More

    ಮಣಿಪಾಲ ವಿದ್ಯಾರ್ಥಿ ಡ್ರಗ್ಸ್ ಪೆಡ್ಲರ್! 14.94 ಲಕ್ಷ ರೂ. ಮೌಲ್ಯದ 498 ಎಂಡಿಎಂಎ ಮಾತ್ರೆ ವಶ

    ಉಡುಪಿ: ಸಹಪಾಠಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ವಿದ್ಯಾರ್ಥಿಯನ್ನು ಬಂಧಿಸಿರುವ ಪೊಲೀಸರು 14.94 ಲಕ್ಷ ರೂ. ಮೌಲ್ಯದ ನಿಷೇಧಿತ ನಿದ್ರಾಜನಕ ಎಂಡಿಎಂಎ ಮಾತ್ರೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಮಣಿಪಾಲ ಕಾಲೇಜಿನ ಇನ್‌ಸ್ಟ್ರುಮೆಂಟೇಶನ್ ಆ್ಯಂಡ್ ಕಂಟ್ರೋಲ್ ವಿಭಾಗದ 7ನೇ ಸೆಮಿಸ್ಟರ್‌ನ ವಿದ್ಯಾರ್ಥಿ, ಉತ್ತರ ಭಾರತ ಮೂಲದ ಹಿಮಾಂಶು ಜೋಷಿ(20) ಬಂಧಿತ ಆರೋಪಿ. ಆಂತರಿಕ ಭದ್ರತಾ ವಿಭಾಗದ ಮಾಹಿತಿ ಮೇರೆಗೆ ಉಡುಪಿ ಐಎಸ್‌ಡಿ ಘಟಕ ಮತ್ತು ಮಣಿಪಾಲ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿದ್ದು, ಶೀಂಬ್ರಾ ಸೇತುವೆ ಬಳಿ ಬೈಕ್ ನಿಲ್ಲಿಸಿ ನಿಷೇಧಿತ ಮಾತ್ರೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ 498 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಎಸ್‌ಪಿ ವಿಷ್ಣುವರ್ಧನ್, ಎಎಸ್‌ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಐಎಸ್‌ಡಿ ಘಟಕದ ಪೊಲೀಸ್ ನಿರೀಕ್ಷಕ ಪಿ.ಎಸ್. ಮಧು, ಡಿವೈಎಸ್ಪಿ ಜೈಶಂಕರ್, ಮಣಿಪಾಲ ಎಸ್‌ಐಗಳಾದ ಮಂಜುನಾಥ ಎಂ. ಗೌಡ, ರಾಜ್‌ಶೇಖರ್ ವಂದಲಿ, ಉಡುಪಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ನಾಗರಾಜ್, ಸಿಬ್ಬಂದಿ ಶೈಲೇಶ್, ದಿನೇಶ್ ಶೆಟ್ಟಿ, ಥೋಮನ್ಸ್, ಪ್ರಸನ್ನ, ಮಂಜುನಾಥ ಶೆಟ್ಟಿ, ಪ್ರಸಾದ್ ಶೆಟ್ಟಿ, ಆದರ್ಶ ನಾಯ್ಕ ಕಾರ್ಯಾಚರಣೆ ತಂಡದಲ್ಲಿದ್ದರು.

     ಉಡುಪಿಯಲ್ಲಿ ದಂಧೆ ವಿಸ್ತಾರ?: ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ಅಕ್ರಮವಾಗಿ ಆನ್‌ಲೈನ್ ಮೂಲಕ ಎಂಡಿಎಂಎ ಮಾತ್ರೆಗಳನ್ನು ತರಿಸಿ, ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಡ್ರಗ್ಸ್ ಜಾಲವನ್ನು ಪೊಲೀಸರು ಭೇದಿಸಿದ್ದರು. ಇದರ ಮುಂದುವರಿದ ಭಾಗವಾಗಿ ಈ ಕಾರ್ಯಾಚರಣೆ ನಡೆಸಿರುವ ಉಡುಪಿ ಜಿಲ್ಲಾ ಪೊಲೀಸರು, ಡ್ರಗ್ಸ್ ಜಾಲವನ್ನು ವ್ಯವಸ್ಥಿತವಾಗಿ ಭೇದಿಸಿದ್ದಾರೆ. ಬಂಧಿತನ ಜತೆಗಿದ್ದ ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮಣಿಪಾಲ- ಉಡುಪಿಯಲ್ಲಿ ದಂಧೆ ವಿಸ್ತಾರಗೊಂಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ಚುರುಕುಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts