More

    ಮನೆ ಹಂಚಿಕೆಯಲ್ಲಿ ಕೆಸರೆರಚಾಟ ಬೇಡ

    ನರಗುಂದ: 2008 ರಲ್ಲಿ ತಾಲೂಕಿನ ಕುರ್ಲಗೇರಿ ಸೇರಿ ಮತಕ್ಷೇತ್ರದ 14 ಗ್ರಾಮಗಳಲ್ಲಿ ನೆರೆ ಹಾವಳಿ ಉಂಟಾಗಿತ್ತು. ಸಾವಿರಾರು ಕುಟುಂಬಗಳು ಬೀದಿಗೆ ಬಂದಿದ್ದವು. ಜಲಾವೃತ ಗ್ರಾಮಗಳನ್ನು ಸ್ಥಳಾಂತರಗೊಳಿಸಿ 8 ಸಾವಿರ ಮನೆಗಳನ್ನು ನಿರ್ವಿುಸಿಕೊಡಲಾಗಿದೆ. ಆದರೆ, ರಾಜಕೀಯ ಕೆಸರೆರಚಾಟದಿಂದ ಕುರ್ಲಗೇರಿ ಗ್ರಾಮದಲ್ಲಿ ನಿರ್ವಿುಸಿರುವ 400 ಕ್ಕೂ ಅಧಿಕ ಮನೆಗಳನ್ನು ಇದುವರೆಗೂ ಹಂಚಿಕೆ ಮಾಡಿಲ್ಲ ಎಂದು ಗಣಿ, ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿ 4 ಕೋಟಿ 90 ಲಕ್ಷ ರೂ. ವೆಚ್ಚದ ನರಗುಂದ-ಕುರ್ಲಗೇರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಕುರ್ಲಗೇರಿ ಗ್ರಾಮದ ಜನರು ಸೌಹಾರ್ದಯುತವಾಗಿ ರ್ಚಚಿಸಿ ಸರಿಯಾದ ನಿರ್ಣಯಕ್ಕೆ ಬರಬೇಕು. ಒಂದು ವೇಳೆ ನಿಮ್ಮ ಕೈಲಾಗದಿದ್ದರೆ ನನಗೆ ತಿಳಿಸಿ. ನಿಮ್ಮ ಗ್ರಾಮದಲ್ಲೇ ಸಭೆ ಕರೆದು ಎಲ್ಲರಿಗೂ ನ್ಯಾಯಯುತವಾಗಿ ಮನೆಗಳನ್ನು ಹಂಚಿಕೆ ಮಾಡಿಸುತ್ತೇನೆ ಎಂದರು.

    ಕೆಲವು ಪ್ರಭಾವಿಗಳು ನಾಲ್ಕೈದು ಮನೆಗಳಿಗೆ ಬೀಗ ಹಾಕಿರುವ ಮಾಹಿತಿಯಿದೆ. ಇದರಲ್ಲಿ ಬಿಜೆಪಿಯ ಕಾರ್ಯಕರ್ತರಿರಲಿ ಅಥವಾ ನಮ್ಮ ಸಂಬಂಧಿಕರೇ ಇರಲಿ. ಒಬ್ಬರಿಗೆ ಒಂದೇ ಮನೆ ಹಂಚಿಕೆ ಮಾಡುತ್ತೇನೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಆದ್ದರಿಂದ ನನಗೆ ಈ ಹಿಂದೆ ಗುಂಡು ಬಿದ್ದಿದ್ದರೂ ಬದುಕುಳಿದಿದ್ದೇನೆ. ನನ್ನ ಬಗ್ಗೆ ಅಪಪ್ರಚಾರ ಮಾಡಿರುವವರು ನನ್ನ ಕಣ್ಣೆದುರಲ್ಲೇ ಸತ್ತು ಹೋಗಿದ್ದಾರೆ. ಇಲ್ಲಿನ ಮನೆಗಳ ಹಂಚಿಕೆಗೆ ಯಾರ ತಕರಾರಿದೆ ಎಂಬುದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಇನ್ನೂ ಹೆಚ್ಚಿನ ಮನೆಗಳು ಬೇಕಾದರೆ ಕೇಳಿ. ಇನ್ನೂ 50 ಮನೆಗಳನ್ನು ಹೊಸದಾಗಿ ನಿರ್ವಿುಸಿಕೊಡುತ್ತೇನೆ. ಆದರೆ, ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಗಾಲು ಹಾಕುವುದು ಸೂಕ್ತವಲ್ಲ ಎಂದು ವಿರೋಧ ಪಕ್ಷದವರ ವಿರುದ್ಧ ಮಾರ್ವಿುಕವಾಗಿ ಹರಿಹಾಯ್ದರು.

    ವಿಪರೀತ ಮಳೆಯಿಂದಾಗಿ ನರಗುಂದ-ಕುರ್ಲಗೇರಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಇದೀಗ 4 ಕೋಟಿ 90 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ದುರಸ್ತಿ ಪಡಿಸಲಾಗುತ್ತಿದೆ. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದರು.

    ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರಗೌಡ ಪಾಟೀಲ ಮಾತನಾಡಿದರು. ಜಿಪಂ ಸದಸ್ಯೆ ರೇಣುಕಾ ಅವರಾದಿ, ಜಿ.ಎಸ್. ಆದೆಪ್ಪನವರ, ಎಸ್.ಬಿ. ಹಂಗರಗಿ, ವಿಜಯಕುಮಾರ ಬೇಲೇರಿ, ಎಂ.ಎಸ್. ಪಾಟೀಲ, ಪ್ರವೀಣ ಬ್ಯಾಹಟ್ಟಿ, ಹನಮಂತಗೌಡ ಪಾಟೀಲ, ಮುತ್ತನಗೌಡ ಪಾಟೀಲ, ಶಂಕ್ರಪ್ಪ ಬ್ಯಾಹಟ್ಟಿ, ಆನಂದ ಚಂದ್ರತ್ನವರ, ಬಸವರಾಜ ಬ್ಯಾಹಟ್ಟಿ, ಮುದುಕಯ್ಯ ಹಿರೇಮಠ, ಶಿಕ್ಷಕ ಅರವಿಂದ ಮೇಗೂರ ಉಪಸ್ಥಿತರಿದ್ದರು.

    ಮಳೆಗೂ ಬಿಎಸ್​ವೈ ಸರ್ಕಾರಕ್ಕೂ ಅವಿನಾಭಾವ ಸಂಬಂಧ

    ಮಳೆಗೂ ಮತ್ತು ಬಿ.ಎಸ್. ಯಡಿಯೂರಪ್ಪನವರ ಸರ್ಕಾರಕ್ಕೂ ಅದೇನೋ ಅವಿನಾಭಾವ ಸಂಬಂಧವಿದ್ದಂತಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ವಿಪರೀತ ಮಳೆ ಸುರಿದು ರಸ್ತೆಗಳೆಲ್ಲ ಹಾಳಾಗಿ, ಮನೆಗಳು ಬೀಳುತ್ತವೆ. ಇದೀಗ ಕರೊನಾದಿಂದಾಗಿ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮತ್ತೆ ಕೈಗೆತ್ತಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಮತ ಕ್ಷೇತ್ರದಾದ್ಯಂತ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಹಂತಹಂತವಾಗಿ ನಡೆಸಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts