More

    ಕೇರಳ ಚಿನ್ನ ಹಗರಣಕ್ಕೆ ಮಂಗಳೂರು ಲಿಂಕ್

    ಮಂಗಳೂರು: ಕೇರಳದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿದ್ದ ಬಹುಕೋಟಿ ಮೌಲ್ಯದ ಚಿನ್ನದ ಕಳ್ಳ ಸಾಗಣೆ ಪ್ರಕರಣಕ್ಕೆ ಮಂಗಳೂರು ಲಿಂಕ್ ಇರುವುದು ಕೇರಳದ ಕಸ್ಟಮ್ಸ್ ತನಿಖೆಯಿಂದ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರನ್ನು ಆರೋಪಿಯನ್ನಾಗಿ ಹೆಸರಿಸಲು ಇಲಾಖೆ ನ್ಯಾಯಾಲಯಕ್ಕೆ ಅನುಮತಿ ಕೇಳಿ ಮನವಿ ಸಲ್ಲಿಸಿದೆ.

    ಮಂಗಳೂರಿನ ನಗರದ ಭವಂತಿಸ್ಟ್ರೀಟ್‌ನ ಚಿನ್ನದ ವ್ಯಾಪಾರಿಯೊಬ್ಬರು ಈ ಬಹುಕೋಟಿ ಚಿನ್ನ ಸಾಗಾಟದ ಆರೋಪಿಗಳಿಂದ 30 ಕೆ.ಜಿ ಚಿನ್ನ ಖರೀದಿಸಿದ್ದರು ಎಂಬುದನ್ನು ಕೇರಳದ ಕಸ್ಟಮ್ಸ್ ಇಲಾಖೆ ಪತ್ತೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಈ ವ್ಯಕ್ತಿಯನ್ನು 24ನೇ ಆರೋಪಿಯನ್ನಾಗಿ ಹೆಸರಿಸಬೇಕು ಮತ್ತು ಸಮಗ್ರ ವಿಚಾರಣೆಗಾಗಿ ಜಾಮೀನು ರಹಿತ ಬಂಧನ ಆದೇಶ ಹೊರಡಿಸಬೇಕು ಎಂದು ಕಸ್ಟಮ್ಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

    ಇದೇ ವರ್ಷದ ಜುಲೈ 5ರಂದು ಗಲ್ಫ್‌ನಿಂದ ಬಂದ ಏರ್ ಕಾರ್ಗೋ ವಿಮಾನದ ಬ್ಯಾಗ್‌ನಲ್ಲಿ 15 ಕೋಟಿ ರೂ. ಮೌಲ್ಯದ 30 ಕೆ.ಜಿ ಚಿನ್ನ ಪತ್ತೆಯಾಗಿತ್ತು. ಇದನ್ನು ತಿರುವನಂತಪುರದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದರು. ಈ ಪ್ರಕರಣದಲ್ಲಿ ಸರ್ಕಾರದ ಪ್ರಮುಖ ಅಧಿಕಾರಿಗಳು ಶಾಮೀಲಾಗಿರುವ ಹಿನ್ನೆಲೆಯಲ್ಲಿ ಕಸ್ಟಮ್ಸ್, ಎನ್‌ಐಎ ಹಾಗೂ ಜಾರಿ ನಿರ್ದೇಶನಾಲಯ(ಇಡಿ) ಪ್ರತ್ಯೇಕ ತನಿಖೆ ನಡೆಸುತ್ತಿದೆ.
    ಯುಎಇ ರಾಯಭಾರಿ ಕಚೇರಿ ಹೆಸರಿಗೆ ಬಂದ ಪಾರ್ಸೆಲ್ ಮೂಲಕವಾಗಿ ಚಿನ್ನಸಾಗಾಟ ಮಾಡಿದ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಪ್ರಮುಖ ಆರೋಪಿಯಾಗಿದ್ದು, ಅವರೊಂದಿಗೆ ಸಂಪರ್ಕ ಹೊಂದಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನೂ ಆರೋಪಿಯನ್ನಾಗಿ ಗುರುತಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts