More

    ಹೈಮಾಸ್ಟ್ ದೀಪ ಅಳವಡಿಕೆ ತಡೆಯಿರಿ

    ಮಾನ್ವಿ: ಪಟ್ಟಣದ ರಾಜ್ಯ ಹೆದ್ದಾರಿ ರಸ್ತೆ ವಿಭಜಕದಲ್ಲಿ ಹೈಮಾಸ್ಟ್ ದೀಪ ಆಳವಡಿಕೆಗೆ ತಡೆ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು ಮತ್ತು ಮುಖಂಡರು ಶನಿವಾರ ಮನವಿ ಸಲ್ಲಿಸಿದರು.

    ಕೆಕೆಆರ್‌ಡಿಬಿಯ 2020-21ನೇ ಸಾಲಿನ 1 ಕೋಟಿ ರೂ. ಅನುದಾನದಡಿ ಹೈಮಾಸ್ಟ್ ದೀಪ ಅಳವಡಿಕೆ ಮಾಡಲಾಗುತ್ತಿದೆ. ಕಳೆದ 15 ವರ್ಷಗಳ ಹಿಂದೆ ಪಟ್ಟಣದ ಸೂರ್ಯ ರೈಸ್‌ಮಿಲ್‌ನಿಂದ ಬಸವವೃತ್ತ ಮೂಲಕ ಎಪಿಎಂಸಿವರಗೆ 56 ಕಂಬಗಳನ್ನು ಆಳ ವಡಿಸಲಾಗಿದೆ. ಇದೀಗ ಅವೈಜ್ಞಾನಿಕವಾಗಿ ಹೆಚ್ಚುವರಿ ವಿದ್ಯುತ್ ಕಂಬಗಳನ್ನು ಅಳಡಿಸುತ್ತಿದ್ದು ಇದನ್ನು ತಡೆಯಬೇಕೆಂದು ಆಗ್ರಹಿಸಿದರು.

    ಕೆಕೆಆರ್‌ಡಿಬಿ ಅನುದಾನದಲ್ಲಿ ಹೈಮಾಸ್ಟ್ ವಿದ್ಯುತ್ ಕಂಬಗಳನ್ನು ಅಳವಡಿಸುವುದಾಗಿದ್ದರೆ ಪಟ್ಟಣದ ಎಲ್‌ಐಸಿ ಕಚೇರಿಯಿಂದ ಸೂರ್ಯ ರೈಸ್‌ಮಿಲ್‌ವರಗೆ ಮತ್ತು ಎಪಿಎಂಸಿಯಿಂದ ಕಲ್ಮಠ ಧ್ಯಾನಮಂದಿರದವರಗೆ ಅಳವಡಿಸಲು ಆದೇಶ ನೀಡುವಂತೆ ಕೋರಿದರು.

    ಪುರಸಭೆ ಅಧ್ಯಕ್ಷೆ ರಶೀದಾ ಬೇಗಂ, ಉಪಾಧ್ಯಕ್ಷ ಕೆ.ಶುಕಮುನಿ, ಸದಸ್ಯರಾದ ಲಕ್ಷ್ಮೀದೇವಿ ನಾಯಕ, ನೀಲಮ್ಮ ಕಾಜಗಾರ, ಸೂರ್ಯಕುಮಾರಿ, ರೇಷ್ಮಾ ಬೇಗಂ, ಶೈನಾಜಾಬಾನು, ಸಾಬೀರ್‌ಪಾಷಾ, ರೇವಣಸಿದ್ದಯ್ಯಸ್ವಾಮಿ, ಆಮ್ಜದ್‌ಖಾನ್, ಶರಣಬಸವ, ಬಸವರಾಜ ಭಜಂತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts