More

    ಆನೆ ಮೇಲೆ ಕುಳಿತ ಬಾಲದೇವಿ; 46ನೇ ದಸರಾ ಮೆರವಣಿಗೆ ಸಂಪನ್ನ

    ಮುಕ್ತಾಗುಚ್ಚ ಬೃಹನ್ಮಠ ಕಲ್ಮಠ ಆಯೋಜನೆ

    ಮಾನ್ವಿ: ಪಟ್ಟಣದ ಮುಕ್ತಗುಚ್ಚ ಬೃಹನ್ಮಠ ಕಲ್ಮಠ ವತಿಯಿಂದ 46ನೇ ದಸರಾ ಮೆರವಣಿಗೆ ಭಾನುವಾರ ಅದ್ದೂರಿಯಾಗಿ ನೆರವೇರಿತು.

    ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ರಾಜಾ ವೆಂಕಟಪ್ಪ ನಾಯಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ಬಿಚ್ಚಾಲಿ ಮಠದ ಆನೆ ಮೇಲೆ ಬಾಲ ದೇವಿಯನ್ನು ಕೂಡಿಸಿ, ಅಲಂಕರಿಸಿ, ಮೆರವಣಿಗೆ ನಡೆಸಲಾಯಿತು. ಈ ವೇಳೆ ನಂದಿಕೋಲು ಸೇವೆ, ಜನಪದ ನೃತ್ಯ ಕಲಾ ತಂಡಗಳು ಸೇರಿ ಪೂರ್ಣಕುಂಭ-ಕಳಸ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಯ ಶೋಭೆ ಹೆಚ್ಚಿಸಿದರು.

    ಕಲ್ಮಠದಿಂದ ಆರಂಭವಾದ ಮೆರವಣಿಗೆ ಬಸವವೃತ್ತ, ಅಂಬೇಡ್ಕರ್‌ವೃತ್ತ, ಸಿಮೆಂಟ್ ರಸ್ತೆ ಮುಖಾಂತರ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಚೌಡೇಶ್ವರಿಗೆ ಜಲಾಭೀಷೇಕ ನೆರವೇರಿಸಲಾಯಿತು. ನಂತರ ದಸರಾ ಮೆರವಣಿಗೆಗೆ ತೆರೆ ಎಳೆಯಲಾಯಿತು. ಶ್ರೀಮಠದಲ್ಲಿ ಪ್ರಸಾದ ವಿತರಣೆ ಆಯೋಜಿಸಲಾಗಿತ್ತು.

    ಮುಖಂಡರಾದ ರಾಜಾ ರಾಮಚಂದ್ರ ನಾಯಕ, ರಾಜಾ ವಸಂತ ನಾಯಕ, ಮಲ್ಲಿಕಾರ್ಜುನಗೌಡ ಬಲ್ಲಟಗಿ, ಹಿರಿಯ ವಕೀಲರಾದ ಎ.ಬಿ. ಉಪ್ಪಳಮಠ, ಗುಮ್ಮ ಬಸವರಾಜ, ತಿಮ್ಮರಡ್ಡಿ ಭೋಗಾವತಿ, ಮಹಾಂತೇಶಸ್ವಾಮಿ ರೌಡೂರು, ಕೃಪಾಸಾಗರ ಪಾಟೀಲ್, ಚನ್ನಬಸವಸ್ವಾಮಿ, ಶರಣಪ್ಪ ಮೇದಾ, ಶರಣಯ್ಯಸ್ವಾಮಿ, ಬಾಷಾಸಾಬ್, ಡಿ.ಬಸನಗೌಡ, ಮಂಜುನಾಥ ಕಮತರ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts