More

    ಮಣೂರು ಕಾಂಕ್ರೀಟ್ ರಸ್ತೆ ಕಾಮಗಾರಿ ಚಾಲನೆ

    ಕೋಟ: ಕೋಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಕರಾವಳಿ ಭಾಗದ ರಸ್ತೆ ಅಭಿವೃದ್ಧಿಗೆ ಕೊನೆಗೂ ಕಾಯಕಲ್ಪ ಕೂಡಿಬಂದಿದ್ದು, ಕಾಂಕ್ರೀಟ್ ಕಾಮಗಾರಿಗೆ ಚಾಲನೆ ದೊರಕಿದೆ. ಎರಡು ವರ್ಷಗಳಿಂದ ಇಲ್ಲಿನ ರಸ್ತೆಗಳಲ್ಲಿ ವಾಹನ ಸಂಚರಿಸುವಾಗ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಸಂಚರಿಸಬೇಕಾಗಿತ್ತು. ರಸ್ತೆ ತುಂಬಾ ಹೊಂಡಗಳು ತುಂಬಿದ್ದವು. ಈ ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆಗಳು ನಡೆದಿವೆ. ಕೋಟ ಗ್ರಾಪಂ ವ್ಯಾಪ್ತಿಯ ಮಣೂರು ಪಡುಕರೆ ಕರಾವಳಿ ಸಂಪರ್ಕಿಸುವ ರಸ್ತೆಯ ನಿರ್ಲಕ್ಷೃದ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿತು. ಇದಾದ ಕೆಲ ತಿಂಗಳುಗಳಲ್ಲೆ ಕಾಂಕ್ರೀಟ್ ರಸ್ತೆಯಾಗಿ ರೂಪುಗೊಳ್ಳುತ್ತಿದೆ. ಕೋಟ ಗ್ರಾಪಂ ವ್ಯಾಪ್ತಿಯ ಮಣೂರು ಕೊನೆಯ ಭಾಗದಿಂದ ಪಡುಕರೆ ಐಸ್ ಪ್ಲಾಂಟ್‌ವರೆಗೆ 1.5 ಕಿ.ಮೀ. ಕಾಂಕ್ರೀಟ್ ರಸ್ತೆ ಕಾಮಗಾರಿ ಲೋಕೋಪಯೋಗಿ ಇಲಾಖೆ ಮೂಲಕ ನಡೆಯುತ್ತಿದೆ. 5.5 ಮೀಟರ್ ಅಂದರೆ 15 ಫೀಟ್ ಅಗಲ ಕಾಂಕ್ರೀಟ್ ರಸ್ತೆ ,ಇನ್ನುಳಿದಂತೆ 5.6 ಕಿ.ಮೀ ಡಾಂಬರು ರಸ್ತೆ ನಿರ್ಮಾಣವಾಗಲಿದೆ.

    ಬಹು ವರ್ಷಗಳಿಂದ ಈ ರಸ್ತೆಯ ವಿಚಾರವಾಗಿ ಜನಪ್ರತಿನಿಧಿಗಳ ಬಳಿ ಹಲವು ಬಾರಿ ಮನವಿ ನೀಡಿದ್ದೇವೆ. ಜನರು ಪ್ರತಿಭಟನೆ ನಡೆಸಿದ್ದರು. ಆದರೆ ಆ ದಿನಗಳ ಕನಸು ನನಸಾಗುತ್ತಿದೆ. ನಮ್ಮ ಮಣೂರು ಜಟ್ಟಿಗೇಶ್ವರ ದೇವಳದಿಂದ ಸರ್ಕಲ್ ಬಳಿವರೆಗೆ ಕಾಂಕ್ರೀಟ್ ರಸ್ತೆಯಾಗುತ್ತಿರುವುದು ಸಂತಸ ತಂದಿದೆ.
    ಭುಜಂಗ ಗುರಿಕಾರ, ಕೋಟ ಗ್ರಾಪಂ ಸದಸ್ಯರು

    ಕುಂಭಾಶಿ ಭಾಗದಲ್ಲೂ ಹೊಂಡಗುಂಡಿ ರಸ್ತೆ
    ಇದಲ್ಲದೆ ಕುಂಭಾಶಿ, ತೆಕ್ಕಟ್ಟೆ, ಕೋಟತಟ್ಟು, ಸಾಲಿಗ್ರಾಮ ಪ.ಪಂ.ನಿಂದ ಕೋಡಿ ಕನ್ಯಾಣ ಗ್ರಾಪಂವರೆಗೆ ಅಲ್ಲಲ್ಲಿ ಅರೆ ಬರೆ ಕಾಂಕ್ರೀಟ್ ರಸ್ತೆಯಾಗಿದ್ದು, ಹೆಚ್ಚಿನ ಭಾಗಗಳು ಹೊಂಡ ಕಣಿವೆಗಳಿಂದ ಕೂಡಿದ ಡಾಂಬರ್ ರಸ್ತೆಗಳು ಈ ಬಗ್ಗೆ ಆಯಾ ಭಾಗ ಜನರು ಜನಪ್ರತಿನಿಧಿಗಳಿಗೆ ಮನವಿ ನೀಡಿ ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts