More

    ಲಾಳಗೊಂಡ ಸಮಾಜ ಜಾತಿ ಪಟ್ಟಿಗೆ ಸೇರ್ಪಡೆ

    ಮಾನ್ವಿ: ರಾಜ್ಯ ಸರ್ಕಾರ ಲಾಳಗೊಂಡ ಸಮಾಜದ ಹೋರಾಟಕ್ಕೆ ಸ್ಪಂದಿಸಿ ಜಾತಿ ಪಟ್ಟಿಗೆ ಸೇರ್ಪಡೆ ಮಾಡಿರುವುದು ಶ್ಲಾಘನೀಯ ಎಂದು ಜಿಲ್ಲಾ ಅಧ್ಯಕ್ಷ ವೀರಭದ್ರಗೌಡ ಅಲ್ದಾಳ ಹೇಳಿದರು.

    ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಮಾತನಾಡಿ, ಲಾಳಗೊಂಡ ಸಮಾಜವನ್ನು ಜಾತಿ ಪಟ್ಟಿಗೆ ಸೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರಿಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಎಲ್ಲರ ಸಹಕಾರದಿಂದ ಜಾತಿ ಪಟ್ಟಿಗೆ ಸೇರ್ಪಡೆಯಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
    ತಾಲೂಕು ಅಧ್ಯಕ್ಷ ಕೆ.ಮಹಾದೇವಪ್ಪ ಮಾತನಾಡಿ, ತಿಂಗಳ ಹಿಂದೆ ಜಿಲ್ಲಾ ಮಟ್ಟದ ಸಮಾವೇಶ ನಡೆಸಿ ಒಕ್ಕೊರಲಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಜಿಲ್ಲಾ ಲಾಳಗೊಂಡ ಸಮಾಜದ ರಾಜ್ಯ ಅಧ್ಯಕ್ಷ ಬಸನಗೌಡ ಹರವಿ, ಜಿಲ್ಲಾ ಅಧ್ಯಕ್ಷ ಅಲ್ದಾಳ ವೀರಭದ್ರಪ್ಪಗೌಡ ಮತ್ತು ಜಿಲ್ಲಾ ಮಟ್ಟದ ಮುಖಂಡರ ಪರಿಶ್ರಮ ಇದೆ. ಜಾತಿ ಪಟ್ಟಿ ಸೇರ್ಪಡೆಗೆ ಕಾರಣರಾದ ಜಿಲ್ಲೆ ಎಲ್ಲಾ ಶಾಸಕರು, ಕೊಪ್ಪಳ, ರಾಯಚೂರು ಸಂಸದರು ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ.ಜಯಪ್ರಕಾಶ ಹೆಗಡೆ ಅವರನ್ನು ಸನ್ಮಾನಿಸಲು ನಿರ್ಧರಿಸಲಾಗಿತ್ತು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

    ಹಿರಿಯ ವಕೀಲ ಸಿದ್ದಲಿಂಗಪ್ಪಗೌಡ ಚಿಕ್ಕಕೊಟ್ನೆಕಲ್ ಮಾತನಾಡಿ, ಜಾತಿ ಪಟ್ಟಿಗೆ ಸೇರ್ಪಡೆ ಬಗ್ಗೆ ಸಮಾಜದಲ್ಲಿ ನಾನು ಮಾಡಿದ್ದೇನೆ ಎನ್ನುವ ಗೊಂದಲ ನಮ್ಮಲ್ಲಿ ಬೇಡ. ಎಲ್ಲರೂ ಒಗ್ಗಟಿನ ಬಲದಿಂದ ಕೆಲಸವಾಗಿದೆ ಎಂದು ತಿಳಿಸಿದರು.

    ಜಿಲ್ಲಾ ಲಾಳಗೊಂಡ ಸಮಾಜದ ಉಪಾಧ್ಯಕ್ಷ ಚನ್ನಬಸವ ಬೆಟ್ಟದೂರು, ಸಿರವಾರ ತಾಲೂಕು ಅಧ್ಯಕ್ಷ ಶಶೀಧರಗೌಡ ಹರವಿ, ಮುಖಂಡರಾದ ನೀಲಪ್ಪಗೌಡ ಜಾನೇಕಲ್, ಗುಂಡಪ್ಪಗೌಡ ಕಲ್ಲೂರು, ಅಮರೇಶಪ್ಪಗೌಡ ಗವಿಗಟ್ಟು, ಸಂತೋಷಪಾಟೀಲ್ ಮಾಡಗಿರಿ, ಹಂಪನಗೌಡ ಗುರುಕಂಬಾಲಿವ, ರವಿಕುಮಾರ ಚಿಮ್ಲಾಪುರ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts