More

    ಮಣಿಪುರ ಘಟನೆ ಖಂಡಿಸಿ ಚನ್ನಗಿರಿಯಲ್ಲಿ ಪ್ರತಿಭಟನೆ

    ಚನ್ನಗಿರಿ: ಮಣಿಪುರದ ಮಹಿಳೆಯರಿಬ್ಬರ ನಗ್ನ ಮೆರವಣಿಗೆ ಮಾಡಿರುವಂತಹ ಕೃತ್ಯ ಖಂಡಿಸಿ ಮಹಿಳಾ ಸಂಘಟನೆ ಹಾಗೂ ಡಿಎಸ್‌ಎಸ್ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

    ಪಟ್ಟಣದ ಮುಖ್ಯ ನಿಲ್ದಾಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಕೇಂದ್ರ ಸಕಾರದ ವಿರುದ್ಧ ಘೋಷಣೆ ಕೂಗುತ್ತ ತಾಲೂಕು ಕಚೇರಿಗೆ ತೆರಳಿ, ತಹಸೀಲ್ದಾರ್ ಪಿ.ಎಸ್.ಯರ‌್ರಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

    ಲೇಖಕಿ ಕೆ.ಜಿ.ಸರೋಜಾ ನಾಗರಾಜ್ ಮಾತನಾಡಿ, ಮಹಿಳೆಯರ ಮೇಲಿನ ಅಮಾನುಷ ಕೃತ್ಯದಿಂದ ವಿಶ್ವವೇ ತಲೆ ತಗ್ಗಿಸುವಂತಾಗಿದೆ. ಅವರು ಏನೇ ತಪ್ಪು ಮಾಡಿರಲಿ, ಅದಕ್ಕೆ ಕಾನೂನಿನಡಿ ಶಿಕ್ಷೆ ಕೊಡಿಸಬೇಕು ಹೊರತು ಜನರೇ ಶಿಕ್ಷೆಯನ್ನು ನೀಡುವುದು ಕಾನೂನು ಬಾಹಿರ. ಇಂತಹ ಘಟನೆ ನಾಗರಿಕ ಸಮಾಜಕ್ಕೆ ನಾಚಿಕೆಪಡುವಂಥದು. ಕೇಂದ್ರ ಮತ್ತು ಮಣಿಪುರ ರಾಜ್ಯ ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ದೇಶದ ಅನೇಕ ರಾಜ್ಯಗಳಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ, ಅತ್ಯಾಚಾರದಂಥ ಅನೇಕ ಪ್ರಕರಣಗಳು ನಡೆಯುತ್ತಲೇ ಇವೆ. ಸ್ವಾಂತಂತ್ರ್ಯ ಸಿಕ್ಕರೂ ಹಗಲಿನಲ್ಲಿ ಮನೆಯಿಂದ ಹೆದರಿ ಹೊರಗೆ ಬರದಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

    ಡಿಎಸ್‌ಎಸ್ ಸಂಚಾಲಕ ಚಿತ್ರಲಿಂಗಪ್ಪ ಗಾಂಧಿನಗರ, ಬಸವಾಪುರ ರಂಗನಾಥ್, ಜೈಭೀಮ್ ಸಂಘಟನೆ ಅಧ್ಯಕ್ಷ ನೀತಿಗೆರೆ ಮಂಜಪ್ಪ, ರವಿಕುಮಾರ್, ಪ್ರಸನ್ನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts