More

    VIDEO| ಕನ್ನಡಿಗ ಮಣಿಕಾಂತ್​ ಈಗ ಭಾರತದ ಅತಿವೇಗದ ಓಟಗಾರ; ರಾಷ್ಟ್ರೀಯ ಅಥ್ಲೆಟಿಕ್ಸ್​ನಲ್ಲಿ ಹೊಸ ದಾಖಲೆ

    ಬೆಂಗಳೂರು: ಕರ್ನಾಟಕದ ಓಟಗಾರ ಮಣಿಕಾಂತ್​ ಹೋಬಳಿದಾರ್​ ಭಾರತದ ಅತ್ಯಂತ ವೇಗದ ಓಟಗಾರ ಎನಿಸಿದ್ದಾರೆ. ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಸರ್ವೀಸಸ್​ ತಂಡವನ್ನು ಪ್ರತಿನಿಧಿಸಿದ 21 ವರ್ಷದ ಮಣಿಕಾಂತ್​ 100 ಮೀ. ಓಟದ ಸೆಮಿಫೈನಲ್​ನಲ್ಲಿ 10.23 ಸೆಕೆಂಡ್​ಗಳಲ್ಲಿ ಓಡಿದರು. ಈ ಮೂಲಕ ರಾಷ್ಟ್ರೀಯ ದಾಖಲೆ ಬರೆದ ಅವರು ಅಗ್ರಸ್ಥಾನದೊಂದಿಗೆ ಫೈನಲ್​ಗೇರಿದರು.

    ಉಡುಪಿಯ ಮಣಿಕಾಂತ್​ 2016ರಲ್ಲಿ ಒಡಿಶಾದ ಅಮಿಯಾ ಕುಮಾರ್​ ಮಲ್ಲಿಕ್​ 10.26 ಸೆಕೆಂಡ್​ಗಳಲ್ಲಿ 100 ಮೀ. ಓಡಿದ್ದ ರಾಷ್ಟ್ರೀಯ ದಾಖಲೆ ಮುರಿದರು. ಕಳೆದ ವರ್ಷ ಅಮ್ಲನ್​ ಬೋಗೋರ್ಹೈನ್​ 10.25 ಸೆಕೆಂಡ್​ಗಳಲ್ಲಿ ಓಡಿದ್ದರೂ ಅದು ದಾಖಲೆಯಾಗಿ ಮಾನ್ಯ ಆಗಿರಲಿಲ್ಲ.

    ದಿನೇಶ್​, ಸೀಮಾಗೆ ಚಿನ್ನ
    ಮಹಾರಾಷ್ಟ್ರದ ದಿನೇಶ್​ ಮತ್ತು ಹಿಮಾಚಲ ಪ್ರದೇಶದ ಸೀಮಾ ಅಥ್ಲೆಟಿಕ್ಸ್​ ಕೂಟದ ಮೊದಲ ದಿನ ಪುರುಷರ ಮತ್ತು ಮಹಿಳೆಯರ 10 ಸಾವಿರ ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಮಹಿಳೆಯರ ಹ್ಯಾಮರ್​ ಥ್ರೋನಲ್ಲಿ ಪೊಲೀಸ್​ ಸ್ಪೋರ್ಟ್ಸ್​ ಕಂಟ್ರೋಲ್​ ಬೋರ್ಡ್​ನ ಅನ್ಮೋಲ್​ ಕೌರ್​ ಮತ್ತು ಪುರುಷರ ಪೋಲ್​ವಾಲ್ಟ್​ನಲ್ಲಿ ಮಧ್ಯಪ್ರದೇಶದ ದೇವ್​ ಮೀನಾ ಸ್ವರ್ಣ ಪದಕ ಜಯಿಸಿದರು.

    ವಿಶ್ವಕಪ್​ನಲ್ಲಿ ಮೊದಲ ವಾರವೇ ದಾಖಲೆಗಳ ಧಮಾಕಾ; ಶತಕಗಳ ಸುರಿಮಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts