More

    ಮ್ಯಾನ್​ಹೋಲ್​ ಟು ಮೆಷಿನ್​ ಮೋಡ್: ಒಳಚರಂಡಿ ವ್ಯವಸ್ಥೆ ಮೇಲೆ ಬಹು ದೊಡ್ಡ ಘೋಷಣೆ ಮಾಡಿದ ವಿತ್ತ ಸಚಿವೆ

    ನವದೆಹಲಿ: ಇಂದು (ಫೆ.1) 2023-24ನೇ ಸಾಲಿನ ಕೇಂದ್ರ ಬಜೆಟ್​ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಒಳಚರಂಡಿ ವ್ಯವಸ್ಥೆಯ ಮೇಲೆ ಬಹು ದೊಡ್ಡ ಘೋಷಣೆ ಮಾಡಿದರು.

    ‘ಮ್ಯಾನ್​ಹೋಲ್​ ಟು ಮೆಷಿನ್​ ಮೋಡ್’​ ಎಂಬ ಪರಿವರ್ತನೆಗೆ ಕರೆ ಕೊಟ್ಟ ವಿತ್ತಸಚಿವೆ, ದೇಶದಾದ್ಯಂತ ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಯಾಂತ್ರಿಕ ಪ್ರಕ್ರಿಯೆಯ ಮೂಲಕ ಡಿ-ಸ್ಲಡ್ಜ್ ಮಾಡಲಾಗುತ್ತದೆ. ಎಲ್ಲ ನಗರಗಳು ಮತ್ತು ಪಟ್ಟಣಗಳು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಮ್ಯಾನ್‌ಹೋಲ್‌ನಿಂದ ಮೆಷಿನ್ ಹೋಲ್ ಮೋಡ್‌ಗೆ ಶೇ. 100 ರಷ್ಟು ಪರಿವರ್ತನೆಗಾಗಿ ಸಕ್ರಿಯಗೊಳಿಸಲಾಗುತ್ತದೆ ಎಂದರು.

    ಮಾನವ ಆಧಾರಿತ ಒಳಚರಂಡಿ ಶುಚಿ ಕೆಲಸಕ್ಕೆ ಕೊನೆಗಾಣಿಸಿ, ಸಂಪೂರ್ಣ ಯಾಂತ್ರಿಕೃತ ಮಾಡುವ ಉದ್ದೇಶವನ್ನು ವಿತ್ತ ಸಚಿವೆ ಒತ್ತಿ ಹೇಳಿದರು.

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು 2017 ರಿಂದ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಾಗ ಸುಮಾರು 400 ಜನರು ಮೃತಪಟ್ಟಿದ್ದಾರೆಂದು ಸಂಸತ್ತಿಗೆ ತಿಳಿಸಿದ್ದರು. ಇದೀಗ ನಿರ್ಮಲಾ ಸೀತಾರಾಮನ್​ ಅವಘಡಗಳನ್ನು ತಪ್ಪಿಸಲು ಯಾಂತ್ರಿಕ ವ್ಯವಸ್ಥೆಗೆ ಒತ್ತು ನೀಡಲು ಬಜೆಟ್​ನಲ್ಲಿ ಪ್ರಸ್ತಾಪ ಮಾಡಿದ್ದಾರೆ.

    ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಪೂರ್ಣ ಪ್ರಮಾಣದ ಬಜೆಟ್​ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್​ ಅವರು ಮಂಡಿಸುತ್ತಿರುವ 5ನೇ ಬಜೆಟ್​ ಆಗಿದೆ. ಈ ಬಾರಿಯು ಸೂಟ್​ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇರುವುದಿಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆ ಮಾಡಿದ್ದಾರೆ. (ಏಜೆನ್ಸೀಸ್​)

    ಕೇಂದ್ರ ಬಜೆಟ್ ಮಂಡಿಸುವ ವೇಳೆ ವಿತ್ತ ಸಚಿವೆ ಉಟ್ಟಿರುವುದು ಧಾರವಾಡದ ಕಸೂತಿ ಕಲೆಯಿರುವ ಸೀರೆ!

    ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್​! ಉಳಿತಾಯಕ್ಕೆ ಹೊಸ ಯೋಜನೆಗಳು

    ಕೇಂದ್ರ ಬಜೆಟ್ 2023: ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಪೂರ್ಣ ಪಟ್ಟಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts