More

    ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ -ಮತಗಟ್ಟೆ ಅಧಿಕಾರಿಗಳಿಗೆ ಡಿಸಿ ಚಂದ್ರಶೇಖರ ನಾಯಕ ಸೂಚನೆ

    ಮಾನ್ವಿ: ಕೋನಾಪುರ ಪೇಟೆಯ ಮತದಾರರ ಮನೆಗಳಿಗೆ ಗುರುವಾರ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿರುವ ಬಗ್ಗೆ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದರು.

    ನಂತರ ತಹಸಿಲ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮತಗಟ್ಟೆ ಅಧಿಕಾರಿಗಳ ಸಭೆ ನಡೆಯಿತು. ಮಾನ್ವಿ ಮತ್ತು ಸಿರವಾರ ತಾಲೂಕುಗಳ 27 ಮತಗಟ್ಟೆಗಳ ಮತದಾರರ ಮನೆಗಳಿಗೆ ಮತಗಟ್ಟೆ ಅಧಿಕಾರಿಗಳು ಭೇಟಿ ನೀಡಿ ಹೆಸರುಗಳು ಪಟ್ಟಿಯಲ್ಲಿ ಸಮರ್ಪಕವಾಗಿ ಇರುವ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.

    18 ವರ್ಷ ಪೂರ್ಣಗೊಂಡವರಿಂದ ಫಾರಂ ನಂ.6 ನಮೂನೆಯಲ್ಲಿ ಅರ್ಜಿ ಹಾಗೂ ಅಗತ್ಯ ದಾಖಲೆ ಪಡೆದು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಿಸಬೇಕು. ಪಟ್ಟಿಯಲ್ಲಿ ಹೆಸರು, ವಿಳಾಸ, ಭಾವಚಿತ್ರ ಇತರ ತಿದ್ದುಪಡಿಗಳು ಇದ್ದಲ್ಲಿ ಫಾರ್ಮ್ ನಂ.8ರ ನಮೂನೆಯಲ್ಲಿ ಅರ್ಜಿ ಹಾಗೂ ಅಗತ್ಯ ದಾಖಲೆ ಪಡೆದು ತಿದುಪಡಿಗೊಳ್ಳಿಸಬೇಕು. ಮತದಾರರು ಮರಣ ಹೊಂದಿದಲ್ಲಿ ಫಾರ್ಮ್ ನಂ.7ರ ನಮೂನೆಯಲ್ಲಿ ಕುಟುಂಬ ಸದಸ್ಯರಿಂದ ಅರ್ಜಿ ಹಾಗೂ ಮರಣ ಪ್ರಮಾಣ ಪತ್ರ ಇತರ ಅಗತ್ಯ ದಾಖಲೆ ಪಡೆದು ಮತದಾರರ ಪಟ್ಟಿಯಿಂದ ಅಂತಹವರ ಹೆಸರುಗಳನ್ನು ತೆಗೆದು ಹಾಕಬೇಕು. ಪಟ್ಟಿಯಲ್ಲಿ ಯಾವುದೇ ದೋಷಗಳು ಅಗದಂತೆ ನೋಡಿಕೊಳ್ಳಬೇಕು ಎಂದು ವಿವಿಧ ಮತಗಟ್ಟೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts