More

    ರಾಜೀನಾಮೆ ನೀಡಿ ಒಂದೇ ದಿನದಲ್ಲಿ ಹಿಂಪಡೆದ ಬಿಜೆಪಿ ಸಂಸದ! ಮನವೊಲಿಸುವಲ್ಲಿ ಯಶಸ್ವಿಯಾದ ಸಿಎಂ

    ಗಾಂಧಿನಗರ: ಗುಜರಾತ್​ನ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಮನ್ಸುಖ್​ ವಾಸವಾ ಮಂಗಳವಾರದಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬುಧವಾರದಂದು ಅದನ್ನು ವಾಪಾಸು ಪಡೆದಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಂತರ ಅವರು ರಾಜೀನಾಮೆ ನಿರ್ಧಾರವನ್ನು ಕೈ ಬಿಟ್ಟಿರುವುದಾಗಿ ಹೇಳಲಾಗಿದೆ.

    ಇದನ್ನೂ ಓದಿ: ಬಿಜೆಪಿ ಹಿರಿಯ ಸಂಸದ ರಾಜೀನಾಮೆ; ನನ್ನ ತಪ್ಪಿಂದ ಪಕ್ಷಕ್ಕೆ ತೊಂದರೆಯಾಗಬಾರದೆಂದ ಮಾಜಿ ಕೇಂದ್ರ ಸಚಿವ

    ಮನ್ಸುಖ್​ ಅವರು ಮಂಗಳವಾರದಂದು ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್​ ಪಾಟಿಲ್​ ಅವರಿಗೆ ಕಳುಹಿಸಿಕೊಟ್ಟಿದ್ದರು. ನನಗೆ ಪಕ್ಷ ಹೆಚ್ಚಿನ ಜವಾಬ್ದಾರಿಯನ್ನೇ ಕೊಟ್ಟಿತ್ತು. ನನ್ನ ತಪ್ಪಿನಿಂದಾಗಿ ಪಕ್ಷಕ್ಕೆ ಕೆಟ್ಟ ಹೆಸರು ಬರಬಾರದೆಂದು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು. ಮುಂದಿನ ಕೇಂದ್ರ ಬಜೆಟ್​ ಅಧಿವೇಶನದ ಸಮಯದಲ್ಲಿ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಅವರು ಹೇಳಿಕೊಂಡಿದ್ದರು.

    ರಾಜೀನಾಮೆ ನೀಡಿದ ನಂತರ ಅವರು ಸಿಆರ್​ ಪಾಟೀಲ್​ರನ್ನು ಭೇಟಿಯಾಗಿದ್ದಾರೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ವಿಜಯ್​ ರೂಪಾಣಿ ಅವರನ್ನೂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅದಾದ ನಂತರ ತಮ್ಮ ರಾಜೀನಾಮೆಯನ್ನು ವಾಪಾಸು ಪಡೆದಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಒಣಗಿಸಿದ್ದ ಬಟ್ಟೆ ತರಲು ಹೋದ ಯುವತಿಯನ್ನು ಅಪಹರಿಸಿ ರೇಪ್​ ಮಾಡಿದ ಪಾಪಿಗಳು!

    ಆರು ಬಾರಿ ಭರೂಚ್​ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಮನ್ಸುಖ್​ ಅವರು, ರಾಜ್ಯ ಬಿಜೆಪಿಯೊಂದಿಗೆ ಮನಸ್ಥಾಪ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ತಾವು ಎತ್ತಿದ್ದ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಬೇಸರದಿಂದ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. (ಏಜೆನ್ಸೀಸ್​)

    ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

    ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts