More

    ಮಂಗಳೂರು ಕುಕ್ಕರ್​ ಬ್ಲಾಸ್ಟ್​: ಡಿಕೆಶಿ ಸಮರ್ಥಿಸಿದ ಪ್ರಿಯಾಂಕ್​ ಖರ್ಗೆ; ಸಿ.ಟಿ ರವಿ ತಿರುಗೇಟು…

    ಚಿಕ್ಕಮಗಳೂರು: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಗಳ ಬಗ್ಗೆ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅನುಕಂಪ ವ್ಯಕ್ತಪಡಿಸಿದ್ದರು. ಯಾರಾದರು ಕೇಳಿದರೆ ಅವರು ನನ್ನ ಸಹೋದರರು ಎಂದು ಬಡಿ ಅಂತ ಹೇಳಿದ್ದರು.

    ಇದೀಗ ಕುಕ್ಕರ್ ಬ್ಲಾಸ್ಟ್ ಪ್ರಕರಣ ಡಿಕೆಶಿ ಹೇಳಿಕೆಗೆ ಪ್ರಿಯಾಂಕ ಖರ್ಗೆ ಸರ್ಮಥನೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ ಟಿ ತಿರುಗೇಟು ನೀಡಿದ್ದು ‘ಈ ಮಾನಸಿಕತೆ ದೇಶದ ಹಿತದೃಷ್ಟಿಯಿಂದ ಅಪಾಯಕಾರಿ. ಕುಕ್ಕರ್ ನಲ್ಲಿ ಬಾಂಬ್ ಇಲ್ಲದಿದ್ದರೆ ಸಾಮಾನ್ಯ ಕುಕ್ಕರ್ ಬ್ಲಾಸ್ಟ್ ಅಗುತ್ತಾ? ಇಂತಹ ಸಂದರ್ಭದಲ್ಲಿ ಅರೋಪಿಗಳ ಪರ ಇರುವಂತಹ ಮಾನಸಿಕತೆ ಪ್ರದರ್ಶನ ಮಾಡುವುದು ದೇಶದ ಆಂತರಿಕ ಭದ್ರತೆಗೆ ಆಪಾಯಕಾರಿ ಯಾಗಿರುವ ಸಂಗತಿ’ ಎಂದಿದ್ದಾರೆ.

    ಜೊತೆಗೆ ‘ಬಾಹ್ಯ ಶತ್ರು ಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸವಲ್ಲ. ಆಂತರಿಕ ಶತ್ರುಗಳಿದ್ದಾರಲ್ಲ. ಅವರನ್ನು ನಿಯಂತ್ರಿಸುವುದೇ ಕಷ್ಟ. ಆ ಶತ್ರುಗಳಿಗೆ ಬೆಂಬಲಿಸುವ ಮಾನಸಿಕತೆ ಅಪಾಯಕಾರಿ. ಕಾಂಗ್ರೆಸ್ ಅಧ್ಯಕ್ಷರು ತೋರಿಸಿದ್ದು ಅಂತಹ ಆಪಾಯಕಾರಿತನವನ್ನು. ನಾನು ಅಂದುಕೊಂಡಿದ್ದೇ ಬೇಷರತ್ತಾಗಿ ಕ್ಷಮೆಯಾಚನೆ ಮಾಡ್ತಾರೆ ಅಂತ. ಆದರೆ ಮೊಂಡು ಸಮರ್ಥನೆಗೆ ಇಳಿದಿರುವಂತಹದ್ದು ದುರಂತ. ಅದಲ್ಲದೇ ಅವರ ಬೆಂಬಲಕ್ಕೆ ಉಳಿದವರು ನಿಂತುಕೊಂಡಿರುವುದು ಇದು ಕಾಂಗ್ರೆಸ್ ನ ಇವತ್ತಿನ ಮಾಸಿಕತೆಯನ್ನು ತೋರುತ್ತದೆ‌’ ಎಂದಿದ್ದಾರೆ.

    ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಗಳನ್ನು ‘ದೇ ಆರ್ ಮೈ ಬ್ರದರ್ಸ್’ ಅಂದುಬಿಡಿ… ಡಿಕೆಶಿಗೆ ಸಚಿವ ಸುನಿಲ್​ ಕುಮಾರ್​ ತರಾಟೆ

    ನಂತರ ಪ್ರಿಯಾಂಕ್​ ಖರ್ಗೆಗೆ ಟಾಂಗ್​ ಕೊಟ್ಟ ಸಿಟಿ ರವಿ,’ಪ್ರಿಯಾಂಕ ಖರ್ಗೆಯವರಿಗೆ ಒಂದು ನೆನಪು ಮಾಡಲು ಬಯಸುತ್ತೇನೆ. 2 ಸಾವಿರ ಇಸವಿ ಇರಬಹುದು ಚರ್ಚ್ ಗಳಲ್ಲಿ ಬಾಂಬ್ ಸ್ಪೋಟ ಆಯ್ತು. ಅವತ್ತಿನ ಗೃಹಸಚಿವರಾಗಿದ್ದೋರು ಮಲ್ಲಿಕಾರ್ಜುನ ಖರ್ಗೆ. ತನಿಖೆ ಅಗೋದಕ್ಕೆ ಮುಂಚೆನೇ ಇದ್ರ ಹಿಂದೆ ಆರ್​ಎಸ್ಎಸ್ ಕೈವಾಡ ಇದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ರು. ಅಕಸ್ಮಿಕವಾಗಿ ಬಾಂಬ್ ತೆಗೆದುಕೊಂಡ ಹೋಗುವಾಗ ಕಾರ್ ನಲ್ಲಿ ಸ್ಪೋಟ ಆಯ್ತು ‌. ತನಿಖೆಯ ಜಾಡು ಹಿಡಿದ ಪೊಲೀಸರಿಗೆ ಗೊತ್ತಾಯ್ತು ಅದ್ರ ಹಿಂದೆ ದಿನ್ದಾರ್ ಅಂಜುಮ್ ಸಿದ್ದಿಕಿ ಸಂಘಟನೆ ಅಂತಾ. ಇದು ಪಾಕಿಸ್ತಾನದಿಂದ ಪ್ರಚೋದನೆ ಪಡೆದ ಹುಬ್ಬಳಿ ಮೂಲದ ಸಂಘಟನೆ ಮಾಡಿತ್ತು ಅಂತ ಇಳಿದು ಬಂತು. ಅವತ್ತು ವಿವೇಚನೆ ಇಲ್ಲದೆ ಹೇಳಿಕೆ ಕೊಟ್ಟಿದ್ದು ಮಲ್ಲಿಕಾರ್ಜುನ ಖರ್ಗೆ. ಇವತ್ತು ವಿವೇಚನೆ ಇಲ್ಲದೆ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಪ್ರಿಯಾಂಕ ಖರ್ಗೆ‌‌’ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts