More

    ಮಂಗಳೂರಿಂದ ಮಾಲ್ಡೀವ್ಸ್‌ಗೆ ತರಕಾರಿ ರಫ್ತು

    ಮಂಗಳೂರು: ಮಂಗಳೂರು ಹಳೇ ಬಂದರಿನಿಂದ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ಗೆ ಹಲವು ಅಗತ್ಯ ವಸ್ತುಗಳನ್ನು ರಫ್ತು ಮಾಡುವ ಕಾರ್ಯಕ್ಕೆ ಚಾಲನೆ ಸಿಗುತ್ತಿದೆ. ಇದೇ ಮೊದಲ ಬಾರಿಗೆ ಸರಕು ಸಾಗಾಟ ನೌಕೆ ಡಿ.14ರಂದು ಹಲವು ವಸ್ತುಗಳೊಂದಿಗೆ ಹೊರಡುತ್ತಿದೆ.

    ಮಂಗಳೂರಿನ ಹಳೇ ಬಂದರು ದಕ್ಕೆಯಲ್ಲಿ ನೌಕೆಗೆ ಭಾನುವಾರ ಸರಕು ಹೇರುವ ಕಾರ್ಯ ನಡೆಯುತ್ತಿದ್ದು, ಸೋಮವಾರ ಬೆಳಗ್ಗೆ ಹೊರಡಲಿದೆ. ಕೃಷಿ, ತೋಟಕ್ಕೆ ಗೊಬ್ಬರವಾಗಿ ಬಳಸಲು ತೆಂಗಿನ ಗೆರಟೆ ಹುಡಿ, ತರಕಾರಿ ಮತ್ತು ಹಣ್ಣು ಹಂಪಲು ಸಾಗಾಟ ಮಾಡಲಿದ್ದು, ಭಾನುವಾರ ಕ್ರೇನ್ ಮೂಲಕ ಲೋಡಿಂಗ್ ಮಾಡಲಾಯಿತು.
    ಕ್ಯಾಪ್ಟನ್ ಕಣ್ಣನ್ ನೇತೃತ್ವದಲ್ಲಿ ಸಿಬ್ಬಂದಿ ಕಾತೋರಾಯನ್, ಹರಿದಾಸ್, ಸಗಾಯಂ, ಶ್ರಿನಿವಾಸನ್, ವ್ನಿೇಶ್ ಪ್ರಥಮ ಯಾನದಲ್ಲಿ ತೆರಳುತ್ತಿದಾರೆ. ಲಕ್ಷದ್ವೀಪದ ಕಡಂಬತ್ತ್‌ಕಾರ್‌ಗೆ ಸೇರಿದ ‘ಎಂಎಸ್‌ವಿ ನೂರ್ ಎ ಅಲ್ ಕದರಿ’ ಹೆಸರಿನ ನೌಕೆಯನ್ನು ಚರಣ್‌ದಾಸ್ ವಿ.ಕರ್ಕೇರ ಬಾಡಿಗೆಗೆ ಪಡೆದುಕೊಂಡು ಸಾಮಾನು ಸರಂಜಾಮು ಸಾಗಾಟ ಮಾಡುತ್ತಿದ್ದಾರೆ.

    ಕಳೆದ ವರ್ಷ ಒಂದು ನೌಕೆ ಹೋಗಿದ್ದರೂ ಗುರಿ ತಲುಪಿರಲಿಲ್ಲ. ಅದರಲ್ಲಿದ್ದ ಸಾಮಾನು ಸರಂಜಾಮು ಸಮುದ್ರಪಾಲಾಗಿತ್ತು. ಈ ವರ್ಷ ಅಕ್ಟೋಬರ್‌ನಲ್ಲಿ ಹೊರಡಬೇಕಿತ್ತು. ಕೋವಿಡ್ ಮತ್ತಿತರ ಕಾರಣಗಳಿಂದ ತಡವಾಗಿದೆ. ಸುಮಾರು 200 ಟನ್ ಸರಕು ಸಾಗಾಟ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಲಕ್ಷದ್ವೀಪಕ್ಕೆ ಮಂಗಳೂರಿನಿಂದ ನಿರಂತರವಾಗಿ ವರ್ಷಕ್ಕೆ 10-15 ಟ್ರಿಪ್ ಸರಕು ಸಾಗಾಟ ನಡೆಯುತ್ತ ದೆ. ಆದರೆ ಈ ಬಾರಿ ಇನ್ನೂ ಶುರುವಾಗಿಲ್ಲ ಎನ್ನುತ್ತಾರೆ ಲೋಡಿಂಗ್ ಕಾರ್ಮಿಕರು.

    ತಿಂಗಳಿಗೆ 5 ಲಕ್ಷ ರೂ.ಬಾಡಿಗೆ
    ನೌಕೆಯನ್ನು ಮಾಸಿಕ ಐದು ಲಕ್ಷ ರೂ. ಬಾಡಿಗೆಗೆ ಪಡೆದುಕೊಂಡಿದ್ದು, ತಿಂಗಳಿಗೆ ಎರಡು ಟ್ರಿಪ್ ಮಾಡಲಿದೆ. ಸೋಮವಾರ ಬೆಳಗ್ಗೆ ನದಿ ನೀರು ಉಬ್ಬರ ಹೆಚ್ಚಾದಾಗ ಹೊರಟು, 4-5 ದಿನಗಳಲ್ಲಿ ತಲುಪಿ, ಮಾಲ್ಡೀವ್ಸ್ ಜೆಟ್ಟಿಯಲ್ಲಿ ಅನ್‌ಲೋಡ್ ಮಾಡಿ ಮರಳಿ ಬರಲಿದೆ. ಹೊಸ ಸಾಹಸಕ್ಕೆ ಕೈ ಹಾಕಿದ್ದೇವೆ ಎನ್ನುತ್ತಾರೆ ಚರಣ್‌ದಾಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts