More

    ಕೇಂದ್ರ ಬಜೆಟ್ 2023: ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಪೂರ್ಣ ಪಟ್ಟಿ…

    ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಏಪ್ರಿಲ್​ 1 ರಿಂದ ಆರಂಭವಾಗುವ ಪ್ರಸಕ್ತ ಹಣಕಾಸು ವರ್ಷದ ಬಜೆಟ್​ ಅನ್ನು ಸಂಸತ್ತಿನಲ್ಲಿಂದು (ಫೆ.1) ಪ್ರಸ್ತುತ ಪಡಿಸಿದರು. ಹಣಕಾಸು ಸಚಿವೆಯಾಗಿ ಇದು ಅವರ ಐದನೇ ಬಜೆಟ್​ ಮಂಡನೆಯಾಗಿದೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಅಂಚಿನಲ್ಲಿರುವವರಿಗೆ ಸವಲತ್ತು, ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿ, ಯುವಶಕ್ತಿಗೆ ಉತ್ತೇಜನ, ಆರ್ಥಿಕ ಸುಧಾರಣೆ ಎಂಬ ಏಳು ಆದ್ಯತೆಗಳ ಮೇಲೆ ಬಜೆಟ್​ ಮಂಡನೆ ಮಾಡಲಾಗಿದೆ.

    ಬಜೆಟ್​ನಲ್ಲಿ ಕೆಲವು ಸುಂಕಗಳು ಮತ್ತು ತೆರಿಗೆಗಳಲ್ಲಿ ಬದಲಾವಣೆ ಮಾಡಿರುವುದರಿಂದ ಕೆಲವು ವಸ್ತುಗಳು ಅಗ್ಗವಾಗುತ್ತವೆ ಮತ್ತು ಕೆಲವು ದುಬಾರಿಯಾಗುತ್ತವೆ. ಹೀಗಾಗಿ ಏಪ್ರಿಲ್​ 1 ರಿಂದ ಯಾವುದು ಅಗ್ಗ ಮತ್ತು ಯಾವುದು ದುಬಾರಿಯಾಗಲಿದೆ ಎಂಬ ಪಟ್ಟಿ ಈ ಕೆಳಕಂಡಂತಿದೆ.

    ಯಾವುದು ಅಗ್ಗ?
    1. ಟಿವಿ ಪ್ಯಾನೆಲ್ಸ್​ ಬಿಡಿ ಭಾಗಗಳ ಮೇಲಿನ ಕಸ್ಟಮ್ಸ್​ ಸುಂಕವನ್ನು 2.5 ರಷ್ಟು ಕಡಿತ
    2. ಫೋನ್‌, ಲ್ಯಾಪ್‌ಟಾಪ್‌ ಹಾಗೂ DSLR ಕ್ಯಾಮೆರಾಗಳ ಲೆನ್ಸ್​
    3. ಲೀಥಿಯಂ ಐಯಾನ್ ಬ್ಯಾಟರಿಗಳು
    4. ಡಿನ್ಯಾಚರ್ಡ್ ಈಥೈಲ್ ಆಲ್ಕೋಹಾಲ್
    5. ಮೊಬೈಲ್​ ಫೋನ್​ ತಯಾರಿಕೆಗೆ ಬೇಕಾಗುವ ಕೆಲವು ಬಿಡಿಭಾಗಗಳ ಆಮದು ಮೇಲಿನ ಕಸ್ಟಮ್​ ಸುಂಕ ಕಡಿತ
    6. ಲ್ಯಾಬ್ ಗ್ರೌನ್​ ವಜ್ರಗಳ ತಯಾರಿಕೆಯಲ್ಲಿ ಬಳಸುವ ಬೀಜಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ಕಡಿತ
    7. ರಫ್ತು ಉತ್ತೇಜಿಸಲು ಸೀಗಡಿ ಆಹಾರದ ಮೇಲಿನ ಕಸ್ಟಮ್ಸ್ ಸುಂಕ ಕಡಿತ
    8. ಆಸಿಡ್-ಗ್ರೇಡ್ ಫ್ಲೋರ್ಸ್ಪಾರ್

    ಯಾವುದು ತುಟ್ಟಿ?
    1. ಸಿಗರೇಟ್​ ಮೇಲೆ ತೆರಿಗೆ ಶೇ. 16ರಷ್ಟು ಏರಿಕೆ
    2. ಚಿನ್ನ ಮತ್ತು ಪ್ಲಾಟಿನಂನಿಂದ ತಯಾರಿಸಿದ ವಸ್ತುಗಳು
    3. ಬೆಳ್ಳಿಯಿಂದ ತಯಾರಿಸಿದ ವಸ್ತುಗಳು
    4. ತಾಮ್ರದ ಚೂರು
    5. ಸಂಯೋಜಿತ ರಬ್ಬರ್ ಮೇಲಿನ ಮೂಲ ಆಮದು ಸುಂಕ ಶೇ. 10 ರಿಂದ 25 ಕ್ಕೆ ಏರಿಕೆ
    4. ಅಡುಗೆ ವಿದ್ಯುತ್​ ಚಿಮಣಿ ಮೇಲಿನ ಕಸ್ಟಮ್ಸ್​ ಸುಂಕ ಶೇ. 7.5 ರಿಂದ ಶೇ. 15ಕ್ಕೆ ಏರಿಕೆ

    ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಪೂರ್ಣ ಪ್ರಮಾಣದ ಬಜೆಟ್​ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್​ ಅವರು ಮಂಡಿಸುತ್ತಿರುವ 5ನೇ ಬಜೆಟ್​ ಆಗಿದೆ. ಈ ಬಾರಿಯು ಸೂಟ್​ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇರುವುದಿಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆ ಮಾಡಿದ್ದಾರೆ. (ಏಜೆನ್ಸೀಸ್​)

    ಇನ್ಮುಂದೆ ನಗದು ರೂಪದಲ್ಲಿ ಕೃಷಿ ಸಾಲ ಲಭ್ಯ!

    ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ಏರಿಕೆ

    ಸಾಮಾನ್ಯ ಗುರುತಿನ ಚೀಟಿಯಾಗಿ ಇನ್ನು ಮುಂದೆ ‘ಪ್ಯಾನ್ ಕಾರ್ಡ್’ ಪರಿಗಣನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts