More

    ಅಡ್ಯಾರ್ ಗಾರ್ಡನ್‌ನಲ್ಲಿ ಜರ್ಮನ್ ಶೆಫರ್ಡ್‌ಗಳದ್ದೇ ಹವಾ; ಆಲ್ ಬ್ರೀಡ್ ಚಾಂಪಿಯನ್‌ಷಿಪ್ ಶ್ವಾನ ಪ್ರದರ್ಶನ

    ವಿಜಯವಾಣಿ ಸುದ್ದಿಜಾಲ ಮಂಗಳೂರು
    ನಗರದ ಹೊರ ವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಶನಿವಾರ ಜರ್ಮನ್ ಶೆಫರ್ಡ್ ತಳಿಯ ನಾಯಿಗಳದ್ದೇ ಹವಾ.
    ಶನಿವಾರ ಆರಂಭಗೊಂಡ ಎರಡು ದಿನಗಳ 17 ಮತ್ತು 18 ನೇ ಆಲ್ ಬ್ರೀಡ್ ಚಾಂಪಿಯನ್‌ಷಿಪ್ ಶ್ವಾನ ಪ್ರದರ್ಶನದಲ್ಲಿ ನವದೆಹಲಿ, ಕೋಲ್ಕತ್ತಾ, ಲಕ್ನೋ, ಬೆಂಗಳೂರು, ಕೇರಳ, ತಮಿಳುನಾಡು ಸಹಿತ ದೇಶದ ವಿವಿಧೆಡೆಗಳ ಸುಮಾರು 150 ಜರ್ಮನ್ ಶೆಫರ್ಡ್ ನಾಯಿಗಳು ಮಾತ್ರ ಭಾಗವಹಿಸಿವೆ.
    ಕರಾವಳಿ ಕೆನೈನ್ ಕ್ಲಬ್ ಆಯೋಜಿಸಿದ ಈ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ಶ್ವಾನಪ್ರಿಯರ ಗಮನ ಸೆಳೆಯಿತು.ವಿಶೇಷವೆಂದರೆ ಅತ್ಯುತ್ತಮ ಐದು ನಾಯಿಗಳಿಗೆ ಪದಕ, ಬಹುಮಾನ, ಜತೆಗೆ ಭಾಗವಹಿಸಿದ ಎಲ್ಲ ನಾಯಿಗಳಿಗೆ ವಿದೇಶದಿಂದ ಆಮದು ಮಾಡಿಕೊಂಡಿರುವ ವಿಶೇಷ ಬಹುಮಾನಗಳು ದೊರೆಯಲಿವೆ.
    ಶ್ವಾನ ಪ್ರದರ್ಶನ ಸಂಘಟಿಸಿರುವ ರಾಜ್ ಗೌಡ ಅವರು ಜರ್ಮನ್ ಶೆಫರ್ಡ್ ನಾಯಿಗಳ ದೊಡ್ಡ ಅಭಿಮಾನಿಯಾಗಿರುವುದು ಅವರು ಎಕ್ಸ್‌ಕ್ಲೂಸಿವ್ ಈ ನಾಯಿಯ ಪ್ರದರ್ಶನಕ್ಕಾಗಿಯೇ ಒಂದು ದಿನ ಮೀಸಲಿಡಲು ಕಾರಣ.
    ಆಸ್ಟ್ರೇಲಿಯಾದ ಜರ್ಮನ್ ಶೆಫರ್ಡ್ ಕೌನ್ಸಿಲ್ ಮಾಜಿ ಅಧ್ಯಕ್ಷ ವಿನ್ಸೆನ್ಝೋ ಟಂಟರೋ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.
    ಫೆಬ್ರವರಿ 11 ರಂದು ನಡೆಯುವ ಆಲ್ ಬ್ರೀಡ್ ಚಾಂಪಿಯನ್‌ಷಿಪ್ ಶ್ವಾನ ಪ್ರದರ್ಶನದಲ್ಲಿ ಇತರ ಶ್ರೇಷ್ಠ ತಳಿಯ ನಾಯಿಗಳು ಭಾಗವಹಿಸಲಿವೆ ಎಂದು ರಾಜ್ ಗೌಡ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts