More

    ಮಂಗಲ ಅಂಗಡಿಗೆ ಬಹುಮತ ನೀಡಿ

    ಬೆಳಗಾವಿ: ಸಜ್ಜನ ಹಾಗೂ ನಿಷ್ಠಾವಂತ ರಾಜಕಾರಣಿ, ರೈತ ಬಂಧುವಾಗಿದ್ದ ದಿ. ಸುರೇಶ ಅಂಗಡಿ ನಮ್ಮ ಮಧ್ಯೆ ಇಲ್ಲ. ಆದರೆ, ಅವರು ಮಾಡಿದ ಕಾರ್ಯಗಳು ಜೀವಂತವಾಗಿವೆೆ. ಅವರ ನಿಧನದ ನಂತರ ತೆರವಾಗಿರುವ ಲೋಕಸಭಾ ಸ್ಥಾನಕ್ಕೆ ಅವರ ಪತ್ನಿ ಮಂಗಲ ಅಂಗಡಿ ಸ್ಪರ್ಧಿಸಿದ್ದು, ಅವರಿಗೆ ಬಹುಮತ ನೀಡಿ ಗೆಲ್ಲಿಸಬೇಕು ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮನವಿ ಮಾಡಿದ್ದಾರೆ. ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಎಲ್ಲ ಅಂಗ ಸಂಸ್ಥೆಗಳ ಸಿಬ್ಬಂದಿ ಬಳಿ ಸೋಮವಾರ ಮತಯಾಚಿಸಿದ ಅವರು, ದಿ. ಸುರೇಶ ಅಂಗಡಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇರುವ ಸಂದರ್ಭದಲ್ಲಿಯೇ ಬಿಜೆಪಿಗೆ ನೆಲೆ ರೂಪಿಸಿದರು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಅಹರ್ನಿಶಿ ಶ್ರಮಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ 13 ಶಾಸಕರು, 2 ಲೋಕಸಭಾ ಸದಸ್ಯರಿದ್ದಾರೆ. ಅದಕ್ಕೆ ಸುರೇಶ ಅಂಗಡಿ ಅವರ ಕೊಡುಗೆಯೂ ಅಪಾರ ಎಂದರು.

    2019ರಲ್ಲಿ 4ನೇ ಬಾರಿಗೆ ಸಂಸತ್ ಪ್ರವೇಶಿಸಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಲ್ಪಾವಧಿಯಲ್ಲಿ ಹಲವು ಜನಪರ ಯೋಜನೆ ಜಾರಿಗೆ ತರುವುದರ ಮೂಲಕ ಜನರ ಬಹುದಿನಗಳ ಕನಸು ನನಸಾಗಿಸಿದ್ದರು. ಕೆಎಲ್‌ಇ ಸಂಸ್ಥೆಯ ಜಿ.ಎ.ಹೈಸ್ಕೂಲಿನ ಹಳೆಯ ವಿದ್ಯಾರ್ಥಿಯಾಗಿದ್ದ ಅವರು ಸಂಸ್ಥೆಯ ಅಸಂಖ್ಯ ಸಭೆ ಸಮಾರಂಭಗಳಿಗೆ ಸಾಕ್ಷಿಯಾಗಿದ್ದರು. ಅವರು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ಸಂಸ್ಥೆಯ ಮೇಲಿನ ಪ್ರೀತಿ ಮರೆತಿರಲಿಲ್ಲ. ಈಗ ಮಂಗಲ ಅಂಗಡಿ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರಿಗೆ ನಮ್ಮ ಅಂಗ ಸಂಸ್ಥೆಗಳ ಎಲ್ಲ ಸಿಬ್ಬಂದಿ ಮತ ನೀಡಬೇಕು ಎಂದು ವಿನಂತಿಸಿದರು. ಸುರೇಶ ಅಂಗಡಿ ಅವರ ಪುತ್ರಿ ಡಾ.ಸ್ಫೂರ್ತಿ
    ಅಂಗಡಿ ಪಾಟೀಲ, ಕೆಎಲ್‌ಇ ಅಂಗ ಸಂಸ್ಥೆಗಳ ಸಿಬ್ಬಂದಿ ಇದ್ದರು.

    ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಿ

    ಬೈಲಹೊಂಗಲ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಎಂದು ಬೆಳಗಾವಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮನವಿ ಮಾಡಿದರು. ಪಟ್ಟಣದ 4, 5, 8 ನೇ ವಾರ್ಡ್‌ಗಳಲ್ಲಿ ಲೋಕಸಭಾ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ಭಾನುವಾರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಮಾತನಾಡಿದ ಅವರು, ದಿ.ಸುರೇಶ ಅಂಗಡಿ, ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಅಲ್ವಾವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿ ಕೈಗೊಂಡು ಬೆಳಗಾವಿ ಜಿಲ್ಲೆಯ ವಿಕಾಸಕ್ಕೆ ಶ್ರಮಿಸಿದ್ದಾರೆ. ಅವರ ಕನಸು ನನಸು ಮಾಡಲು ಅವರ ಪತ್ನಿ ಮಂಗಲ ಅಂಗಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಬಸವರಾಜ ನೇಸರಗಿ, ಶಾಂತಾ ಮಡ್ಡಿಕರ, ಸುವರ್ಣಾ ರಾಮದುರ್ಗ, ಮಡಿವಾಳಪ್ಪ ಹೋಟಿ, ರುದ್ರಪ್ಪ ಹೊಸಮನಿ, ಶಿವಾನಂದ ಕೊಲಕಾರ, ಜಗದೀಶ ಜಂಬಗಿ, ಆನಂದ ಮೂಗಿ, ಸೋಮನಾಥ ಸೊಪ್ಪಿಮಠ, ವಿಶಾಲ ಹೊಸೂರ, ಪುಂಡಲೀಕ ಹೋಟಿ, ಚನ್ನಬಸು ಈಟಿ, ಶಿವಾನಂದ ಶಿರಸಂಗಿ, ಶ್ರೀಶೈಲ ಅಂದಾನಿ, ಮಹಾಂತೇಶ ಗುಂಡ್ಲೂರ, ಶ್ರೀಶೈಲ ಯಡಳ್ಳಿ, ಮಾರುತಿ ತಿಗಡಿ, ವಿ.ಜಿ.ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts