More

    ಗಾರ್ಮೆಂಟ್ಸ್ ನೌಕರರ ನೆರವಿಗೆ ಧಾವಿಸಿದ ಸಂಸದೆ

    ಶ್ರೀರಂಗಪಟ್ಟಣ: ಗಾರ್ಮೆಂಟ್ಸ್ ಉದ್ಯೋಗವನ್ನೇ ನಂಬಿ ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳಿಗೆ ನ್ಯಾಯ ಒದಗಿಸುವ ಸಲುವಾಗಿ ಸರ್ಕಾರ ಹಾಗೂ ಕಂಪನಿಯ ಮುಖ್ಯಸ್ಥರೊಂದಿಗೆ ಶೀಘ್ರವೇ ಚರ್ಚಿಸಿ ಪರಿಹಾರ ಕೊಡಿಸುವ ಭರವಸೆಯನ್ನು ಸಂಸದೆ ಸುಮಲತಾ ಅಂಬರೀಷ್ ನೀಡಿದರು.

    ಪಟ್ಟಣದ ಬೆಂ-ಮೈ ಹೆದ್ದಾರಿ ಪಕ್ಕದ ಚೆಕ್‌ಪೋಸ್ಟ್ ಬಳಿಯ ಯೂರೊ ಕ್ಲಾತಿಂಗ್ ಗಾರ್ಮೆಂಟ್ಸ್‌ನಲ್ಲಿ ಕಾನೂನುಬಾಹಿರವಾಗಿ ಲೇ-ಆಫ್ ನೋಟಿಸ್ ಅಂಟಿಸಿದ ಪರಿಣಾಮ ಸಾವಿರಾರು ನೌಕರರು ಅಹೋರಾತ್ರಿ ಧರಣಿ ನಡೆಸುತ್ತಿದ್ದ ವಿಚಾರ ತಿಳಿದ ಸಂಸದೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

    ಸ್ತ್ರೀ ಶಕ್ತಿ ಸಂಘಗಳ ಸಾಲ, ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಗಾರ್ಮೆಂಟ್ಸ್‌ನಲ್ಲಿ ದುಡಿಯುತ್ತಿರುವ ಮಹಿಳೆಯರ ಕಷ್ಟ ಅರಿವಿಗಿದೆ. ಇಂತಹ ಮಾಲೀಕರ ತೀರ್ಮಾನದಿಂದ ಎಷ್ಟೋ ಕುಟುಂಬಗಳು ಬೀದಿ ಪಾಲಾಗುತ್ತಿರುವ ನಿದರ್ಶನವಿದೆ. ಈ ವಿಚಾರದ ಬಗ್ಗೆ ಸರ್ಕಾರ, ಕಾರ್ಮಿಕ ಸಚಿವರು ಹಾಗೂ ಕಂಪನಿ ಮುಖ್ಯಸ್ಥರೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸಲಾಗುವುದು ಎಂದರು.

    ಮಾಜಿ ಶಾಸಕ ರಮೇಶಬಂಡಿಸಿದ್ದೇಗೌಡ ಮಾತನಾಡಿ, ಹಲವು ವರ್ಷಗಳಿಂದ ಸುಸ್ಥಿತಿಯಲ್ಲಿ ನಡೆಯುತ್ತಿದ್ದ ಗಾರ್ಮೆಂಟ್ಸ್‌ನವರು ಕರೊನಾ ಕಾರಣದಿಂದ ಈ ತೀರ್ಮಾನಕ್ಕೆ ಬಂದಿದ್ದಾರೆ. ಮಾಲೀಕರು ಗಾರ್ಮೆಂಟ್ಸ್ ಮುಚ್ಚದೆ, ಲೇ ಆಫ್‌ಗೆ ಅವಕಾಶ ಕೊಡದೆ ಮುಂದುವರಿಸುವ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ 1400 ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗಲಿವೆ ಎಂದು ಹೇಳಿದರು.

    ಅಮಾನವೀಯ ನಡೆ: ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರಿಗೆ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ನೀಡದೆ ಗಾರ್ಮೆಂಟ್ಸ್ ಕಂಪನಿಯವರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಸಾವಿರಾರು ಮಹಿಳೆಯರು ಚಳಿಯಲ್ಲೇ ರಾತ್ರಿ ಪೂರ ಕಳೆಯಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿದರು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts