More

    ಸರ್ಕಾರ ನೋಟರಿ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಒತ್ತಾಯಿಸಿ ವಕೀಲರಿಂದ ಮನವಿ

    ಮಾನ್ವಿ: ನೋಟರಿ ಕಾಯ್ದೆ ತಿದ್ದುಪಡಿಯಿಂದ ಹಿರಿಯ ನೋಟರಿ ವಕೀಲರಿಗೆ ನಷ್ಟವಾಗಲಿದ್ದು, ಸರ್ಕಾರ ಕೂಡಲೇ ತಿದ್ದುಪಡಿಯನ್ನು ಕೈ ಬಿಡಬೇಕೆಂದು ನೋಟರಿ ವಕೀಲರು ಗ್ರೇಡ್-2 ತಹಸೀಲ್ದಾರ್ ಅಬ್ದುಲ್‌ವಾಹಿದ್‌ಗೆ ಶನಿವಾರ ಮನವಿ ಸಲ್ಲಿಸಿದರು.

    ಹೊಸ ನೋಟರಿ ತಿದ್ದುಪಡಿ ಪ್ರಸ್ತಾವನೆ ಜಾರಿಗೆ ಬರುವುದರಿಂದ ಹಿರಿಯ ನೋಟರಿ ವಕೀಲರಿಗೆ ತಮ್ಮ ವೃದ್ಯಾಪ್ಯ ಜೀವನದಲ್ಲಿ ಹಣಕಾಸಿನ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಈ ಹೊಸ ಪ್ರಸ್ತಾವನೆಯನ್ನು ಕೈಬಿಡಬೇಕು. ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ವಿಚಾರದಲ್ಲಿ ಅನುಭವಿ ವಕೀಲರನ್ನು ನೇಮಕ ಮಾಡಿಕೊಳ್ಳಲು ನಮ್ಮದು ಸಂಪೂರ್ಣ ಸಮ್ಮತಿ ಇರುತ್ತದೆ. ಆದರೆ, ಈಗಾಗಲೇ ನೇಮಕ ಹೊಂದಿದ ಹಿರಿಯ ವಕೀಲರನ್ನು ಯಾವುದೇ ಅವಧಿಗೆ ಸೀಮಿತಗೊಸದೇ ಅವರವರ ಇಚ್ಛಾನುಸಾರ ಕಾಯ್ದೆಯ ಚೌಕಟ್ಟಿನಲ್ಲಿ ನವೀಕರಣ ಮಾಡಲು ತಾಲೂಕಿನಲ್ಲಿರುವ ನೋಟರಿ ವಕೀಲರು ಸಭೆ ಸೇರಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಉದ್ದೇಶಿತ ನೋಟರಿ ಕಾಯ್ದೆ 1952ಕ್ಕೆ ಮಾಡಲು ಹೊರಟಿರುವ ತಿದ್ದುಪಡಿ ಅಧಿಸೂಚನೆ 2021ನ್ನು ಈ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

    ನೋಟರಿ ವಕೀಲರಾದ ಎಂ.ಕೆ. ದೇಸಾಯಿ, ಎ.ಬಿ. ಉಪ್ಪಳಮಠ, ಸೈಯಾದ್ ಯದುಲ್ಲಾ ಹುಸೇನಿ ಮತವಾಲೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts