More

    ಇಂಡಿಯಾ ಬುಕ್ ರೆಕಾರ್ಡ್ಸ್ ಸೇರಿದ ದ್ವಿತಾಳ ಪ್ರಯೋಗ: ದೇಶದಲ್ಲೇ ಮೊದಲ ಬಾರಿಗೆ ಸಾಧನೆ ಮಾಡಿದ ಮಂಜುನಾಥ್

    ಪುತ್ತೂರು: ಭರತನಾಟ್ಯದ ಪರಿಕಲ್ಪನೆಗಳೊಂದಿಗೆ ವಿದ್ವಾನ್ ಮಂಜುನಾಥ್ ಪುತ್ತೂರು ನಿರ್ವಹಿಸಿದ, ಎರಡು ಕೈಗಳಲ್ಲಿ ವಿಭಿನ್ನ ತಾಳ ಪ್ರಯೋಗ ಪ್ರತಿಷ್ಠಿತ ಇಂಡಿಯಾ ಬುಕ್ ಆ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.
    ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿಯಾಗಿರುವ ಇವರು ದೇಶದಲ್ಲೇ ಮೊದಲ ಬಾರಿಗೆ ಶಾಸೀಯ ಕಲಾಪ್ರಕಾರದಲ್ಲೇ ದ್ವಿತಾಳ ಪ್ರಯೋಗ ಮಾಡಿ ದಾಖಲೆ ಸೃಷ್ಟಿಸಿದ್ದಾರೆ. ಎರಡು ಕೈಗಳಲ್ಲಿ ಏಕಕಾಲಕ್ಕೆ 23 ನಿಮಿಷ, 52 ಸೆಕೆಂಡುಗಳಲ್ಲಿ ಗರಿಷ್ಠ ತಾಳ ಪ್ರಯೋಗ ಪ್ರಸ್ತುತಪಡಿಸಿದ್ದಾರೆ. ಈ ಅವಧಿಯಲ್ಲಿ 20 ವಿಭಿನ್ನ ರೀತಿಯ ದ್ವಿತಾಳ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಕಲಾಪ್ರಕಾರದಲ್ಲೇ ದ್ವಿತಾಳ ಪ್ರಯೋಗ ಇದೇ ಮೊದಲು. ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ರಾಷ್ಟ್ರಮಟ್ಟದ ನಾಟ್ಯಮಯ್ಯೂರಿ ಪ್ರಶಸ್ತಿ ಸೇರಿದಂತೆ ಹಲವು ಪ್ರರಸ್ಕಾರಗಳಿಗೆ ಭಾಜನರಾಗಿರುವ ಇವರು, ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ‌್ಯಾಂಕ್ ಪಡೆದವರು. ಪ್ರಸ್ತುತ ಕಲಬುರಗಿ ಶ್ರೀ ಕಲಾ ಶಾಲೆ ಸ್ಥಾಪಿಸಿ, ಹಲವು ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿ ನೀಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts