More

    ಬಲಿಗಾಗಿ ಕಾಯುತ್ತಿದೆ ತೆರೆದ ಫುಟ್‌ಪಾತ್, ಬಿರುಕು ರಸ್ತೆ !

    ಮಂಗಳೂರು: ಪದೇಪದೇ ರಸ್ತೆ ಅಗೆಯುವುದು, ರಸ್ತೆ ಬದಿಯಲ್ಲಿ ಭಾರೀ ಗಾತ್ರದ ಹೊಂಡ ನಿರ್ಮಿಸುವುದು ಮಂಗಳೂರು ನಗರದಲ್ಲಿ ಸಾಮಾನ್ಯವಾಗಿದೆ. ಕೆಲವು ಪ್ರದೇಶಗಳಂತೂ ತೀರಾ ಅಪಾಯಕಾರಿಯಾಗಿದೆ ಎಂದು ಜನಸಾಮಾನ್ಯನಿಗೆ ಅನಿಸಿದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಕಣ್ಣಿದ್ದೂ ಕುರುಡರಂತಾಗಿದ್ದಾರೆ !
    ನಗರದ ಎಂ.ಜಿ.ರಸ್ತೆಯಲ್ಲಿ ಬೆಸೆಂಟ್ ಕಾಲೇಜು ಸಮೀಪದ ಫುಟ್‌ಪಾತ್‌ನಲ್ಲಿರುವ ಒಂದು ಕಾಂಕ್ರೀಟು ಹಲಗೆ ತೆಗೆದು ಒಂದು ವಾರ ಕಳೆದಿದ್ದು, ಯಾವುದೇ ಸಂದರ್ಭ ಇಲ್ಲಿ ಅನಾಹುತ ಸಾಧ್ಯತೆ ಇದೆ. ಬೆಸೆಂಟ್ ಕಾಲೇಜು, ಕೆನರಾ ಕಾಲೇಜು, ಸಂಜೆ ಕಾಲೇಜು ಇರುವ ಈ ಫುಟ್‌ಪಾತ್ ಅನ್ನು ಸಹಸ್ರಾರು ಪುಟಾಣಿಗಳು, ವಿದ್ಯಾರ್ಥಿಗಳು, ಇತರ ಸಾರ್ವಜನಿಕರು ದಿನಂಪ್ರತಿ ಬಳಸುತ್ತಿದ್ದಾರೆ.
    ರಾತ್ರಿ ಮಾತ್ರವಲ್ಲ; ಹಗಲು ಕೂಡ ಪಾದಚಾರಿಗಳು ಸ್ವಲ್ಪ ಕಣ್ತಪ್ಪಿದರೂ ಇಲ್ಲಿ ತೆರೆದ ಫುಟ್‌ಪಾತ್ ಒಳಗೆ ಬೀಳುವುದು ನಿಶ್ಚಿತ. ಈ ತೆರೆದ ಫುಟ್‌ಪಾತ್ ಅಡಿಯಲ್ಲಿ ಗಬ್ಬು ನಾರುತ್ತಿರುವ ಗಲೀಜು ನೀರು ನಿತ್ಯ ಹರಿಯುತ್ತಿದೆ. ತೆರೆದ ಫುಟ್‌ಪಾತ್ ಒಳಗೆ ಯಾರಾದರೂ ಬಿದ್ದರೆ, ಅವರು ಆಳದಲ್ಲಿ ಗಲೀಜು ನೀರು ಹರಿಯುವ ತೋಡಿಗೆ ಬೀಳುವುದು ನಿಶ್ಚಿತ.
    ಇನ್ನೊಂದು ಚಿತ್ರದಲ್ಲಿ ಕದ್ರಿ ದೇವಸ್ಥಾನದ ಪಾರ್ಕಿಂಗ್ ಪ್ರದೇಶದ ಸಮೀಪ ರಸ್ತೆಯೇ ಅಪಾಯಕಾರಿ ರೀತಿಯಲ್ಲಿ ಬಾಯಿತೆರೆದಿರುವುದನ್ನು ಕಾಣಬಹುದು. ತೆರೆದ ರಸ್ತೆ ಬಾಯಿಯ ಒಳಗೆ ಕೋರೆ ಹಲ್ಲುಗಳಂತೆ ಕಬ್ಬಿಣದ ಸರಳುಗಳು ಗೋಚರಿಸುತ್ತಿವೆ. ಈ ತೆರೆದ ರಸ್ತೆಯ ಒಳಗೆ ಯಾವುದೇ ವ್ಯಕಿಗಳ ಕಾಲು, ಜನರು ಬಿದ್ದರೆ ಅಪಾಯ ಗ್ಯಾರಂಟಿ.

    ಬಲಿಗಾಗಿ ಕಾಯುತ್ತಿದೆ ತೆರೆದ ಫುಟ್‌ಪಾತ್, ಬಿರುಕು ರಸ್ತೆ !

    ಕದ್ರಿ ದೇವಸ್ಥಾನದ ಪಾರ್ಕಿಂಗ್ ಪ್ರದೇಶದ ಸಮೀಪ ಬಾಯಿ ಬಿಟ್ಟಿರುವ ಕಾಂಕ್ರೀಟ್ ರಸ್ತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts