More

    ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ

    ಮಾನ್ವಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಫೆ.19 ರಂದು ತಾಲೂಕು ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

    ಸಮ್ಮೇಳನದ ಅಂಗವಾಗಿ ಡಾ.ವನಿತಾ ಪ್ರಭಾಕರ್ ಮಂಟಪ, ರಾಣಿರಂಗಮ್ಮ ರಾಜಾಅಂಬಣ್ಣನಾಯಕ ಮುಖ್ಯ ವೇದಿಕೆ, ಜಡಿಯಮ್ಮ ನಾಡಗೌಡ ಹಾಗೂ ಲಾಜವಂತಿ ಮಿಶ್ರಾ ಮಹಾದ್ವಾರವನ್ನು ನಿರ್ಮಿಸಲಾಗಿದೆ. ಬೆಳಗ್ಗೆ 7.30 ಕ್ಕೆ ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಾಜಾ ವೆಂಕಟಪ್ಪನಾಯಕರಿಂದ ರಾಷ್ಟ್ರಧ್ವಜ ಮತ್ತು ಜಿಕಸಾಪ ಅಧ್ಯಕ್ಷರಿಂದ ನಾಡಧ್ವಜ, ತಾಕಸಾಪ ಅಧ್ಯಕ್ಷ ರವಿಕುಮಾರ ಪಾಟೀಲ್ ವಕೀಲರಿಂದ ಪರಿಷತ್ ಧ್ವಜಾರೋಹಣ ನೆರವೇರಲಿದೆ. ಬೆಳಗ್ಗೆ 8 ಗಂಟೆಗೆ ಪಟ್ಟಣದ ಬಸವವೃತ್ತದಿಂದ ವಾಸವಿ ಕಲ್ಯಾಣ ಮಂಟಪದವರಗೆ ನಾಡದೇವಿಯ ಭಾವಚಿತ್ರದೊಂದಿಗೆ ಸಮ್ಮೇಳನ ಅಧ್ಯಕ್ಷೆ ಮಧುಕುಮಾರಿ ಮಿಶ್ರ ಮೆರವಣಿಗೆ ಜರುಗಲಿದೆ.

    ಪುರಸಭೆ ಅಧ್ಯಕ್ಷೆ ರಶೀದಾಬೇಗಂ ಮೆರವಣಿಗೆ ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಲಾ ತಂಡಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ಸಮ್ಮೇಳನಾಧ್ಯಕ್ಷೆ ಮಧುಕುಮಾರಿ ಮಿಶ್ರರಿಂದ ಸಮ್ಮೇಳನ ಅಧ್ಯಕ್ಷರ ನುಡಿ, ಡಾ.ನೀಲಾಂಬಿಕಾ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ರಾಜಾ ಅಮರೇಶ್ವರನಾಯಕ ಸ್ಮರಣ ಸಂಚಿಕೆ ಬಿಡುಗಡೆ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಚಿತ್ರಕಲಾ ಪ್ರದರ್ಶನ ಉದ್ಘಾಟನೆ, ಸಮಾಜ ಸೇವಕಿ ಚಿನ್ನಮ್ಮ ಮುದ್ದಂಗುಡ್ಡಿ ಪುಸ್ತಕ ಮಳಿಗೆ ಉದ್ಘಾಟನೆ, ಪ್ರಾಸ್ತಾವಿಕ ಜಿಲ್ಲಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಸ್ವಾಗತ ಕಸಾಪ ಅಧ್ಯಕ್ಷ ರವಿಕುಮಾರ ಪಾಟೀಲ್ ಇತರರು ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts