More

    ಮೀನುಗಾರಿಕಾ ಕೇಂದ್ರ ಆವರಣದಲ್ಲಿ ಶಾಸನ ಪತ್ತೆ: ಪೋರ್ಚುಗೀಸ್, ಆಳುಪ ಅರಸರಿಗೆ ಸೇರಿರುವ ಸಾಧ್ಯತೆ

    ಮಂಗಳೂರು: ಹೊಯ್ಗೆ ಬಜಾರ್ ಮೀನುಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ವರ್ಷದ ಹಿಂದೆ ಪತ್ತೆಯಾದ ಶಾಸನಗಳು ಪೋರ್ಚುಗೀಸ್ ಮತ್ತು ಆಳುಪ ಅರಸರಿಗೆ ಸೇರಿರುವ ಸಾಧ್ಯತೆ ಇದೆ ಎಂದು ಮೈಸೂರು ಪುರಾತತ್ವ ಇಲಾಖೆಯ ಶಾಸನ ವಿಭಾಗದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
    ಒಂದು ಶಾಸನದಲ್ಲಿ 11 ಸಾಲುಗಳಲ್ಲಿರುವ ಲಿಪಿ 11ನೇ ಶತಮಾನದ ಕನ್ನಡವನ್ನು ಹೋಲುತ್ತಿದೆ. ಇದು 5.5 ಅಡಿ ಉದ್ದ ಹಾಗೂ 1.5 ಅಡಿ ಅಗಲವಿದೆ. ಇನ್ನೊಂದು ಶಾಸನ ಆಂಗ್ಲ ಹಾಗೂ ಪೋರ್ಚುಗೀಸ್ ಲಿಪಿ ಹೊಂದಿದ್ದು, ಈ ಶಾಸನಗಳ ಇನ್ನಷ್ಟು ಪರಿಶೀಲನೆ ಹಾಗೂ ಅಧ್ಯಯನ ಅಗತ್ಯ ಎಂದು ಸಹಾಯಕ ಶಾಸನ ತಜ್ಞರಾದ ಶ್ರೀದೇವಿ ತೇಜಸ್ವಿನಿ ಹಾಗೂ ವೀರ ಮಣಿಕಂಠನ್ ಸುದ್ದಿಗಾರರಿಗೆ ತಿಳಿಸಿದರು.

    ಪೋರ್ಚುಗೀಸ್ ಶಾಸನ 2.5 ಅಡಿ ಅಗಲ ಹಾಗೂ 5.5 ಅಡಿ ಎತ್ತರವಿದೆ. ಇದರ ಲಿಪಿ ಸ್ಫುಟವಾಗಿವೆ. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನಡಿ ಕೌಶಲ ಅಭಿವೃದ್ಧಿ ಮತ್ತು ಸುರಕ್ಷಾ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿದೆ. ತರಬೇತಿ ಕೇಂದ್ರದ ಕಟ್ಟಡಕ್ಕಾಗಿ ವರ್ಷದ ಪತ್ತೆಯಾಗಿದ್ದವು. ಅಲ್ಲಿದ್ದ ಹಳೇ ತರಬೇತಿ ಕೇಂದ್ರದ ಕಟ್ಟಡವನ್ನು ಕೆಡವಿ ಅಡಿಪಾಯಕ್ಕಾಗಿ ಅಗೆದ ವೇಳೆ ಈ ಶಾಸನ ಕಲ್ಲುಗಳು ಕಂಡುಬಂದಿತ್ತು. ಅದನ್ನು ಯಾರೂ ಗಮನಿಸಿರಲಿಲ್ಲ. ಆದರೆ ಇತ್ತೀಚೆಗೆ ಮೀನುಗಾರಿಕೆ ವಿದ್ಯಾರ್ಥಿ ಶ್ರೇಯಸ್ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಸೆಂಥಿಲ್ ವೇಲ್ ಅವರಿಗೆ ತೋರಿಸಿದ್ದರು.

    ಈ ಬಗ್ಗೆ ವಿವರ ನೀಡಿದ ಸೆಂಥಿಲ್ ವೇಲ್, ನಾನು ಪ್ರಧಾನಮಂತ್ರಿ ಕಚೇರಿಗೆ ಚಿತ್ರವನ್ನು ಇ-ಮೇಲ್ ಮಾಡಿದೆ. 10 ನಿಮಿಷಗಳಲ್ಲೇ ಪ್ರತಿಕ್ರಿಯೆ ಬಂದಿದ್ದು, ಸಂಸ್ಕೃತಿ ಇಲಾಖೆ ಮುಖ್ಯಸ್ಥೆ ವಿದ್ಯಾವತಿ ಪುರಾತತ್ವ ಇಲಾಖೆ ಮೈಸೂರು ವಿಭಾಗದ ಸಹಾಯಕ ಶಾಸನ ತಜ್ಞರಿಗೆ ಅಧ್ಯಯನ ಮಾಡುವಂತೆ ಸೂಚನೆ ನೀಡಿದ್ದರು. ಅದರಂತೆ ಸೋಮವಾರ ಬೆಳಗ್ಗೆ ಆಗಮಿಸಿದ ಶಾಸನ ತಜ್ಞರು ಹಾಗೂ ಸಿಬ್ಬಂದಿ ಶಾಸನಗಳ ಪಡಿಯಚ್ಚು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts