More

    ಕಾಲಕ್ಕೆ ತಕ್ಕ ಶಿಕ್ಷಣ ಪದ್ಧತಿ ಮರುವಿನ್ಯಾಸ

    ಕೊಣಾಜೆ: ಪ್ರಾಚೀನ ಜ್ಞಾನ ಮತ್ತು ಇಂದಿನ ಆದ್ಯತೆ ಹಾಗೂ ಸವಾಲಿಗೆ ಅನುಸಾರವಾವಾಗಿ ಪ್ರಸ್ತುತ್ತ ಕಾಲಘಟ್ಟಕ್ಕೆ ತಕ್ಕಂತೆ ನಮ್ಮ ಶಿಕ್ಷಣ ಪದ್ಧತಿಯನ್ನು ಮರುವಿನ್ಯಾಸಗೊಳಿಸುವ ಅವಶ್ಯಕತೆಯಿದೆ ಎಂದು ವಿದೇಶಾಂಗ ವ್ಯವಹಾರ ಮತ್ತು ಸಂಸದೀಯ ವ್ಯವಹಾರ ರಾಜ್ಯ ಸಚಿವ ವಿ.ಮುರಳೀಧರನ್ ಅಭಿಪ್ರಾಯಪಟ್ಟರು.

    ಮಂಗಳೂರು ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಪ್ರಯುಕ್ತ ಮಂಗಳಾ ಸಭಾಂಗಣದಲ್ಲಿ ಗುರುವಾರ ಪದವಿ ಪ್ರದಾನ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.

    ವಿನಯವಿಲ್ಲದ ವಿದ್ಯೆ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಸಾಂಪ್ರದಾಯಿಕ ಜ್ಞಾನ ಮತ್ತು ಇಂದಿನ ಆಧುನಿಕ ಕೌಶಲವನ್ನು ಸಮ್ಮಿಳಿತಗೊಳಿಸಬೇಕು. ಆದ್ದರಿಂದ ದೇಶದಲ್ಲಿ ನೂತನ ಶಿಕ್ಷಣ ನೀತಿ-2019 ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಪ್ರಸ್ತುತ ಕರಡು ಹಂತದಲ್ಲಿದೆ ಎಂದರು.
    ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ.ರವೀಂದರಾಚಾರಿ ಉಪಸ್ಥಿತರಿದ್ದರು. ಕುಲಸಚಿವ ಪ್ರೊ.ಎ.ಎಂ.ಖಾನ್ ಸ್ವಾಗತಿಸಿದರು. ಪ್ರೊ.ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು.

    ಗೌರವ ಡಾಕ್ಟರೆಟ್ ಪ್ರದಾನ
    ಉದ್ಯಮ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಗಾಗಿ ಕೆ.ಸಿ.ನಾಕ್ ಅವರಿಗೆ ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಲಾಯಿತು. ಪ್ರೊ.ಚ.ನ.ಶಂಕರ ರಾವ್ ಮತ್ತು ಪ್ರೊ.ಶ್ರೀಪತಿ ತಂತ್ರಿ ಅವರಿಗೆ ಡಿಲಿಟ್ ಪದವಿ, 34 ಮಂದಿಗೆ ಚಿನ್ನದ ಪದಕ, 120 ಮಂದಿನ ನಗದು ಬಹುಮಾನ, ವಿವಿಧ ಕೋರ್ಸ್‌ಗಳ 168 ರ‌್ಯಾಂಕ್‌ಗಳಲ್ಲಿ ಪ್ರಥಮ ರ‌್ಯಾಂಕ್ ಪಡೆದ 66 ಮಂದಿಗೆ ಪ್ರಮಾಣಪತ್ರ ವಿತರಿಸಲಾಯಿತು.

    ಖಾದಿ ನಿಲುವಂಗಿ
    ವಿಶ್ವವಿದ್ಯಾಲಯ ಘಟಿಕೋತ್ಸವ ಸಂದರ್ಭ ಭಾಗವಹಿಸುವ ಅಧಿಕಾರಿಗಳು, ಸಿಂಡಿಕೇಟ್, ಶೈಕ್ಷಣಿಕ ಮಂಡಳಿ ಸದಸ್ಯರು ಮತ್ತು ಗೌರವ ಡಾಕ್ಟರೆಟ್ ಪದವಿ ಸ್ವೀಕರಿಸುವ ಸಾಧಕರ ನಿಲುವಂಗಿಗಳಿಗೆ ಸಿಲ್ಕ್ ಮತ್ತು ವೆಲ್‌ವೆಟ್ ಬಟ್ಟೆಗಳನ್ನು ಬಳಸಲಾಗುತ್ತಿತ್ತು. ಆದರೆ ಈ ಬಾರಿ ಖಾದಿ, ಸಿಲ್ಕ್ ಬಟ್ಟೆಗಳಿಂದ ಸಿದ್ಧಪಡಿಸಿದ ನಿಲುವಂಗಿಗಳನ್ನು ಧರಿಸಿದ್ದರು.

    ಶಹೀದ್ ಸ್ಮಾರಕ ಉದ್ಘಾಟನೆ
    ಮಂಗಳಾ ಸಭಾಂಗಣ ಆವರಣದಲ್ಲಿ ನಿರ್ಮಿಸಲಾಗಿರುವ ಶಹೀದ್ ಸ್ಮಾರಕವನ್ನು ಘಟಿಕೋತ್ಸವ ಸಮಾರಂಭಕ್ಕೂ ಮುನ್ನ ವಿದೇಶಾಂಗ ವ್ಯವಹಾರ ಮತ್ತು ಸಂಸದೀಯ ವ್ಯವಹಾರ ರಾಜ್ಯ ಸಚಿವ ವಿ.ಮುರಳೀಧರನ್ ಉದ್ಘಾಟಿಸಿದರು.

    ಗಾಂಬಿಯಾದ ಮೂಸಾಗೆ ಪಿಎಚ್‌ಡಿ
    ಮಂಗಳೂರು: ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಡಿ ಪಶ್ವಿಮ ಆಫ್ರಿಕಾದ ದಿ ರಿಪಬ್ಲಿಕ್ ಆಫ್ ಗಾಂಬಿಯಾ ದೇಶದಿಂದ ಮಂಗಳೂರು ವಿಶ್ವವಿದ್ಯಾಲಯಕ್ಕೆ ಬಂದಿರುವ ಮೂಸಾ ಎಲ್.ಫಾಲ್ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯವಹಾರ ಆಡಳಿತ ವಿಭಾದಲ್ಲಿ ಅವರು ಮಂಡಿಸಿದ ‘ಪ್ರಾಬ್ಲಮ್ಸ್ ಆ್ಯಂಡ್ ಪ್ರಾಸ್ಪಕ್ಟಸ್ ಆಫ್ ಸ್ಮಾಲ್ ಸ್ಕೇಲ್ ಇಂಡಸ್ಟ್ರಿ: ಎ ಸ್ಟಡಿ ಆಫ್ ಸೆಲೆಕ್ಟೆಡ್ ಯೂನಿಟ್ಸ್ ಆಫ್ ಬ್ರಿಕಾಮಾ ರೀಜನ್ ಇನ್ ದಿ ಗಾಂಬಿಯಾ’ ಮಹಾಪ್ರಬಂಧಕ್ಕೆ ಪಿಎಚ್‌ಡಿಒ ದೊರಕಿದೆ. ಮುಂದೆ ತನ್ನ ದೇಶಕ್ಕೆ ಮರಳಿ ಜನ ಸೇವೆ ಮಾಡುವ ಉದ್ದೇಶ ಹೊಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts