More

    ಪೀಠೋಪಕರಣಗಳಿಗಾಗಿ 30 ಲಕ್ಷ ರೂ. ಬಿಡುಗಡೆ

    ಮಾನ್ವಿ: ವಿದ್ಯಾರ್ಥಿಗಳ ಪಠ್ಯ ಚಟುವಟಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿ ವಿವಿಧ ವಿಷಯದ ಕುರಿತು ಜ್ಞಾನ ಸಂಪಾದನೆಗೆ ಗ್ರಂಥಾಲಯಗಳು ಇಂದು ಅತಿ ಅವಶ್ಯವಾಗಿವೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು. ಪಟ್ಟಣದ ತಾಪಂ ಅವರಣದಲ್ಲಿ ಸೋಮವಾರ ಕೆಕೆಆರ್‌ಡಿಬಿ ಯೋಜನೆಯಲ್ಲಿ ನಿರ್ಮಿಸಿದ ನೂತನ ಇ-ಗ್ರಂಥಾಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

    2017-18 ನೇ ಸಾಲಿನಲ್ಲಿ 95 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ನಿರ್ಮಾಣವಾದ ಗ್ರಂಥಾಲಯದ ಪೀಠೋಪಕರಣಗಳಿಗಾಗಿ ಕೆಕೆಆರ್‌ಡಿಬಿ ಯೋಜನೆಯ ಅನುದಾನದಲ್ಲಿ 30 ಲಕ್ಷ ರೂ. ನೀಡಿರುವುದಾಗಿ ತಿಳಿಸಿದರು.

    ಪಟ್ಟಣದಲ್ಲಿ ಎರಡು ಗ್ರಂಥಾಲಯಗಳಿದ್ದು ಇ-ಗ್ರಂಥಾಲಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಉತ್ತಮವಾಗಿ ಅಭ್ಯಾಸ ಮಾಡಿ ಐಎಎಸ್, ಕೆಎಎಸ್ ಇತರೆ ಪರೀಕ್ಷೆಗಳನ್ನು ಬರೆದು ಉನ್ನತ ಸ್ಥಾನಕ್ಕೆ ಪಡೆದುಕೊಳ್ಳಬೇಕು. ಹಳೇ ಗ್ರಂಥಾಲಯದಲ್ಲಿ ಇಬ್ಬ ಅಧಿಕಾರಿ ಇದ್ದು ಇ-ಗ್ರಂಥಾಲಯಕ್ಕೂ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ. ಸತೀಶ್‌ಕುಮಾರ್‌ಗೆ ಸೂಚಿಸಿದರು.

    ಪುರಸಭೆ ವತಿಯಿಂದ ಗ್ರಂಥಾಲಯದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಶಾಸಕರು ತಿಳಿಸಿದಾಗ ಪುರಸಭೆ ಸಿಒ ಗಂಗಾಧರ ನೀರಿನ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

    ರಾಜ್ಯ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ. ಸತೀಶ್‌ಕುಮಾರ್ ಮಾತನಾಡಿ, ರಾಜ್ಯದಲ್ಲಿ 7 ಸಾವಿರಕ್ಕೂ ಅಧಿಕ ಗ್ರಂಥಾಲಯಗಳಿವೆ. ರಾಜ್ಯದಲ್ಲಿ 3.30 ಕೋಟಿ ಜನ ಇ-ಗ್ರಂಥಾಲಯದ ಸದಸ್ಯರಾಗಿದ್ದಾರೆ. ವಿದ್ಯಾರ್ಥಿಗಳು ಇ-ಗ್ರಂಥಾಲಯದ ಮೂಲಕ ಪಠ್ಯಪುಸ್ತಕಗಳ ಅಭ್ಯಾಸ ಮಾಡಬಹುದಾಗಿದೆ. ರಾಯಚೂರು ಜಿಲ್ಲೆಯಲ್ಲಿ 4 ಲಕ್ಷ, ತಾಲೂಕಿನಲ್ಲಿ 40 ಸಾವಿರಕ್ಕೂ ಅಧಿಕ ಜನರು ಅಂತರ್‌ರ್ಜಾಲದ ಮೂಲಕ ಸದಸ್ಯರಾಗಿದ್ದಾರೆ ಎಂದರು.

    ಪುರಸಭೆ ಅಧ್ಯಕ್ಷೆ ರಶೀದಾಬೇಗಂ, ಟಿಎಪಿಸಿಎಮ್‌ಎಸ್ ಅಧ್ಯಕ್ಷ ತಿಮ್ಮರಡ್ಡಿ ಬೋಗಾವತಿ, ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಬಲ್ಲಟಗಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ಪುರಸಭೆ ಸದಸ್ಯ ಬಾಷಾಸಾಬ್, ಶರಣಪ್ಪ ಮೇದಾ, ಗುತ್ತೇದಾರ ಅಕ್ಬರ್‌ಸಾಬ್, ಮುಖಂಡರಾದ ಜಂಬುನಾಥ ಯಾದವ, ಹನುಮಂತ ಭೋವಿ, ಜಿಲ್ಲಾ ಗ್ರಂಥಾಲಯ ಅಧಿಕಾರಿ ಡಾ.ರಾಮ್‌ಕಲಾಲ್, ತಾಪಂ ಇಒ ಎಂಡಿ ಸೈಯ್ಯದ್ ಪಟೇಲ್, ಪುರಸಭೆ ಸಿಒ ಗಂಗಾಧರ, ಗ್ರಂಥಾಲಯ ಅಧಿಕಾರಿ ಪಾರ್ವತಿ, ತಾಲೂಕು ಗ್ರಂಥಾಲಯ ಅಧಿಕಾರಿ ಪಾರ್ವತಮ್ಮ, ನಿರ್ಮಲ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts