More

    ವಿಚ್ಛೇದಿತ ಉದ್ಯಮಿ ಜತೆ ಮಾನುಷಿ ಚಿಲ್ಲರ್​ ಡೇಟಿಂಗ್​! ಸಂಬಂಧ ಗುಟ್ಟಾಗಿ ಇಡುವ ವಿಶ್ವ ಸುಂದರಿಯ ಪ್ರಯತ್ನ ವಿಫಲ

    ಮುಂಬೈ: ಮಾಡೆಲಿಂಗ್ ಕ್ಷೇತ್ರದಲ್ಲಿ ಮಾನುಷಿ ಚಿಲ್ಲರ್ ಹೆಸರು ಚಿರಪರಿಚಿತ. 2017ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರುತ್ತಿದ್ದಂತೆ, ರಾಷ್ಟ್ರದ ಗಮನ ಸೆಳೆದಿದ್ದರು ಈ ಹರಿಯಾಣ ತರುಣಿ. ಆದರೆ, ವಿಶ್ವ ಸುಂದರಿ ಪಟ್ಟ ಸಿಕ್ಕ ಬಳಿಕ ಅವರ ಸಿನಿಮಾ ಕರಿಯರ್ ಮಾತ್ರ ವೇಗ ಪಡೆದುಕೊಳ್ಳಲೇ ಇಲ್ಲ. ಸಾಕಷ್ಟು ಸಿನಿಮಾಗಳಲ್ಲಿ ಅವರ ಹೆಸರು ತಳುಕು ಹಾಕಿಕೊಂಡರೂ, ಅಧಿಕೃತ ಅಂತ ಆಗಿದ್ದು ಅಕ್ಷಯ್ ಕುಮಾರ್ ಜತೆಗಿನ ಪೃಥ್ವಿರಾಜ್​ ಸಿನಿಮಾವೊಂದೆ.

    ಪೃಥ್ವಿರಾಜ್​ ಸಿನಿಮಾ ಸೋತರೂ ಮಾನುಷಿಗೆ ಸಿನಿಮಾ ಆಫರ್​ಗಳು ಬರುತ್ತಿವೆ. ಇದೀಗ ಮಾನಷಿ ಕುರಿತ ಮತ್ತೊಂದು ಬ್ರೇಕಿಂಗ್​ ಸುದ್ದಿ ಹೊರಬಿದ್ದಿದೆ. ಏನಪ್ಪಾ ಆ ಸುದ್ದಿ ಅಂದರೆ, ಮಾನುಷಿ ಅವರು 35 ವರ್ಷದ ಉದ್ಯಮಿ ನಿಖಿಲ್​ ಕಾಮತ್​ ಎಂಬುವರ ಜೊತೆ ಡೇಟಿಂಗ್​ ಮಾಡುತ್ತಿದ್ದಾರಂತೆ. ಅಂದಹಾಗೆ ನಿಖಿಲ್​ ಕಾಮತ್​, ಜೆರೊಧಾ ಕಂಪನಿಯ ಸಹ ಸಂಸ್ಥಾಪಕ. ಆಗಾಗ ಇಬ್ಬರು ಪ್ರವಾಸ ಹೋಗುತ್ತಿರುತ್ತಾರೆ ಮತ್ತು ಇತ್ತೀಚೆಗಷ್ಟೇ ರಿಷಿಕೇಶಕ್ಕೆ ಭೇಟಿ ನೀಡಿದ್ದರು ಎಂದು ವರದಿಯಾಗಿವೆ.

    ತಮ್ಮ ಸಂಬಂಧವನ್ನು ಇಬ್ಬರು ರಹಸ್ಯವಾಗಿ ಇಟ್ಟಿದ್ದಾರಂತೆ. ಎಲ್ಲಿ ಇಬ್ಬರ ಡೇಟಿಂಗ್​​ ವಿಚಾರ ಭಾರಿ ಸುದ್ದಿಯಾಗಿ ಮಾನುಷಿ ಚಿಲ್ಲರ್​ ಸಿನಿಮಾ ಜೀವನಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಸಂಬಂಧವನ್ನು ಆದಷ್ಟು ಗುಟ್ಟಾಗಿ ಇಡುವ ಪ್ರಯತ್ನ ಮಾಡುತ್ತಿದ್ದಾರೆಂದು ವರದಿಗಳು ತಿಳಿಸಿವೆ. 2021ರಿಂದಲೂ ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆಂದು ಹೇಳಲಾಗಿದೆ.

    ಅಂದಹಾಗೆ ನಿಖಿಲ್​ ಕಾಮತ್​ ಈ ಮುಂಚೆಯೇ ಮದುವೆ ಆಗಿದ್ದರು. 2019, ಏಪ್ರಿಲ್​ 18 ರಂದು ಅಮಂಡಾ ಪುರವಂಕರಾ ಎಂಬುವರನ್ನು ಮದುವೆಯಾಗಿದ್ದರು. ಆದರೆ, ಒಂದು ವರ್ಷ ತುಂಬುವುದರೊಳಗೆ ಇಬ್ಬರು ಬೇರೆಯಾಗಿದ್ದರು. 2021ರಲ್ಲಿ ಅಧಿಕೃತವಾಗಿ ಡಿವೋರ್ಸ್​ ಪಡೆದುಕೊಂಡಿದ್ದರು. ಮಾನುಷಿ ಅವರು ಈ ಹಿಂದೆ ಮಾಡೆಲ್​ ರೋಹಿತ್​ ಖಾಂದೇಲವಾಲ್​ ಎಂಬುವರ ಜೊತೆ ಡೇಟಿಂಗ್​ ನಡೆಸಿದ್ದರು ಎಂದು ಹೇಳಲಾಗಿದೆ.

    ಸಿನಿಮಾ ವಿಚಾರಕ್ಕೆ ಬಂದರೆ, ಮಾನುಷಿ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈ ಪೈಕಿ ಒಂದು ಚಿತ್ರ ಈಗಾಗಲೇ ಸದ್ದಿಲ್ಲದೆ ಪ್ರಾರಂಭವಾಗಿದೆ. ಅದೇ “ಟೆಹ್ರಾನ್​’. ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರವನ್ನು ಅರುಣ್​ ಗೋಪಾಲನ್​ ನಿರ್ದೇಶನ ಮಾಡುತ್ತಿದ್ದು, ಜಾನ್​ ಅಬ್ರಹಾಂ ನಾಯಕನಾಗಿ ನಟಿಸುತ್ತಿದಾರೆ. ಇದೊಂದು ಪಕ್ಕಾ ಥ್ರಿಲ್ಲರ್​ ಚಿತ್ರವಾಗಿದ್ದು, ಮ್ಯಾಡಕ್​ ಸಂಸ್ಥೆ ನಿರ್ಮಿಸುತ್ತಿದೆ. ಭಾರತವಲ್ಲದೆ, ಯೂರೋಪ್​ನಲ್ಲೂ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದಲ್ಲದೆ, ಮಾನುಷಿ ಇನ್ನೊಂದು ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. “ದಿ ಗ್ರೇಟ್​ ಇಂಡಿಯನ್​ ಫ್ಯಾಮಿಲಿ’ ಹೆಸರಿನ ಈ ಚಿತ್ರದಲ್ಲಿ ಅವರಿಗೆ ನಾಯಕನಾಗಿ ನಟಿಸುತ್ತಿರುವುದು ವಿಕ್ಕಿ ಕೌಶಲ್​. ಸದ್ಯ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. (ಏಜೆನ್ಸೀಸ್​)

    ವಿಚ್ಛೇದಿತ ಉದ್ಯಮಿ ಜತೆ ಮಾನುಷಿ ಚಿಲ್ಲರ್​ ಡೇಟಿಂಗ್​! ಸಂಬಂಧ ಗುಟ್ಟಾಗಿ ಇಡುವ ವಿಶ್ವ ಸುಂದರಿಯ ಪ್ರಯತ್ನ ವಿಫಲ

    32 ಕೆಜಿ ತೂಕದ ಸಂಗ್ರಾಣಿ ಕಲ್ಲು ಎತ್ತಿದ 11 ವರ್ಷದ ಪೋರ ಇವನೇ…

    ರಾತ್ರೋರಾತ್ರಿ ಮಸಣದಲ್ಲಿ ಸುಂದರ ಯುವತಿಯ ಫೋಟೊ ಇಟ್ಟು ವಾಮಾಚಾರ! ಕಾರಣ ನಿಗೂಢ…

    ಹಣದ ವಿಚಾರವಾಗಿ ಬೆದರಿಕೆ ಹಾಕಿ ಕೆಟ್ಟದಾಗಿ ನಿಂದನೆ: ಹಾಸ್ಯ ಕಲಾವಿದೆ ನಯನಾ ವಿರುದ್ಧ ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts