More

    ಎಸ್‌ಡಿಎಂ ವಿಶ್ವವಿದ್ಯಾಲಯದ ಘಟಿಕೋತ್ಸವ; ವೈದ್ಯರಿಗೆ ಮಾನವೀಯತೆ, ವಿನಮ್ರತೆ ಅಗತ್ಯ

    ಧಾರವಾಡ: ವಿದ್ಯಾರ್ಥಿಗಳು ಹೆತ್ತವರ ತ್ಯಾಗವನ್ನು ಅರಿತು ಅವರ ಕನಸು ನನಸಾಗಿಸುವಲ್ಲಿ ಕಾರ್ಯನಿರತರಾಗಬೇಕು. ವೈದ್ಯರಾಗಿ ಮಾನವೀಯತೆ ಮತ್ತು ವಿನಮ್ರತೆಯಿಂದ ರೋಗಿಗಳ ಸೇವೆ ಮಾಡಬೇಕು ಎಂದು ಎಸ್‌ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
    ನಗರದ ಸತ್ತೂರಿನ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಎಸ್‌ಡಿಎಂ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಪರಿಶ್ರಮದಿಂದ ವೈದ್ಯರು ಉತ್ತುಂಗಕ್ಕೇರಬಹುದು. ಉತ್ತಮ ಆರೋಗ್ಯ ಮತ್ತು ನೆಮ್ಮದಿಗೆ ಸರಿಯಾದ ಜೀವನಶೈಲಿ ಅಗತ್ಯ ಎಂದರು.
    ಬೆAಗಳೂರಿನ ಅಗ್ನಿಸುರಕ್ಷಾ ಸ್ಥಾಪಕ ನಿರ್ದೇಶಕಿ ಡಾ. ಪ್ರೇಮಾ ಧನರಾಜ್ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ನೈತಿಕತೆಯ ಪ್ರಾಮುಖ್ಯತೆ ತಿಳಿಸಬೇಕು. ವಿದ್ಯಾರ್ಥಿಗಳು ಮತ್ತೊಬ್ಬರನ್ನು ತುಲನೆ ಮಾಡಿಕೊಳ್ಳದೆ, ಜೀವನದಲ್ಲಿ ಎದುರಾಗುವ ಏರಿಳಿತವನ್ನು ಮೆಟ್ಟಿನಿಂತು ಪರಿಹರಿಸಿಕೊಳ್ಳಬೇಕು ಎಂದರು.
    ೧೧೫ ಪದವಿಧರರು ಮತ್ತು ೧೮೦ ಸ್ನಾತ್ತಕೋತ್ತರ ಪದವಿಧರಿಗೆ ಪ್ರಮಾಣಪತ್ರ ವಿತರಿಸಲಾಯಿತು. ೯ ಪ್ರತಿಭಾವಂತ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದರು.
    ಉಪ ಕುಲಪತಿ ಡಾ. ನಿರಂಜನ್ ಕುಮಾರ ಸ್ವಾಗತಿಸಿದರು. ಕುಲಸಚಿವ ಡಾ. ಚಿದೇಂದ್ರ ಶೆಟ್ಟರ ವಿಶ್ವವಿದ್ಯಾಲಯದ ವಾರ್ಷಿಕ ವರದಿ ಮಂಡಿಸಿದರು. ಸಹ ಉಪ ಕುಲಪತಿ ಡಾ. ಎಸ್.ಕೆ. ಜೋಶಿ ಪ್ರತಿಜ್ಞಾವಿಽ ಬೋಽಸಿದರು. ಪರೀಕ್ಷಾ ನಿಯಂತ್ರಕ ಡಾ. ಸತ್ಯಬೋಧ ಗುತ್ತಲ ಪದವಿಧರರ ಅಂಕಿಅAಶ ವಿವರಿಸಿದರು.
    ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರತ್ನಮಾಲಾ ದೇಸಾಯಿ ಪರಿಚಯಿಸಿದರು. ಡಾ. ಸುರೇಶ ಮನಗುತ್ತಿ ಮತ್ತು ಡಾ. ಅಂಕಿತಾ ಪಾಟೀಲ ನಿರೂಪಿಸಿದರು. ಉಪ ಕುಲಸಚಿವ ಡಾ. ಅಜಂತಾ ಜಿ.ಎಸ್. ವಂದಿಸಿದರು.
    ಎಸ್‌ಡಿಎA ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ, ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ, ಡಾ. ನೈದಿಲ ಶೆಟ್ಟಿ, ಸಹ ಉಪ ಕುಲಪತಿ ವಿ. ಜೀವಂಧರ ಕುಮಾರ, ಹಣಕಾಸು ಅಽಕಾರಿ ವಿ.ಜಿ. ಪ್ರಭು ಹಾಗೂ ಗಣ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts