More

    ರೂಪದರ್ಶಿ ಜೆಸ್ಸಿಕಾ ಲಾಲ್​ ಹಂತಕನಿಗೆ ಕೊನೆಗೂ ಸಿಕ್ಕಿತು ಬಿಡುಗಡೆ ಭಾಗ್ಯ

    ನವದೆಹಲಿ: ರೂಪದರ್ಶಿ ಜೆಸ್ಸಿಕಾ ಲಾಲ್​ ಅವರನ್ನು 1999ರಲ್ಲಿ ಹತ್ಯೆ ಮಾಡಿ 2 ದಶಕಕ್ಕೂ ಹೆಚ್ಚುಕಾಲ ಜೀವಾವಧಿ ಶಿಕ್ಷೆ ಅನುಭವಿಸಿದ ಕೊಲೆಗಾರ ಮನು ಶರ್ಮನನ್ನು ಸನ್ನಡತೆ ಹಾಗೂ ಅನುಕಂಪದ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. ಶಿಕ್ಷೆ ಮರುಚಿಂತನೆ ಮಂಡಳಿಯ (ಎಸ್​ಆರ್​ಬಿ) ಶಿಫಾರಸನ್ನು ಆಧರಿಸಿ ಮನು ಶರ್ಮನನ್ನು ಬಿಡುಗಡೆ ಮಾಡಲು ದೆಹಲಿಯ ಲೆಫ್ಟಿನೆಂಟ್​ ಗವರ್ನರ್​ ಅನಿಲ್​ ಬೈಜಾಲ್​ ಆದೇಶ ಹೊರಡಿಸಿದ್ದಾರೆ.

    ಮನು ಸರ್ಮ ಸೇರಿ 34 ಸಜಾಬಂಧಿಗಳನ್ನು ಸನ್ನಡತೆ ಮತ್ತು ಅನುಕಂಪದ ಆಧಾರದಲ್ಲಿ ಬಿಡುಗಡೆ ಮಾಡಲು ಅರ್ಹರಾಗಿರುವವರ ಬಿಡುಗಡೆ ಕುರಿತು ಚರ್ಚಿಸಲು ಎಸ್​ಆರ್​ಬಿ ಕಳೆದ ತಿಂಗಳು ಸಭೆ ನಡೆಸಿತ್ತು. ಪೆರೊಲ್​ ಮೇಲೆ ತೆರಳಿ ರೇಪ್​ ಮತ್ತು ಕೊಲೆ, ದರೋಡೆ ಮಾಡುವಾಗ ಹತ್ಯೆ, ಭಯೋತ್ಪಾದನಾ ಕೃತ್ಯದಲ್ಲಿ ಹತ್ಯೆ ಮತ್ತು ಕೊಲೆ ಪ್ರಕರಣಗಳಂಥ ಪ್ರಕರಣಗಳನ್ನು ಹೊರತುಪಡಿಸಿ, ಈಗಾಗಲೆ 14 ವರ್ಷಗಳ ಜೀವಾವಧಿ ಶಿಕ್ಷೆಯನ್ನು ಪೂರೈಸಿರುವ ಸಜಾಬಂಧಿಗಳನ್ನು ಬಿಡುಗಡೆ ಮಾಡುವ ಕುರಿತು ಚರ್ಚಿಸಿತ್ತು.

    ಇದಕ್ಕೂ ಮುನ್ನ 2019ರ ನವೆಂಬರ್​ನಲ್ಲಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಮನು ಶರ್ಮನ ವಕೀಲ ಅಮಿತ್​ ಸಹಾನಿ, ಜೈಲಿನಲ್ಲಿದ್ದು ಸಂಪೂರ್ಣ ಶಿಕ್ಷಾವಧಿಯನ್ನು ಪೂರ್ಣಗೊಳಿಸದ್ದಲ್ಲದೆ, ಶಿಕ್ಷಾವಧಿಯಲ್ಲಿ ಸನ್ನಡತೆ ತೋರಿದರೂ ನನ್ನ ಕಕ್ಷಿದಾರರನ್ನು ಬಿಡುಗಡೆ ಮಾಡಲು ಎಸ್​ಆರ್​ಬಿ ನಾಲ್ಕು ಬಾರಿ ನಿರಾಕರಿಸಿದೆ. ಇದು ನ್ಯಾಯಸಮ್ಮತವಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಎಸ್​ಆರ್​ಬಿಯ ಮುಂದಿನ ಸಭೆಯಲ್ಲಿ ಮನು ಶರ್ಮನನ್ನು ಬಿಡುಗಡೆ ಮಾಡುವ ಕುರಿತು ಚರ್ಚಿಸುವಂತೆ ದೆಹಲಿ ಹೈಕೋರ್ಟ್​ ಸೂಚನೆ ನೀಡಿತ್ತು. ಅದರಂತೆ ಎಸ್​ಆರ್​ಬಿ ಮೇ 11ರಂದು ನಡೆದಿದ್ದ ಸಭೆಯಲ್ಲಿ ಮನು ಶರ್ಮನ ಬಿಡುಗಡೆ ವಿಷಯದ ಕುರಿತೂ ಚರ್ಚಿಸಿತ್ತು.

    ಇದನ್ನೂ ಓದಿ: ವಿಶಾಖಪಟ್ಟಣ ವಿಷಾನಿಲ ದುರಂತಕ್ಕೆ ಕಾರಣರಾರು? ವರದಿ ಸಲ್ಲಿಸಿದ ನ್ಯಾಯಾಂಗ ತನಿಖಾ ಸಮಿತಿ

    ಹರಿಯಾಣದ ಪ್ರಭಾವಿ ರಾಜಕಾರಣಿ ವಿನೋದ್​ ಶರ್ಮ ಅವರ ಪುತ್ರನಾದ ಸಿದ್ಧಾರ್ಥ ವಸಿಷ್ಠ (43) ಎಂಬ ಮೂಲನಾಮ ಹೊಂದಿರುವ ಮನು ಶರ್ಮ 1999ರ ಏಪ್ರಿಲ್​ 30ರಂದು ಮದ್ಯ ವಿತರಣೆ ಮಾಡುತ್ತಿದ್ದ ರೂಪದರ್ಶಿ ಜೆಸ್ಸಿಕಾ ಲಾಲ್​ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ. ಬಾರ್​ ಮುಚ್ಚುವ ಸಮಯವಾದ್ದರಿಂದ, ತನಗೆ ಮದ್ಯ ಕೊಡಲು ನಿರಾಕರಿಸಿದರು ಎಂಬ ಕಾರಣಕ್ಕಾಗಿ ಈತ ಜೆಸ್ಸಿಕಾ ಅವರನ್ನು ಸಾಯಿಸಿದ್ದ.
    ಇದರ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಮನು ಶರ್ಮನನ್ನು ಖುಲಾಸೆಗೊಳಿಸಿತ್ತು. ಆ ಹಂತದಲ್ಲಿ ದೇಶಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್​ ಮತ್ತೊಮ್ಮೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು. ವಿಚಾರಣೆ ಅವಧಿಯಲ್ಲಿ ಹಾಜರುಪಡಿಸಲಾದ ಭೌತಿಕ ಸಾಕ್ಷ್ಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಅಧೀನ ನ್ಯಾಯಾಲಯ ಎಡವಿದೆ ಎಂದು ಹೇಳಿ 2006ರಲ್ಲಿ ಮನು ಶರ್ಮನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2010ರಲ್ಲಿ ಸುಪ್ರೀಂಕೋರ್ಟ್​ ಈ ತೀರ್ಪನ್ನು ಎತ್ತಿಹಿಡಿದಿತ್ತು.

    ಜೈಲಿನಲ್ಲಿ ಉದಾತ್ತ ಸೇವೆ: ಮನು ಶರ್ಮ ತನ್ನ ಶಿಕ್ಷಾವಧಿಯಲ್ಲಿ ಜೈಲಿನಲ್ಲಿ ಸಿದ್ಧಾರ್ಥ ವಸಿಷ್ಠ ಚಾರಿಟಬಲ್​ ಟ್ರಸ್ಟ್​ ಅನ್ನು ಸ್ಥಾಪಿಸಿದ್ದ. ಅಂದಾಜು ಎಂಟು ವರ್ಷಗಳ ಹಿಂದೆ ತಿಹಾರ್​ ಜೈಲಿನಲ್ಲಿ ಸ್ಥಾಪನೆಗೊಂಡ ಈ ಟ್ರಸ್ಟ್​ ಮೂಲಕ ಸಜಾಬಂಧಿಗಳಾಗಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಿದ್ದ. ಇದು ಆತನನ್ನು ಬಿಡುಗಡೆಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು.

    ಕರೊನಾ ದೂರವಿಟ್ಟು ಬೆಂಗಳೂರಿನಿಂದ 2,000 ಕಿ.ಮೀ ಕಾಲ್ನಡಿಗೆಯಲ್ಲಿ ಮನೆ ತಲುಪಿದ, ಹೊಂಚು ಹಾಕಿದ್ದ ವಿಧಿಯನ್ನು ವಂಚಿಸಲಾಗಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts