More

    ಆಗ ‘ಕ್ಯಾಪ್ಟನ್ ರಹಾನೆ’ಗೆ ಮೆಚ್ಚುಗೆ, ಈಗ ‘ಬ್ಯಾಟ್ಸ್‌ಮನ್ ರಹಾನೆ’ಗೆ ಟೀಕೆ!

    ಚೆನ್ನೈ: ಭಾರತ ತಂಡ ಕಳೆದ ತಿಂಗಳು ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿದ ಬೆನ್ನಲ್ಲೇ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ತವರಿನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಭಾರಿ ಅಂತರದಿಂದ ಸೋಲು ಕಂಡ ಬೆನ್ನಲ್ಲೇ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

    ಚೆನ್ನೈ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 1 ರನ್ ಗಳಿಸಿದ್ದ ಅಜಿಂಕ್ಯ ರಹಾನೆ, ಭಾರತಕ್ಕೆ ಪಂದ್ಯವನ್ನು ರಕ್ಷಿಸಿಕೊಳ್ಳಲು ಅನಿವಾರ‌್ಯವಾಗಿದ್ದ 2ನೇ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ರಹಾನೆ ಬ್ಯಾಟಿಂಗ್ ಭಾರಿ ಟೀಕೆಗೆ ಗುರಿಯಾಗಿದೆ. ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಕಾರ ಸಂಜಯ್ ಮಂಜ್ರೇಕರ್ ಸಾಮಾಜಿಕ ಜಾಲತಾಣದಲ್ಲಿ ‘ಬ್ಯಾಟ್ಸ್‌ಮನ್ ರಹಾನೆ’ ವಿರುದ್ಧ ಕಿಡಿ ಕಾರಿದ್ದಾರೆ.

    ಇದನ್ನೂ ಓದಿ: ಇಂಗ್ಲೆಂಡ್​ ಎದುರು ಹೀನಾಯ ಸೋಲು ಕಂಡ ಭಾರತ ತಂಡ

    ‘ಬ್ಯಾಟ್ಸ್‌ಮನ್ ರಹಾನೆ ಬಗ್ಗೆ ನನಗೆ ಬೇಸರವಿದೆ. ಮೆಲ್ಬೋರ್ನ್‌ನಲ್ಲಿ ಶತಕ ಸಿಡಿಸಿದ ಬಳಿಕ ರಹಾನೆ 7 ಇನಿಂಗ್ಸ್‌ಗಳಲ್ಲಿ 27*, 22, 4, 37, 24, 1 ಮತ್ತು 0 ರನ್ ಗಳಿಸಿದ್ದಾರೆ. ಕ್ಲಾಸ್ ಶತಕದ ಬಳಿಕ ಅದೇ ಫಾರ್ಮ್ ಮುಂದುವರಿಸಬೇಕಾಗಿತ್ತು’ ಎಂದು ಮಂಜ್ರೇಕರ್ ಟ್ವೀಟಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅನನುಭವಿ ತಂಡವನ್ನು ಮುನ್ನಡೆಸುವಾಗ ತೋರಿದ್ದ ಜವಾಬ್ದಾರಿಯನ್ನು ರಹಾನೆ ಚೆನ್ನೈ ಟೆಸ್ಟ್‌ನಲ್ಲಿ ತೋರದಿರುವ ಬಗ್ಗೆ ಬೇಸರವೂ ವ್ಯಕ್ತವಾಗಿದೆ. ಕಳೆದ 7 ಇನಿಂಗ್ಸ್‌ಗಳಲ್ಲಿ 9.1ರ ಸರಾಸರಿಯಲ್ಲಿ ಒಟ್ಟು 64 ರನ್ ಮಾತ್ರ ಗಳಿಸಿದ್ದಾರೆ.

    ಈ ನಡುವೆ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆಗೆ ಬೆಂಬಲವಾಗಿ ನಿಂತಿದ್ದಾರೆ. ‘ಚೇತೇಶ್ವರ ಪೂಜಾರ ಅವರೊಂದಿಗೆ ಅಜಿಂಕ್ಯ ರಹಾನೆ ಕೂಡ ಟೆಸ್ಟ್ ತಂಡದ ಪ್ರಮುಖ ಭಾಗವಾಗಿದ್ದಾರೆ. ಎಂಸಿಜಿಯಲ್ಲಿ ತಂಡಕ್ಕೆ ಅತ್ಯಂತ ಅಗತ್ಯವಾಗಿದ್ದ ಸಂದರ್ಭದಲ್ಲಿ ಅವರು ಶತಕ ಸಿಡಿಸಿದ್ದರು. ಚೆನ್ನೈನಲ್ಲಿ ರಹಾನೆಗೆ ಅದೃಷ್ಟ ಇರಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಜೋ ರೂಟ್ ಹಿಡಿದ ಅದ್ಭುತ ಕ್ಯಾಚ್‌ಗೆ ರಹಾನೆ ಔಟಾಗಿದ್ದರು’ ಎಂದು ಕೊಹ್ಲಿ ವಿವರಿಸಿದ್ದಾರೆ.

    ಮದುವೆ ಸಮಾರಂಭದಲ್ಲಿ ಚೆನ್ನೈ ಟೆಸ್ಟ್ ಪಂದ್ಯ ನೇರಪ್ರಸಾರ, ಫೋಟೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts