More

    ಎಲ್ಲ ಸುಖಗಳ ಮೂಲ ಆರೋಗ್ಯ: ಲಾಕ್​ಡೌನ್​ ನಿಯಮ ಮೀರಿದರೆ ಕರೊನಾದಿಂದ ರಕ್ಷಣೆ ಅಸಾಧ್ಯ: ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮೋದಿ

    ನವದೆಹಲಿ: ಕರೊನಾ ಸೋಂಕಿನಿಂದ ಜನರ ರಕ್ಷಣೆ ಮಾಡಲು ಇದ್ದ ಏಕೈಕ ಮಾರ್ಗ ಲಾಕ್​ಡಾನ್​. ಹೀಗಾಗಿ ಇದನ್ನು ಜಾರಿಗೊಳಿಸಬೇಕಾಯಿತು. ಲಾಕ್​ಡೌನ್​ ಜಾರಿ ಮಾಡಿದ್ದರಿಂದ ಹಲವು ಮಂದಿ ನನ್ನ ಮೇಲೆ ಕೋಪಗೊಂಡಿದ್ದಾರೆ. ನೀವು ಹಾಗೂ ನಿಮ್ಮ ಕುಟುಂಬದ ರಕ್ಷಣೆಗಾಗಿ ನಾನು ಈ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

    ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಇಡೀ ವಿಶ್ವಕ್ಕೆ ಕರೊನಾ ಸೋಂಕು ಹರಡಿದೆ. ಇದರ ವಿರುದ್ಧ ವಿಶ್ವವೇ ಹೋರಾಡುತ್ತಿದೆ. ನಾವು ಕೂಡ ಹೋರಾಟ ಮಾಡಬೇಕಾಗಿದೆ. ಲಾಕ್​ಡೌನ್​ ಕರೊನಾ ವಿರುದ್ಧದ ಹೋರಾಟ. ಈ ನಿರ್ಧಾರ ಕೈಗೊಂಡಿದ್ದಕ್ಕೆ ನಾನು ನಿಮ್ಮಲಿ ಕ್ಷಮೆ ಯಾಚಿಸುತ್ತೇನೆ ಎಂದು ಅವರು ಹೇಳಿದರು.
    ಲಾಕ್​ಡೌನ್​ ಲಕ್ಷ್ಮಣ ರೇಖೆಯನ್ನು ಯಾರು ದಾಟಬಾರದು. ಕರೊನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕಿದೆ ಎಂದು ಅವರು ಹೇಳಿದರು.

    ಆರೋಗ್ಯವೇ ಭಾಗ್ಯ: ದೇಶದ ಜನರ ಆರೋಗ್ಯವೇ ಭಾಗ್ಯ. ಲಾಕ್​ಡೌನ್​ ನಿಯಮ ಉಲ್ಲಂಘಿಸಿದರೆ ಸೋಂಕಿನಿಂದ ರಕ್ಷಣೆ ಸಾಧ್ಯ ಇಲ್ಲ. ಕೆಲವರು ಲಾಕ್​ಡೌನ್​ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನಾದರೂ ಮನೆಯಲ್ಲಿದ್ದು ವೈರಸ್​ ಸೋಂಕಿನಿಂದ ರಕ್ಷಣೆ ಪಡೆಯಿರಿ. ಇದು ಒಂದೆರೆಡು ದಿನ ಕಠಿಣ ಅನಿಸಬಹುದು. ಆದರೂ ಸೋಂಕಿನಿಂದ ನಮಗೆ ರಕ್ಷಣೆ ನೀಡುತ್ತದೆ.

    ಮೊದಲು ಕರೊನಾ ವೈರಸ್​ ಪತ್ತೆಯಾದ ಹುಬೈ ಪ್ರಾಂತ್ಯ ಬಿಟ್ಟು ಗುಳೆ ಹೋಗುತ್ತಿರುವ ನಾಗರಿಕರು: ತಡೆದ ಪೊಲೀಸರ ಮೇಲೆ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts