More

    ಮಣಿಪುರ ಹಿಂಸಾಚಾರಕ್ಕೆ ಖಂಡನೆ

    ಹೊಸಪೇಟೆ: ಮಣಿಪುರ ಮಹಿಳೆಯರ ಮೇಲಿನ ಪೈಶಾಚಿಕ ಕೃತ್ಯವನ್ನು ಉನ್ನತ ಮಟ್ಟದ ಮಹಿಳಾ ಸಮಿತಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಯಿತು.

    ಇದನ್ನೂ ಓದಿ: http://ಮಣಿಪುರ ಹಿಂಸಾಚಾರಕ್ಕೆ ಖಂಡನೆ

    ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಮಣಿಪುರದ ಕುಕಿ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೇ, ನಗ್ನವಾಗಿ ಮೆರವಣಿಗೆ ಮಾಡಿರುವುದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಘಟನೆಯಿಂದ ಸಂತ್ರಸ್ತ ಮಹಿಳೆಯರು ಮಾನಸಿಕವಾಗಿ ಕುಗ್ಗಿದ್ದಾರೆ. ಸಿಬಿಐ ಎದುರು ಧೈರ್ಯವಾಗಿ ಸತ್ಯ ಹೇಳುತ್ತಾರೆ ಎಂಬ ವಿಶ್ವಾಸವಿಲ್ಲ. ಹೀಗಾಗಿ ಮಹಿಳೆಯರನ್ನೇ ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

    ಘಟನೆ ನಡೆದು ಮೂರು ತಿಂಗಳು ಕಳೆಯುವುದರ ಒಳಗಾಗಿ ದುಷ್ಕರ್ಮಿಗಳು ಮನೆಯಲ್ಲಿ ಮಲಗಿದ್ದ ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿ, ಕತ್ತಿಯಿಂದ ಮೂವರನ್ನು ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

    ಕುರಿತು ಡಿಐಜಿ ಹಂತದ ಅಧಿಕಾರಿಯಿಂದ ತನಿಖೆ ನಡೆಸಬೇಕು. ಘಟನೆಯಿಂದ ನೊಂದ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts