More

    ಉಡುಪಿಯಲ್ಲಿ ಸದ್ದಡಗಿಸಿದ ಪೊಲೀಸರು: ಸಾಲಾಗಿಟ್ಟ ಸೈಲೆನ್ಸರ್​ಗಳು ರಸ್ತೆಯಲ್ಲೇ ಧ್ವಂಸ…

    ಉಡುಪಿ: ಕರಾವಳಿಯ ಪೊಲೀಸರು ಇದೀಗ ಉಡುಪಿಯಲ್ಲಿ ಸದ್ದಡಗಿಸುವ ಕೆಲಸ ಮಾಡಿದ್ದಾರೆ. ಅರ್ಥಾತ್​, ಕರ್ಕಶವಾಗಿ ಅಥವಾ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಸದ್ದು ಬರುವಂತೆ ಮಾರ್ಪಡಿಸಿದ್ದ ಬೈಕ್​ ಸೈಲೆನ್ಸರ್​ಗಳನ್ನು ರಸ್ತೆಯಲ್ಲಿ ರೋಡ್​ರೋಲರ್​​ನಿಂದ ಹೊಸಕಿ ಹಾಕಿಸಿದ್ದಾರೆ.

    ಹೌದು.. ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದ ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ಸೋಮವಾರ ರೋಡ್‌ರೋಲರ್ ಬಳಸಿ ನಿಷ್ಕ್ರಿಯಗೊಳಿಸಲಾಯಿತು.

    ಜ.1ರಿಂದ 25ರವರೆಗೆ ವಿಶೇಷ ಕಾರ್ಯಾಚರಣೆ ಮೂಲಕ 71 ದ್ವಿಚಕ್ರ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ಕರ್ಕಶ ಶಬ್ದ ಮಾಡುತ್ತಿದ್ದ ಸೈಲೆನ್ಸರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ದಂಡ ವಸೂಲಿ ಮಾಡಿ ವಾಪಸ್​ ನೀಡಿದರೆ ಮರು ಬಳಕೆ ಸಾಧ್ಯತೆ ಇರುವುದರಿಂದ ಪೊಲೀಸರು ಸೋಮವಾರ ಆ ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಬಳಸಿ ಧ್ವಂಸಗೊಳಿಸಿ ನಿಷ್ಕ್ರಿಯಗೊಳಿಸಿದರು.

    ಇದನ್ನೂ ಓದಿ: ಕರೊನಾ ಲಸಿಕೆ ಎರಡನೇ ಡೋಸ್​​ನಲ್ಲಿ ಮೊದಲು ಶೇ. 100 ಗುರಿ ತಲುಪಿದ ಜಿಲ್ಲೆ ಇದು…

    ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸ ಆಚರಿಸಲಾಗಿದ್ದು, ಶಬ್ದ ಮಾಲಿನ್ಯ ಮಾಡುವ ದ್ವಿಚಕ್ರ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೈಲೆನ್ಸರ್‌ನಿಂದ ಹೊರ ಸೂಸುವ ಶಬ್ದ ಪ್ರಮಾಣ ನಿಗದಿಪಡಿಸಲಾಗಿದ್ದು, ಸಾಮಾನ್ಯವಾಗಿ 80 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಹೊರಸೂಸಿದರೆ ಅದು ಶಬ್ದಮಾಲಿನ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಜಿಲ್ಲೆಯಾದ್ಯಂತ ಈ ರೀತಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

    ಇದನ್ನೂ ಓದಿ: ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ಸೈಲೆನ್ಸರ್ ಬದಲಾಯಿಸಿದರೆ ದಂಡ: ದ್ವಿಚಕ್ರಗಳಲ್ಲಿ ವಾಹನ ತಯಾರಿಕಾ ಕಂಪನಿ ಅಳವಡಿಸಿದ ಸೈಲೆನ್ಸರ್‌ಗಳನ್ನು ಮಾತ್ರ ಬಳಸಬೇಕು. ಅದನ್ನು ಬದಲಾಯಿಸಿ ಶಬ್ದಮಾಲಿನ್ಯ ಉಂಟುಮಾಡಿದರೆ 500 ರೂಪಾಯಿಯಿಂದ 2 ಸಾವಿರ ರೂ.ವರೆಗೂ ದಂಡ ವಸೂಲಿ ಮಾಡಲು ಮತ್ತು ಮಾರ್ಪಾಡುಗೊಂಡ ಸಲಕರಣೆಗಳನ್ನು ವಶಪಡಿಸಿಕೊಳ್ಳಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಸೈಲೆನ್ಸರ್‌ಗಳನ್ನು ಮಾರ್ಪಾಡು ಮಾಡಬಾರದು ಎಂದು ಎಸ್​ಪಿ ವಿಷ್ಣುವರ್ಧನ್ ತಿಳಿಸಿದರು.

    ಉಡುಪಿ ಉಪವಿಭಾಗದ ಪೊಲೀಸ್ ಅಧೀಕ್ಷಕ ಸದಾನಂದ ನಾಯಕ್, ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ., ಉಪನಿರೀಕ್ಷಕ ರಾಜಶೇಖರ ವಂದಲಿ, ಪ್ರೊಬೆಷನರಿ ಪಿಎಸ್‌ಐ ವಿನಯ್, ಸುಷ್ಮಾ ಉಪಸ್ಥಿತರಿದ್ದರು.

    ಸಂಚಾರ ಪೊಲೀಸರು ಮಾಡಿದ ಈ ಕೆಲಸಕ್ಕೆ ಜನರು ಏನಂದ್ರು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts