More

    ಕ್ಷೇತ್ರದ ಅಭಿವೃದ್ಧಿಗೆ ಕೆಎಸ್‌ಎನ್ ಶ್ರಮ ದೊಡ್ಡದು ಎಂದು ಬಣ್ಣಿಸಿದ ವಸತಿ ಸಚಿವ ವಿ.ಸೋಮಣ್ಣ

    ಮಾನ್ವಿ: ಹಿಂದುಳಿದ ದೇವದುರ್ಗ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಶ್ರಮ ಅಪಾರವಾಗಿದ್ದು ಎಲ್ಲರಿಗೂ ಮಾದರಿ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

    ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಗುರುವಾರ ಶಾಸಕ ಕೆ.ಶಿವನಗೌಡ ನಾಯಕರ 45ನೇ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೀರಾವರಿ ವಂಚಿತ ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸುವ ಮೂಲಕ ಈ ಭಾಗದ ಜನರ ಸೇವೆಗೆ ಅಣಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

    ಕರೊನಾ ಸಂದರ್ಭ ದೇವದುರ್ಗಕ್ಕಷ್ಟೇ ಸೀಮಿತವಾಗದೇ ಮಾನ್ವಿ-ಸಿರವಾರ ತಾಲೂಕಿನ ಜನರಿಗೂ ಆಹಾರ ಧಾನ್ಯ ಮತ್ತು ಅನ್ನ ಸಂತರ್ಪಣೆ ಮಾಡಿದ್ದಾರೆ. ದೇವದುರ್ಗದಲ್ಲಿ ಮೆಡಿಕಲ್ ಕಾಲೇಜು ಹೊರತುಪಡಿಸಿ ಉಳಿದೆಲ್ಲ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ರಸ್ತೆ, ಶಾಲೆ, ಸೇರಿದಂತೆ ತಾಲೂಕಿನ ಸವಾರ್ಂಗೀಣ ಅಭಿವೃದ್ಧಿ ಕೈಗೊಂಡಿದ್ದಾರೆ ಎಂದು ತಿಳಿಸಿದರು.

    ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿ ಅಭಿಮಾನದಿಂದ ಪಕ್ಷಾತೀತವಾಗಿ, ಜಾತ್ಯತೀತವಾಗಿ ಜನ್ಮದಿನ ಆಚರಿಸುತ್ತಿರುವುದು ಕೆ.ಶಿವನಗೌಡ ನಾಯಕ ಅವರಿಗಿರುವ ಜನಪರ ಕಾಳಜಿ ಕಾರಣ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಇರಬಾರದು. ಶಿವನಗೌಡ ನಾಯಕ ಎಲ್ಲ ವರ್ಗದ ಜನರನ್ನೂ ಪ್ರೀತಿಸುತ್ತಾರೆ. ದೇವದುರ್ಗ ಅಭಿವೃದ್ದಿ ಪಡಿಸುವ ಜೊತೆಗೆ ರಾಜ್ಯ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿ ಗುರಿತಿಸಿಕೊಂಡಿದ್ದಾರೆ ಎಂದರು.

    ಬಿಜೆಪಿ ರಾಜ್ಯ ಕಾರ್ಯದರ್ಶಿ ಅಶ್ವಥ ನಾರಾಯಣ, ಚೀಕಲಪರ್ವಿ ಸದಾಶಿವ ಶ್ರೀಗಳು, ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಸಂಸದರಾದ ರಾಜಾ ಅಮರೇಶ್ವರನಾಯಕ, ಕರಡಿ ಸಂಗಣ್ಣ, ಉಮೇಶ ಜಾಧವ್, ಮಾಜಿ ಸಚಿವ ಬಾಬುರಾವ್ ಚಿಂಚನೂರು, ಮಾಜಿ ಶಾಸಕರಾದ ಗುರುಪಾಟೀಲ್, ತಿಪ್ಪರಾಜ್ ಹವಲ್ದಾರ್ ಮಾತನಾಡಿದರು.

    ವೀರಗೋಟ ಸುಕ್ಷೇತ್ರದ ಅಡವಿಲಿಂಗ ಮಹಾರಾಜರು, ಮುಂಡರಗಿ ಶಿವರಾಯ ಶ್ರೀಗಳು, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ತ್ರಿವಿಕ್ರಮ ಜೋಷಿ, ಬಂಡೇಶ ವಲ್ಕಂದಿನ್ನಿ, ಜಿಪಂ ಮಾಜಿ ಸದಸ್ಯ ಗಂಗಣ್ಣ ಸಾಹುಕಾರ, ಜಿಲ್ಲಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಮಾನಪ್ಪನಾಯಕ, ಕೊಟ್ರೇಶಪ್ಪ ಕೋರಿ, ಜಗದೀಶ ವಕೀಲ, ರಾಜಕುಮಾರ, ಕೆಎಸ್‌ಎನ್ ಬಳಗದ ತಿಮ್ಮಾರಡ್ಡಿ ಭೋಗಾವತಿ, ಮಲ್ಲನಗೌಡ ನಕ್ಕುಂದಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ನಾಗಲಿಂಗಸ್ವಾಮಿ, ವೀರೇಶ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts