More

    ಸಂವಿಧಾನ ನಮಗೆ ಮತ ಹಾಕುವ ಸ್ವಾತಂತ್ರ ದೊರಕಿಸಿದೆ: ಕುಮಾರ ಪೂಜಾರ

    ಗದಗ: ಜಿಲ್ಲೆಯ ಗದಗ ತಾಲೂಕಿನ ಲಕ್ಕುಂಡಿ ಗ್ರಾ ಪಂ ವ್ಯಾಪ್ತಿಯಲ್ಲಿ ಇಂದು ಆರಂಭಗೊಂಡ ಸಮುದಾಯ ಕಂದಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಕುಮಾರ ಪೂಜಾರ, ಸಹಾಯಕ ನಿರ್ದೇಶಕರು ಭೇಟಿ ನೀಡಿ,  ಹಾಜರಿದ್ದ ಕೂಲಿಕಾರರಿಗೆ ನರೇಗಾ ಯೋಜನೆಯ ಮಹತ್ವ, ಉದ್ದೇಶ, ಓಒಒS ಹಾಜರಾತಿ, ಅಳತೆ ಪ್ರಮಾಣ, ಜಾಬ್ ಕಾರ್ಡ ಅಪ್ಡೇಟ, ಮಹಿಳಾ ಭಾಗವಹಿಸುವಿಕೆ, ವಿಶೇಷ ವರ್ಗದವರ ಭಾಗವಹಿಸುವಿಕೆ ಕುರಿತಂತೆ ಮಾಹಿತಿ ಹಂಚಿಕೊಳ್ಳಲಾಯಿತು.
    ನಂತರ ಹಾಜರಿದ್ದ ಕೂಲಿಕಾರರೊಂದಿಗೆ ಮಾತನಾಡಿ ಉತ್ತಮ ಭಾರತದ ಭವಿಷ್ಯಕ್ಕಾಗಿ ಮತ ಚಲಾಯಿಸುವ ಮೂಲಕ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ನಮ್ಮ ಹಿಂದಿನ ತಲೆಮಾರುಗಳ ಹಿರಿಯರನ್ನು ಗೌರವಿಸಬಹುದು.

    ಮತದಾನ ಮಾಡುವುದು ನಮ್ಮ ನಾಗರಿಕ ಜವಾಬ್ದಾರಿ. ಇದು ನಮ್ಮ ರಾಷ್ಟ್ರದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಭಾರತೀಯರು ನಮ್ಮ ಸ್ವಾತಂತ್ರ್ಯವನ್ನು ಗೆಲ್ಲಲು ಹೋರಾಡಿದರು ಮತ್ತು ಅದರ  ಕಾರಣದಿಂದಾಗಿ ನಾವು ಮತದಾನದ ಹಕ್ಕನ್ನು ಹೊಂದಿದ್ದೇವೆ ಎಂದರು.
    ಚುನಾವಣೆಯಲ್ಲಿ ಮತ ಹಾಕುವ ಸ್ವಾತಂತ್ರ್ಯ ನಿಮಗಿದೆ. ಮತ ಹಾಕಲು ಯಾರೂ ಯಾವುದೇ  ಆಮಿಷಕ್ಕೆ ಒಳಗಾಗಬೇಡಿ ಉತ್ತಮ ನಾಳೆಗಳು ನಮಗೆ ಬೇಕಾದರೆ ಮತದಾನ ಮಾಡುವ ಮೂಲಕ ಆ ಒಳ್ಳೆಯ ನಾಳೆಗಳನ್ನು ಪಡೆಯೋಣ,  ಎಲ್ಲಾ ಅರ್ಹ ನಾಗರಿಕರು ಮತದಾನದ ಹಕ್ಕು ಚಲಾಯಿಸಬೇಕು. ಮತದಾರ ದೇಶದ ಉತ್ತಮ ಭವಿಷ್ಯಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಆ ಬುನಾದಿಯನ್ನು ಸದೃಢಗೊಳಿಸಿ ಎಂದರು.

    ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ರಾಜಕುಮಾರ ಭಜಂತ್ರಿ, ತಾಲೂಕ ಐ ಇ ಸಿ ಸಂಯೋಜಕ, ತಾಂತ್ರಿಕ ಸಹಾಯಕ, ಡಿಇಒ, ಬಿ.ಎಫ್.ಟಿ, ಗ್ರಾ.ಕಾ.ಮೀ, ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು…. ಸಂವಿಧಾನ ನಮಗೆ  ಮತ ಹಾಕುವ ಸ್ವಾತಂತ್ರ ದೊರಕಿಸಿದೆ,
    ಹೌದು ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ  ಉದ್ಯೋಗ ಖಾತರಿ ಕಾಮಗಾರಿ ವೀಕ್ಷಸಿ ಮತದಾನ ಜಾಗೃತಿ ಮೂಡಿಸಿದ ಕುಮಾರ ಪೂಜಾರ ಸಹಾಯಕ ನಿರ್ಧೇಶಕ (ಗ್ರಾ.ಉ) ತಾಲ್ಲೂಕು ಪಂಚಾಯತ ಗದಗ. ಗದಗ:- ಜಿಲ್ಲೆಯ ಗದಗ ತಾಲೂಕಿನ ಲಕ್ಕುಂಡಿ ಗ್ರಾ ಪಂ ವ್ಯಾಪ್ತಿಯಲ್ಲಿ ಇಂದು ಆರಂಭಗೊಂಡ ಸಮುದಾಯ ಕಂದಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶ್ರೀ. ಕುಮಾರ ಪೂಜಾರ, ಸಹಾಯಕ ನಿರ್ದೇಶಕರು (ಗ್ರಾಉ) ಭೇಟಿ ನೀಡಿ,  ಹಾಜರಿದ್ದ ಕೂಲಿಕಾರರಿಗೆ ನರೇಗಾ ಯೋಜನೆಯ ಮಹತ್ವ, ಉದ್ದೇಶ, ಓಒಒS ಹಾಜರಾತಿ, ಅಳತೆ ಪ್ರಮಾಣ, ಜಾಬ್ ಕಾರ್ಡ ಅಪ್ಡೇಟ, ಮಹಿಳಾ ಭಾಗವಹಿಸುವಿಕೆ, ವಿಶೇಷ ವರ್ಗದವರ ಭಾಗವಹಿಸುವಿಕೆ ಕುರಿತಂತೆ ಮಾಹಿತಿ ಹಂಚಿಕೊಳ್ಳಲಾಯಿತು.

    ನಂತರ ಹಾಜರಿದ್ದ ಕೂಲಿಕಾರರೊಂದಿಗೆ ಮಾತನಾಡಿ ಉತ್ತಮ ಭಾರತದ ಭವಿಷ್ಯಕ್ಕಾಗಿ ಮತ ಚಲಾಯಿಸುವ ಮೂಲಕ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ನಮ್ಮ ಹಿಂದಿನ ತಲೆಮಾರುಗಳ ಹಿರಿಯರನ್ನು ಗೌರವಿಸಬಹುದು.

    ಮತದಾನ ಮಾಡುವುದು ನಮ್ಮ ನಾಗರಿಕ ಜವಾಬ್ದಾರಿ. ಇದು ನಮ್ಮ ರಾಷ್ಟ್ರದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಭಾರತೀಯರು ನಮ್ಮ ಸ್ವಾತಂತ್ರ್ಯವನ್ನು ಗೆಲ್ಲಲು ಹೋರಾಡಿದರು ಮತ್ತು ಅದರ  ಕಾರಣದಿಂದಾಗಿ ನಾವು ಮತದಾನದ ಹಕ್ಕನ್ನು ಹೊಂದಿದ್ದೇವೆ ಎಂದರು.
    ಚುನಾವಣೆಯಲ್ಲಿ ಮತ ಹಾಕುವ ಸ್ವಾತಂತ್ರ್ಯ ನಿಮಗಿದೆ. ಮತ ಹಾಕಲು ಯಾರೂ ಯಾವುದೇ  ಆಮಿಷಕ್ಕೆ ಒಳಗಾಗಬೇಡಿ ಉತ್ತಮ ನಾಳೆಗಳು ನಮಗೆ ಬೇಕಾದರೆ ಮತದಾನ ಮಾಡುವ ಮೂಲಕ ಆ ಒಳ್ಳೆಯ ನಾಳೆಗಳನ್ನು ಪಡೆಯೋಣ,  ಎಲ್ಲಾ ಅರ್ಹ ನಾಗರಿಕರು ಮತದಾನದ ಹಕ್ಕು ಚಲಾಯಿಸಬೇಕು. ಮತದಾರ ದೇಶದ ಉತ್ತಮ ಭವಿಷ್ಯಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಆ ಬುನಾದಿಯನ್ನು ಸದೃಢಗೊಳಿಸಿ ಎಂದರು.

    ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ರಾಜಕುಮಾರ ಭಜಂತ್ರಿ, ತಾಲೂಕ ಐ ಇ ಸಿ ಸಂಯೋಜಕ, ತಾಂತ್ರಿಕ ಸಹಾಯಕ, ಡಿಇಒ, ಬಿ.ಎಫ್.ಟಿ, ಗ್ರಾ.ಕಾ.ಮೀ, ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts