More

    ನೇತ್ರದಾನದಿಂದ ಪುಣ್ಯ ಪ್ರಾಪ್ತಿ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪನಾಯಕ ಅಭಿಪ್ರಾಯ

    ಮಾನ್ವಿ: ನೇತ್ರದಾನ ಸರ್ವ ಕಾಲಕ್ಕೂ ಶ್ರೇಷ್ಠದಾನ. ಮರಣ ನಂತರ ನಿಮ್ಮ ಕಣ್ಣುಗಳನ್ನು ದಾನ ಮಾಡುವುದರಿಂದ ದೇಶದಲ್ಲಿನ 1.25 ಲಕ್ಷ ಜನರಿಗೆ ನೇತ್ರದಾನ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪನಾಯಕ ಹೇಳಿದರು.

    ತಾಲೂಕಿನ ಜೀನೂರು ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಣ್ಣಿನ ವಿಭಾಗ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಪೋತ್ನಾಳ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಮರಣದ ನಂತರವೂ ನಿಮ್ಮ ಕಣ್ಣುಗಳನ್ನು ಜೀವಂತವಾಗಿರಿಸಲು ನೇತ್ರದಾನ ಮಾಡಿ ಆದರ್ಶರಾಗುವಂತೆ ಸಲಹೆ ನೀಡಿದರು.

    ನೇತ್ರಾಧಿಕಾರಿ ಯಲ್ಲಪ್ಪ ಕಂಡಗೊಳ್ಳಿ ಮಾತನಾಡಿ, ನೇತ್ರದಾನ ಮಾಡಲು ವಯಸ್ಸು, ಲಿಂಗ ಬೇಧವಿಲ್ಲ. ಪ್ರತಿಯೂಬ್ಬರೂ ನೇತ್ರದಾನ ಮಾಡಬಹುದು. ನೇತ್ರದಾನ ಮಾಡಿದವರು ಮರಣದ ನಂತರ ನಾಲ್ಕು ಗಂಟೆಯೊಳಗೆ ನೇತ್ರಗಳನ್ನು ಸಂಗ್ರಹಿಸಿಬೇಕಾಗುತ್ತದೆ. ಸಾಧ್ಯವಾದರೆ ಕಣ್ಣುಗಳನ್ನು ಪಾಲಿಥಿನ್ ಚೀಲದಲ್ಲಿ ಮಂಜುಗಡ್ಡೆ ಹಾಕಿ ಹಣೆಯ ಮೇಲಿರಿಸಿ ಹತ್ತಿರದ ಕಣ್ಣಿನ ಬ್ಯಾಂಕಿಗೆ ಅಥವಾ ರಿಮ್ಸ್ ಆಸ್ಪತ್ರೆ, ನೇತ್ರ ಭಂಡಾರ, ನವೋದಯ ವೈದ್ಯಕೀಯ ಕಾಲೇಜಿಗೆ ಮಾಹಿತಿ ನೀಡಬಹುದು. ಉಚಿತ ಸಹಾಯವಾಣಿ (104)ಗೆ ಕರೆ ಮಾಡಿದರೆ ನೇತ್ರ ಸಂಗ್ರಹಿಸಲಾಗುತ್ತದೆ ಎಂದರು.

    ಆರೋಗ್ಯ ನಿರೀಕ್ಷಣಾಧಿಕಾರಿ ದೇವೇಂದ್ರಪ್ಪ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಂಜುಳಾ, ಸಮುದಾಯ ಆರೋಗ್ಯಾಧಿಕಾರಿ ಸೋನಾಲಿ, ಅಂಗನವಾಡಿ ಕಾರ್ಯಕರ್ತೆ ಜಯಶೀಲಾ, ಆಶಾ ಕಾರ್ಯಕರ್ತೆ ಲಕ್ಷ್ಮೀ, ಗ್ರಾಮದ ಮುಖಂಡರಾದ ಬಸಪ್ಪ, ರಾಮಣ್ಣ ಭಜಂತ್ರಿ, ಯಲ್ಲಪ್ಪ, ವೀರಭದ್ರಪ್ಪ, ಪಂಪಾಪತಿ ಹಡಪದ, ರಡ್ಡೆಪ್ಪ, ಮಲ್ಲಪ್ಪ, ಮರಿಸ್ವಾಮಿ, ಬಸವರಾಜ, ಹುಸೇನ್‌ಭಾಷ, ನಿಂಗಪ್ಪ, ಯಂಕಪ್ಪ, ಸೋಮಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts