸಂಘ ಮಾಡಬೇಕು. ವೇದ, ಉಪನಿಷತ್ತು, ಶಾಸ್ತ್ರಗಳನ್ನು ಅಧ್ಯಯನ ಮಾಡುವುದರಿಂದ ಸಂಸ್ಕಾರ ಚಿಂತನೆ ನಡೆಸುವ ಜ್ಞಾನ ಬೆಳೆಯುತ್ತದೆ ಎಂದು ಹುಬ್ಬಳ್ಳಿಯ ವೀರಭಿಕ್ಷವರ್ತಿ ಮಠದ ಶಿವಶಂಕರ ಶಿವಾಚಾರ್ಯ ಶ್ರೀಗಳು ತಿಳಿಸಿದರು.

    ಪಟ್ಟಣದ ಕುರುಹಿನ ಶೆಟ್ಟಿ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಕುರುಹಿನ ಶೆಟ್ಟಿ ಸಮಾಜದ ನೀಲಕಂಠೇಶ್ವರ ದೇವಸ್ಥಾನದ 16ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮುಂದಿನ ಪೀಳಿಗೆಯಲ್ಲಿ ವಿವೇಕಯುತ ಚಿಂತನೆಗಳು ಮೂಡಿದಾಗ ಮಾತ್ರ ಸಾರ್ಥಕ ಜೀವನ ನಡೆಸಬಹುದು. ಕುರುಹಿನ ಶೆಟ್ಟಿ ಸಮಾಜ ರಾಜ್ಯದಲ್ಲಿ ಅತ್ಯಂತ ಹಿಂದುಳಿದಿದ್ದು, ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಶಿಕ್ಷಣ ಪ್ರೇಮಿ ಅಬ್ದುಲ್ ಕರೀಂಸಾಬ್ ಉಪನ್ಯಾಸ ನೀಡಿದರು. ಮಕ್ಕಳಿಂದ ವಿವಿಧ ಭಕ್ತಿಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಾರ್ಷಿಕೋತ್ಸವ ಅಂಗವಾಗಿ ಬೆಳಗ್ಗೆ ದೇವಸ್ಥಾನ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ಸುಮಂಗಲಿಯರು ತುಂಗಭದ್ರ ನದಿಯಲ್ಲಿ ಗಂಗೆ ಪೂಜೆ ನೆರವೇರಿಸಿ, ಗಂಗೆಯನ್ನು ಕುಂಭ ಮತ್ತು ಕಳಸದೊಂದಿಗೆ ಮಂಗಳ ವಾದ್ಯಗಳ ಸಮೇತ ದೇವಸ್ಥಾನಕ್ಕೆ ತಂದು ನೀಲಕಂಠೇಶ್ವರ ಶಿವಲಿಂಗಕ್ಕೆ ಅಭಿಷೇಕ ನಡೆಸಲಾಯಿತು.

    ಕುರುಹಿನ ಶೆಟ್ಟಿ ಸಮುದಾಯದ ತಾಲೂಕು ಅಧ್ಯಕ್ಷ ಗಂಗಾಧರ ಚಿಂಚೊಳ್ಳಿ, ನೇಕಾರ ಸಮಾಜ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಜಿ.ನಾಗರಾಜ ದೇವಾಂಗ ಸಮಾಜದ ಅಧ್ಯಕ್ಷ ಕಂಪ್ಲಿ ಮಲ್ಲಿಕಾರ್ಜುನ, ಅಶೋಕ ಚಿಂಚೊಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts