More

    6 ರಂದು ನವಲಿ ಕ್ರಾಸ್ ಬಳಿ ಹೋರಾಟ; ರೈತ ಮುಖಂಡ ಚಾಮಾರಸ ಮಾಲೀಪಾಟೀಲ್ ಬೆಟ್ಟದೂರು ಮಾಹಿತಿ

    ಮಾನ್ವಿ: ತುಂಗಭದ್ರಾ ಮುಖ್ಯಕಾಲುವೆಯ ಮೇಲ್ಭಾಗದಲ್ಲಿ ಹಾಕಿರುವ ಅಕ್ರಮ ಪೈಪ್‌ಗಳನ್ನು ತೆರವು ಮಾಡದಿದ್ದರೆ ಮಾನ್ವಿ, ಸಿರವಾರ ಮತ್ತು ರಾಯಚೂರು ಕೆಳಭಾಗದ ರೈತರೊಂದಿಗೆ ನವಲಿ ಕ್ರಾಸ್ ಬಳಿ ಹೋರಾಟ ಆ.6ರಂದು ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತುಂಗಭದ್ರಾ ಎಡದಂಡೆ ನಾಲೆ ರೈತ ಹಿತ ರಕ್ಷಣ ಸಮಿತಿ ಮುಖಂಡ ಚಾಮಾರಸ ಮಾಲೀಪಾಟೀಲ್ ಬೆಟ್ಟದೂರು ತಿಳಿಸಿದರು.

    ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 5-6 ವರ್ಷಗಳಿಂದ ಕೆಳಭಾಗದ ರೈತರಿಗೆ ಸಮರ್ಪಕ ನೀರು ಬರುತ್ತಿಲ್ಲ. ವಡ್ಡರಹಟ್ಟಿ, ಗಂಗಾವತಿ, ಕನಕಗಿರಿ, ಕಾರಟಗಿ ಮತ್ತು ಮಸ್ಕಿ ಭಾಗಗಳಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಎರೆಗೆ ಅಕ್ರಮ ನೀರಾವರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಹಲವು ಬಾರಿ ಅಕ್ರಮ ನೀರಾವರಿ ಪೈಪ್‌ಗಳನ್ನು ತೆರವು ಮಾಡಲು ಹೋರಾಟ ಮತ್ತು ಮನವಿ ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದರು.

    ಈಗಾಗಲೇ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅಕ್ರಮ ಪೈಪ್‌ಗಳನ್ನು ತೆರವು ಮಾಡಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರೂ ತೆರವಿಗೆ ಮುಂದಾಗುತ್ತಿಲ್ಲ ಎಂದು ಗಂಬೀರ ಅರೋಪ ಮಾಡಿದರು.

    ಎಚ್ಚರಿಕೆ: ಆ.6 ರೊಳಗೆ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಅಕ್ರಮ ನೀರಾವರಿ ಪಂಪಸೆಟ್ ತೆರವು ಮಾಡಬೇಕು. ಇಲ್ಲದಿದ್ದರೆ ಸಾವಿರಾರು ರೈತರೊಂದಿಗೆ ತೆರವಿಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

    ಪುರಸಭೆ ಮಾಜಿ ಅಧ್ಯಕ್ಷ ಕೆ. ಬಸವಂತಪ್ಪ ಮಾನ್ವಿ ಮಾತನಾಡಿದರು. ರೈತ ಮುಖಂಡರಾದ ಮಲ್ಲಿಕಾರ್ಜುನ ಪೋತ್ನಾಳ, ಸೂಗರಯ್ಯಸ್ವಾಮಿ ಆರ್‌ಎಸ್ ಮಠ. ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲಿದಿನ್ನಿ, ನಯೋಪ್ರ ಅಧ್ಯಕ್ಷ ವೀರೇಶ ಬೆಟ್ಟದೂರು, ಲಿಂಗರೆಡ್ಡಿ ಜೀನೂರು, ಅಯ್ಯಪ್ಪನಾಯಕ ಮ್ಯಾಕಲ್, ಮಂಜುನಾಥ ನಾಯಕ ಇನ್ನಿತರರು ಇದ್ದರು.


    ತುಂಗಭದ್ರಾ ಮುಖ್ಯ ಕಾಲುವೆಗೆ ಹಾಕಿದ ಅಕ್ರಮ ಪೈಪ್‌ಗಳನ್ನು ತೆರವು ಕಾರ್ಯಚರಣೆಗೆ ಎಲ್ಲ ರಾಜಕೀಯ ಪಕ್ಷಗಳು ಪಕ್ಷಬೇಧ ಮರೆತು ಆ.6 ರಂದು ನಡೆಯುವ ಹೋರಾಟದಲ್ಲಿ ಎಲ್ಲ ಪಕ್ಷದ ಮುಖಂಡರು, ಸಾರ್ವಜನಿಕರು ಭಾಗವಹಿಸಬೇಕು.
    | ಬಸನಗೌಡ ಬ್ಯಾಗವಾಟ ಮಾಜಿ ಶಾಸಕ, ಮಾನ್ವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts