More

    ಮಾನ್ವಿ ಕ್ಷೇತ್ರದಲ್ಲಿ ಹಂಪಯ್ಯನಾಯಕಗೆ ಒಲಿದ ಮತದಾರ

    ಮಾನ್ವಿ: ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮಾನ್ವಿವೂ ಕ್ಷೇತ್ರ ಒಂದಾಗಿತ್ತು. ಗೆಲುವಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯನಾಯಕ ಅವರಿಗೆ ಮತದಾರರು ಗೆಲುವಿನ ಹಾರ ತೊಡಿಸಿದ್ದಾರೆ.

    ಹಂಪಯ್ಯ ನಾಯಕ 7,719 ಮತಗಳ ಅಂತರದಿಂದ ಪ್ರತಿ ಸ್ಪರ್ಧಿ ಬಿಜೆಪಿ ಬಿ.ವಿ.ನಾಯಕ ಸೋಲಿಸಿದ್ದಾರೆ. ಹಂಪಯ್ಯ ನಾಯಕ 66,922, ಬಿ.ವಿ.ನಾಯಕ 59,203 ಹಾಗೂ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ 25,990 ಮತಗಳನ್ನು ಪಡೆದುಕೊಂಡಿದ್ದಾರೆ.

    2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯನಾಯಕ 28,122 ಮತ ಪಡೆದು 4 ಸ್ಥಾನ ಪಡೆದುಕೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ 53,548 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದರು.

    ಬಿಜೆಪಿ ಅಭ್ಯರ್ಥಿಯಾಗಿದ್ದ ಶರಣಪ್ಪನಾಯಕ 30,250 ಹಾಗೂ ಪಕ್ಷೇತರ ಅಭ್ಯರ್ಥಿ ಡಾ.ಪ್ರೀತಿ ಮ್ಯಾತ್ರೆ 37,733 ಮತಗಳನ್ನು ಪಡೆದುಕೊಂಡಿದ್ದರು. ಮೊದಲನೆ ಸ್ಥಾನದಲ್ಲಿ ಇದ್ದವರು ಈಗ ಕೊನೇ ಸ್ಥಾನಕ್ಕೆ ಹೋಗಿದ್ದಾರೆ. 4 ಸ್ಥಾನದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಮೊದಲ ಸ್ಥಾನ ಪಡೆದು ಜಯಗಳಿಸಿದ್ದಾರೆ.

    ಇದನ್ನೂ ಓದಿ: ಗಣಿನಾಡಲ್ಲಿ ಮರಳಿದ ಕೈ ವೈಭವ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ

    ಜೆಡಿಎಸ್‌ಗೆ ಹಿನ್ನಡೆ ಕಾರಣವೇನು?

    ಕಳೆದ ಬಾರಿ ಗೆಲುವು ಕಂಡಿದ್ದ ಜೆಡಿಎಸ್ ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಚುನಾವಣೆ ಆರಂಭದಿಂದಲೂ ಶಾಸಕ ರಾಜಾ ವೆಂಕಟಪ್ಪನಾಯಕ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ ಕಾರ್ಯಕರ್ತರಿಗೆ ಹುಮ್ಮಸು ನೀಡಿದ್ದರು. ಜೆಡಿಎಸ್ ಗೆಲ್ಲುವ ವಿಶ್ವಾಸದಲ್ಲಿತ್ತು. ಅದು ಈಗ ಸುಳ್ಳುಗಿದೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯನಾಯಕ ಪರ ಕ್ಷೇತ್ರದಲ್ಲಿ ಜಾತಿ-ಭೇದವಿಲ್ಲದೇ ಸಿಂಪತಿ ಸೃಷ್ಟಿಯಾಗಿತ್ತು. ಇದು ಅವರ ಗೆಲುವಿಗೆ ಕಾರಣವಾಗಿರಬಹುದು ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.

    ಬಿಜೆಪಿ ಎಡವಿದ್ದು ಎಲ್ಲಿ?

    ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಗೆಲ್ಲಲು ಸಾಧ್ಯವಾಗಿಲ್ಲ. ಬಿ.ವಿ.ನಾಯಕ ಜಯಗೊಳಿಸುವ ಭರವಸೆ ಮೂಡಿಸಿದ್ದರು ಮತದಾರರನ ಕೃಪೆಗೆ ಪಾತ್ರರಾಗಲು ಸಾಧ್ಯವಾಗಲಿಲ್ಲ. ಬಿಜೆಪಿ ಸ್ಟಾರ ಪ್ರಚಾರ ಸುದೀಪ್, ಮೋದಿ ಹಾಗೂ ಅಮಿತ್ ಷಾ ಅವರ ಪ್ರಭಾವ ಮತಗಳಿಕೆ ಕೆಲಸ ಮಾಡಿಲ್ಲ. ಈ ಬಾರಿ ಸ್ಪರ್ಧಿಸಲು 3 ಜನ ಆಕಾಂಕ್ಷಿಗಳು ಸ್ಪರ್ಧೆಯಲ್ಲಿದ್ದರು.

    3 ಜನರಲ್ಲಿ ಕೊನೆ ಹಂತದಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಮಾನಪ್ಪನಾಯಕ, ಪೈಪೊಟಿ ನಡೆದಿತ್ತು. ಕೊನೆಗಳಿಗೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿ ಬಂದ ಬಿವಿ ನಾಯಕಗೆ ಟಿಕೆಟ್ ನೀಡಿ ಶತಾಯಗತಾಯ ಈ ಬಾರಿ ಬಿಜೆಪಿ ಗೆಲ್ಲಸಲೇ ಬೇಕು ಎಂದು ಪಣ ತೊಟ್ಟಿದ್ದ ಬಿಜೆಪಿ ನಾಯಕರಿಗೆ ಹಿನ್ನಡೆಯಾಗಿದೆ. ತಾಲೂಕು ಬಿಜೆಪಿ ಪಕ್ಷದಲ್ಲಿ ಬಣಗಳ ರಾಜಕೀಯ ಅಂತ್ಯವಾಗುವರೆಗೂ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಲಿ ಅವರಿಗೆ ಸೋಲು ಖಚಿತ ಎನ್ನಲಾಗುತ್ತಿದೆ.

    ಕೆಎಸ್‌ಎನ್ ತಂಡ

    ಈ ಬಾರಿ ಬಿಜೆಪಿ ಗೆಲ್ಲಲು ದೇವದುರ್ಕ ಶಾಸಕ ಕೆ.ಶಿನಗೌಡನಾಯಕ (ಕೆಎಸ್‌ಎನ್) ತಂಡ ಮಾವ ಬಿವಿ ನಾಯಕಗೆ ಸಾತ್ ನೀಡಿದ್ದರು. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ ಶಿವನಗೌಡ ನಾಯಕ ತಂಡ ಕರೊನಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಅನ್ನ ದಾಸೋಹ, ಮಾಸ್ಕ್, ಇತರೆ ಉಚಿತವಾಗಿ ವಿತರಿಸಿ ಸಿಂಪತಿ ಪಡೆದುಕೊಂಡಿದ್ದರು. ಶಿವನಗೌಡ ಇವರ ಪ್ರಭಾವದಲ್ಲಾದರೂ ಕ್ಷೇತ್ರದಲ್ಲಿ ಬಿಜೆಪಿ ಹೂ ಅರುಳಿತ್ತದೆ ಎಂದು ಕನಸು ಕಂಡಿದ್ದ ಬಿಜೆಪಿ ಮುಖಂಡರಿಗೆ ಗೆಲವು ಕನಸಾಗಿ ಉಳಿದುಕೊಂಡಿದೆ.

    ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಚ್ಚಳವಾಗಿತ್ತು. ಕಾರ್ಯಕರ್ತರ ಶ್ರಮದಿಂದ ಗ್ರಾಮೀಣ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲಾಗಿದೆ. ಕೆಲ ಮುಖಂಡರಿಂದ ವಿಜಯಕ್ಕೆ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಸೋಲಿನ ಆತ್ಮವಲೋಕನ ಮಾಡಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮತ್ತಷ್ಟು ಒತ್ತು ನೀಡಲಾಗುವುದು.
    | ಮಲ್ಲಿಕಾರ್ಜುನ ಜಕ್ಕಲದಿನ್ನಿ, ಅಧ್ಯಕ್ಷರು ತಾಲೂಕು ಬಿಜೆಪಿ ಮಾನ್ವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts